Headlines

93 ವರ್ಷದ ಹಿರಿಯ ಪತ್ರಕರ್ತ ಎಸ್.ಜಿ.ರಂಗನಾಥ ದಂಪತಿಯಿಂದ ಮತದಾನ | ಶೃಂಗಾರಗೊಂಡ ಸಖಿ ಪಿಂಕ್ ಮತಗಟ್ಟೆ ಕೇಂದ್ರ

93 ವರ್ಷದ ಹಿರಿಯ ಪತ್ರಕರ್ತ ಎಸ್.ಜಿ.ರಂಗನಾಥ ದಂಪತಿಯಿಂದ ಮತದಾನ


ರಿಪ್ಪನ್‌ಪೇಟೆ;- ಆರಸಾಳಿನ ಹಿರಿಯ ಪತ್ರಕರ್ತ 93 ವರ್ಷದ ಎಸ್.ಜಿ.ರಂಗನಾಥ ಮತ್ತು ಹಿರಿಯ ಸ್ವಾತಂತ್ರ ಹೋರಾಟಗಾರ ದಿ.ಹುಂಚ ರಂಗರಾಯರ ಮಗಳು ನನ್ನ ಪತ್ನಿ 85 ವರ್ಷದ ಶ್ರೀಮತಿ ಶಾಂತಾರೊಂದಿಗೆ ಅರಸಾಳಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಯಾರ ಸಹಾಯವೂ ಇಲ್ಲದೆ ಮತಚಲಾವಣೆ ಮಾಡಿದರು.

1957 ರಲ್ಲಿ ನಡೆದ ದೇಶದ ಎರಡನೇ ಸಾರ್ವತ್ರಿಕ ಚುನಾವಣೆಯಿಂದಲೂ ಮತದಾನ ಮಾಡುತ್ತಿರುವುದಾಗಿ ತಮ್ಮ ಅನುಭವವನ್ನು ಮಾಧ್ಯಮ ಪ್ರತಿನಿಧಿಗಳ ಬಳಿ ಹಂಚಿಕೊಂಡ ಅವರು 1957 ರ ಚುನಾವಣೆಯಲ್ಲಿ ಅರಸಾಳು ಮತಗಟ್ಟೆಯಲ್ಲಿ ಶೇಕಡಾ 97 ರಷ್ಟು ಪಕ್ಕದ ಕೆಂಚನಾಲ ಮತಗಟ್ಟೆಯಲ್ಲಿ ಶೇಕಡಾ 99 ರಷ್ಟು ಮತದಾನವಾಗಿದ್ದನ್ನು ನೆನಪುಮಾಡಿಕೊಂಡರು.

 ಶೃಂಗಾರಗೊಂಡ ಸಖಿ ಮತಗಟ್ಟೆ


ರಿಪ್ಪನ್‌ಪೇಟೆ ; ಮೇ. 7 ರಂದು ನಡೆದ ಶಿವಮೊಗ್ಗ ಲೋಕಸಭಾ ಚುನಾವಣೆಯ ಕೆರೆಹಳ್ಳಿ ಮತಗಟ್ಟೆಯನ್ನು ಸಖಿ ಮತಗಟ್ಟೆಯಾಗಿ ಪರಿವರ್ತನೆಗೊಳಿಸಿದ್ದು ಇಲ್ಲಿ.ಪಿ.ಆರ್.ಓ. ಎಪಿಆರ್‌ಓ ಮತಗಟ್ಟೆ ಸಿಬ್ಬಂದಿಗಳು ಮಹಿಳೆಯರೇ ಅಗಿದ್ದು ಒಟ್ಟು 583 ಮತದಾರರಿದ್ದು ಪುರುಷ ಮತದಾರ 291 ಮಹಿಳಾ ಮತದಾರ 292 ಸಂಖ್ಯೆಯಲ್ಲಿದ್ದರು.ಶೇಕಡ 80 ಮತದಾನ ಅಗಿದೆ.

ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಪಟ್ಟಣ ಪ್ರದೇಶದಲ್ಲಿ ಶೇಕಡಾ 75 ಗ್ರಾಮೀಣ ಪ್ರದೇಶದಲ್ಲಿ ಶೇಕಡಾ 80 ರಷ್ಟು ಮತದಾನವಾಗಿದೆ.

Leave a Reply

Your email address will not be published. Required fields are marked *