ಜೇನುಗೂಡಿಗೆ ಕೈ ಹಾಕಿ ಸಿಹಿಜೇನು ಸವಿದ ಹರತಾಳು ಹಾಲಪ್ಪ – ವೀಡಿಯೋ ವೈರಲ್ | Viral
ಲೋಕಸಭಾ ಚುನಾವಣೆಯ ನಂತರ ರಿಲ್ಯಾಕ್ಸ್ ಮೂಡ್ ನಲ್ಲಿರುವ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಯಾವುದೇ ಅಂಜಿಕೆಯಿಲ್ಲದೇ ಜೇನು ಗೂಡಿಗೆ ಕೈ ಹಾಕಿ ತುಪ್ಪ ಸವಿದಿರುವ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮಕ್ಕೆ ಖಾಸಗಿ ಕಾರ್ಯ ನಿಮಿತ್ತ ತೆರಳಿದ್ದ ವೇಳೆಯಲ್ಲಿ ಮಣ್ಣಿನ ಹುತ್ತದೊಳಗೆ ಗೂಡು ಕಟ್ಟಿದ್ದ ತುಡವೆ ಜೇನನ್ನು ಸವಿದಿದ್ದಾರೆ.
ಮೂಲತಃ ಮುಳುಗಡೆ ಪ್ರದೇಶದವರಾದ ಹರತಾಳು ಹಾಲಪ್ಪ ನವರಿಗೆ ಮಲೆನಾಡಿನ ಹಳ್ಳಿ ಸೊಗಡಿನ ಬಗ್ಗೆ ವಿಶೇಷವಾದ ಆಸಕ್ತಿ ಈ ಹಿಂದೆ ಹಿನ್ನೀರಿನಲ್ಲಿ ಮೀನು ಮೊಟ್ಟೆ ಇಟ್ಟು ಮರಿ ಮಾಡುವ ಪ್ರಕ್ರಿಯೆ ಬಗ್ಗೆ ಸವಿವರವಾಗಿ ಹಂಚಿಕೊಂಡಿದ್ದು ಮಾದ್ಯಮದವರನ್ನೆ ಬೆಚ್ಚಿಬೀಳಿಸಿತ್ತು.
ಹೀಗೆ ಮಲೆನಾಡಿನ ಸೊಗಡಿನ ಬಗ್ಗೆ ಸಾಕಷ್ಟು ಮಾಹಿತಿಯಿರುವ ಹಾಲಪ್ಪನವರಿಗೆ ಆವಿನಹಳ್ಳಿ ಸಮೀಪದ ಗುಳೆಹಳ್ಳಿ ಮಾರ್ಗ ತೆರಳುತ್ತಿರುವಾಗ ತುಡುವೆ ಜೇನಿನ ಹಾರಾಟವನ್ನು ಕಂಡು ಗಮನಿಸಿ ಸ್ನೇಹಿತರೊಂದಿಗೆ ತುಡುವೆ ಜೇನು ಗೂಡು ಕಟ್ಟಿದ್ದ ಹುತ್ತದ ಬಳಿ ತೆರಳಿ ಬಾಲ್ಯದಲ್ಲಿ ಜೇನು ಕಿತ್ತು ತಿನ್ನುತಿದ್ದ ನೆನಪುಗಳನ್ನು ಮೆಲುಕು ಹಾಕುತ್ತಾ ಜೇನು ತಟ್ಟಿಯನ್ನು ಹುತ್ತದಿಂದ ಸ್ವತಃ ಹಾಲಪ್ಪನವರೇ ಕಿತ್ತು ತಿನ್ನುತ್ತಿರುವ ವೀಡಿಯೋ ಇದೀಗ ಎಲ್ಲೇಡೆ ಸದ್ದು ಮಾಡುತ್ತಿದೆ.
ಸಾಮಾನ್ಯವಾಗಿ ಹರತಾಳು ಹಾಲಪ್ಪನವರು ಭಾಷಣ ಮಾಡುವಾಗ ಮಲೆನಾಡಿನ ಸೊಗಡಿನ ಬಗ್ಗೆ ವಿಭಿನ್ನವಾಗಿ ಅವರದೇ ಶೈಲಿಯಲ್ಲಿ ವಿವರಿಸುವ ಶೈಲಿ ಬಗ್ಗೆ ಅವರ ರಾಜಕೀಯ ವಿರೋಧಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.