ಬೈಕ್ ಕಳ್ಳತನಗೈದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು – ಇಬ್ಬರ ಬಂಧನ,ಎರಡು ಬೈಕ್ ವಶಕ್ಕೆ | Bike Theft
ಬೈಕ್ ಕಳ್ಳತನವಾಗಿದ್ದ ಪ್ರಕರಣವೊಂದರ ಬೆನ್ನತ್ತಿದ್ದ ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬೈಕ್‌ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಓರ್ವ ಅಪ್ರಾಪ್ತ ಸೇರಿ ಇಬ್ಬರನ್ನೂ ಬಂಧಿಸಿದ್ದಾರೆ.
ಬೈಕ್ ಕಳ್ಳತನದ ಪ್ರಮುಖ ಆರೋಪಿ 1.ಅಲ್ಲಾ ಭಕ್ಷ್ @ ಹರ್ಬಾಜ್ @ ಪೊಟ್ಯಾಟೋ, 19 ವರ್ಷ, ಅಂಬೇಡ್ಕರ್ ನಗರ, ಶಿವಮೊಗ್ಗ ಟೌನ್. ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆದು ಸದರಿಯವರಿಂದ ಅಂದಾಜು ಮೌಲ್ಯ 90,000/- ರೂಗಳ 02 ಬೈಕ್ ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ದಿನಾಂಕಃ 14-05-2024 ರಂದು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕನಗರದ ವಾಸಿ ಶಿವು, 35 ವರ್ಷ ರವರು ತಮ್ಮ ವಾಸದ ಮನೆಯ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಕಲಂ 379 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು.
ಪ್ರಕರಣ ಕುರಿತು ತನಿಖೆ ಆರಂಭಿಸಿದ ಬಸವರಾಜ್, ಪಿಐ ಕುಂಸಿ ಪೊಲೀಸ್ ಠಾಣೆ, ಶಾಂತರಾಜ್, ಪಿಎಸ್ಐ ಪಿ,ಮತ್ತು ಸಿಬ್ಬಂದಿಗಳಾದ ಸಿಹೆಚ್ಸಿ, ಪ್ರಕಾಶ್, ಎ.ಹೆಚ್.ಸಿ ಶಿವಪ್ಪ ಸಿಪಿಸಿ ರವರಾದ ಶಶಿಧರ, ರಾಜು ಕಾಂಬ್ಳೆ, ಬುರಾನ್, ಆದರ್ಶ, ವಿನಾಯಕ ಬಿ.ಟಿ, ಶಶಿಕುಮಾರ್, ಮಂಜುನಾಥ, ದಿನೇಶ್ ರಾವ್, ಜಯ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ವಿಭಾಗದ ಸಿಬ್ಬಂಧಿಗಳಾದ ಗುರುರಾಜ್, ಇಂದ್ರೇಶ್, ಮತ್ತು ವಿಜಯ್ ಕುಮಾರ್ ಸದ್ಯ ಆರೋಪಿಗಳನ್ನು ಬಂಧಿಸಿದ್ದಾರೆ.