ಉಡ ಬೇಟೆ – ನಾಡ ಬಂದೂಕು ಸಹಿತ ಇಬ್ಬರ ಬಂಧನ | Bengal monitor
ಉಡ (Bengal monitor) ಬೇಟೆಯಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನ ಅಂಬ್ಲಿಗೋಳ ಅರಣ್ಯ ಇಲಾಖೆಯವರು ಬಂಧಿಸಲಾಗಿದೆ.
ಆರೋಪಿಗಳಿಂದ ಅಕ್ರಮ ಕಂಟ್ರಿ ಮೇಡ್ ರೈಫಲ್, ಬೇಟೆಯಾಡಿದ 3.220 ಕೆಜಿ ಉಡದ ಮೃತದೇಹ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಗಳಾದ ಶಿಕಾರಿಪುರ ತಾಲೂಕಿನ ಮಂಜಪ್ಪ(60), ಈಶ್ವರಪ್ಪ (38) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಅಂಬ್ಲಿಗೊಳ ವಲಯ ವ್ಯಾಪ್ತಿ ಒಳಗೊಂಡ ಡಿಎಫ್‌ಒ ಸಂತೋಷ್ ಕುಮಾರ್, ಎಸಿಎಫ್ ಸುರೇಶ್ ಬಿ, ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯ್ಲಲಿ, ಆರ್‌ಎಫ್‌ಒ ಮಾಧವ ದೊಡ್ಡಬಾಡಗಿ, ಡಿಆರ್‌ಎಫ್‌ಒ ಪ್ರಕಾಶ್ ದೊಡ್ಡಮನಿ ನೇತೃತ್ವದ ಚಂದ್ರಪ್ಪ ಲಮಾಣಿ, ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.