Headlines

Ripponpete | ಮನೆಮನೆಗೆ ತೆರಳಿ ಮತ ಯಾಚಿಸುತ್ತಿರುವ ಬಿಜೆಪಿ ಕಾರ್ಯಕರ್ತರು

“ಮನೆಮನೆಗೆ ತೆರಳಿ ಮತಯಾಚಿಸುತ್ತಿರುವ ಬಿಜೆಪಿ ಕಾರ್ಯಕರ್ತರು’’


ರಿಪ್ಪನ್‌ಪೇಟೆ;-ಬರುವೆ ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಬಿಜೆಪಿ ಆಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚಿಸಿದರು.

ತಾಲ್ಲೂಕ್ ಪಂಚಾಯ್ತಿ ಮಾಜಿ ಆಧ್ಯಕ್ಷೆ ಜಿಲ್ಲಾ ಬಿಜೆಪಿ ಮಹಿಳಾ ಮುಖಂಡೆ ನಾಗರತ್ನ ದೇವರಾಜ್ ಮಾಧ್ಯಮದವರೊಂದಿಗೆ ಮಾತನಾಡಿ ಈ ಭಾರಿಯಲ್ಲಿಯೂ ನಮ್ಮ ರಾಘಣ್ಣರ ಗೆಲುವು ನಿಶ್ಚಿತ ಕಾರಣ ರಾಘಣ್ಣನವರು ಈ ಐದು ವರ್ಷದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುಧಾನವನ್ನು ತರುವುದರೊಂದಿಗೆ ಸಾಕಷ್ಟು ಆಭಿವೃದ್ದೀಪಡಿಸಿದ್ದಾರೆ.


ತಾಳುಗುಪ್ಪ ಸಾಗರ ಶಿವಮೊಗ್ಗ ಬೆಂಗಳೂರು ಮೈಸೂರು ಇಂಟರ್ ಸಿಟಿ ರೈಲು ಅರಸಾಳು ಮಾ ಡೇಸ್ ನಿಲ್ದಾಣದಲ್ಲಿ ನಿಲುಗಡೆ ಮಾಡುವುದರೊಂದಿಗೆ ಬಹುವರ್ಷದ ಬೇಡಿಕೆ ಸ್ಪಂದಿಸಿ ಈ ಮಲೆನಾಡಿನ ಭಾಗದ ರೈಲ್ವೆ ಪ್ರಯಣಿಕರಿಗೆ ಹೆಚ್ಚು ಅನುಕೂಲ ಕಲ್ಪಿಸಿರುವುದು.ಸಾಮಾನ್ಯ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಮೂಲಕ ಜನಾನುರಾಗಿ ಆಗಿರುವ ರಾಘಣ್ಣ ಈ ಭಾರಿಯಲ್ಲಿಯೂ ಹೆಚ್ಚಿನ ಮತಗಳ ಅಂತರದಿಂದ ಜಯಭೇರಿ ಬಾರಿಸಲು ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸುತ್ತಿದ್ದು ಮತದಾರರಿಗೆ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ಕೆರೆಹಳ್ಳಿ ಬೂತ ಅಧ್ಯಕ್ಷರಾದ ಈಶ್ವರ ರಾವ್, ಕೇತಾರ್ಜಿರಾವ್,ಮುರುಳಿ ಕೆರೆಹಳ್ಳಿ,ಕುಸುಮಾ,ರೇಣುಕಾಬಾಯಿ
ಲಕ್ಷಿ, ಗೀತಾ, ಪುಪ್ಪಾವತಿ, ಅರ್ಜುನ,ಗಂಗಮ್ಮ,ಇನ್ನಿತರ ಕಾರ್ಯಕರ್ತರ ತಂಡ ಕೆರೆಹಳ್ಳಿಯ ವ್ಯಾಪ್ತಿಯ ಮನೆಮನೆಗೆ ತರೆಳಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ನಡೆಸಿದರು.

“ಏಪ್ರಿಲ್ 23 ರಂದು ಕಲಾಹೋಮ ಚಂಡಿಕಾಯಾಗ ಕುಂಭಾಭಿಷೇಕ ನವಗ್ರಹ ಹೋಮ’’

ರಿಪ್ಪನ್‌ಪೇಟೆ;- ಇಲ್ಲಿನ ವಿನಾಯಕ ನಗರ ಬಡಾವಣೆಯಲ್ಲಿನ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ 25 ನೇ ವರ್ಷದ ವಾರ್ಷೀಕೋತ್ಸವ  ಕಾರ್ಯಕ್ರಮವು ಏಪ್ರಿಲ್ 23 ರಂದು ಮಂಗಳವಾರ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

25 ನೇ ವರ್ಷದ ವಾರ್ಷೀಕೋತ್ಸವ  ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಶ್ರೀದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಲಾಹೋಮ,ಚಂಡಿಕಾ ಯಾಗ,ಕುಂಭಾಭಿಷೇಕ,ನವಗ್ರಹ ಹೋಮ,ಸಾಮೂಹಿಕ ಸತ್ಯನಾರಾಯಣ ಪೂಜೆ ತೀರ್ಥ ಪ್ರಸಾದ್ ವಿತರಣೆ ನಂತರ ಸಾಮೂಹಿಕ ಆನ್ನಸಂತರ್ಪಣೆ ಜರುಗಲಿದೆ ಎಂದು ದೇವಸ್ಥಾನ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *