KSRTC ಬಸ್ ಹಾಗೂ ಓಮಿನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿ – ಮೂವರು ಸಾವು ,ಹಲವರು ಗಂಭೀರ
ಕೆಎಸ್ಆರ್ಟಿಸಿ ಬಸ್ ಹಾಗೂ ಒಮಿನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ – ಶಿಕಾರಿಪುರ ಮಾರ್ಗದಲ್ಲಿ ನಡೆದಿದೆ.
ಶಿವಮೊಗ್ಗ-ಶಿಕಾರಿಪುರ ಮಾರ್ಗದ ಚಿನ್ನಿಕಟ್ಟೆ ಬಿದರಳ್ಳಿ ಗ್ರಾಮದ ಬಳಿ KSRTC ಬಸ್ ಒಮಿನಿ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಓಮಿನಿ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದು ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದೆ.
ಒಮಿನಿ ಕಾರಿನಲ್ಲಿ ಸೂರಗೊಂಡನಕೊಪ್ಪದಿಂದ ನಾಲ್ವರು ಶಿಕಾರಿಪುರದ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಮೃತಪಟ್ಟವರಲ್ಲಿ ಓರ್ವ ಹರಮಘಟ್ಟದವನು ಹಾಗೂ ಇನ್ನಿಬ್ಬರು ಸೂರಗೊಂಡನಕೊಪ್ಪದವರು ಎಂದು ತಿಳಿದುಬಂದಿದ್ದು, ಅವರ ಗುರುತು ಇನ್ನಷ್ಟೆ ಗೊತ್ತಾಗಬೇಕಿದೆ.  ಒಮಿನಿಯಲ್ಲಿದ್ದ ಇನ್ನೊಬ್ಬರಿಗೂ ಗಂಭೀರವಾದ ಗಾಯವಾಗಿದ್ದು ಅವರನ್ನ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ರವಾನಿಸಲಾಗಿದೆ ಎಮ್ದು ತಿಳಿದುಬಂದಿದೆ.
KSRTC ಬಸ್ ಒಮಿನಿಗೆ ಡಿಕ್ಕಿಯಾಗಿ ರಸ್ತೆಪಕ್ಕದ ತಡೆಗೋಡೆಗೆ ಗುದ್ದಿದ್ದು ಬಸ್ನ ಮುಂದಿನ ಚಕ್ರ ಕಳಚಿಹೋಗಿದ್ದು ಬಸ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. 
ಘಟನೆಯಲ್ಲಿ ಮಾರುತಿ ಒಮಿನಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು ಮೃತದೇಹಗಳು ಛಿದ್ರಗೊಂಡಿವೆ. 
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
		 
                         
                         
                         
                         
                         
                         
                         
                         
                         
                        

