ಶಿವಮೊಗ್ಗಕ್ಕೆ ಈಶ್ವರಪ್ಪ ಕೊಡುಗೆ ಏನು – ಬಿ ವೈ ವಿಜಯೇಂದ್ರ | BYV

ಶಿವಮೊಗ್ಗಕ್ಕೆ ಈಶ್ವರಪ್ಪ ಕೊಡುಗೆ ಏನು – ಬಿ ವೈ ವಿಜಯೇಂದ್ರ


ಬಿಜೆಪಿ ವಿರುದ್ಧ ಬಂಡಾಯವೆದ್ದು, ಶಿವಮೊಗ್ಗದಿಂದ ಸ್ಪರ್ಧಿಸುತ್ತಿರುವ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ  ಪರ ಪ್ರಚಾರ ನಡೆಸಿದ ಅವರು, ಈಶ್ವರಪ್ಪ ನಾಮಪತ್ರ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ರು. ಈ ಹಿಂದೆ ಈಶ್ವರಪ್ಪ ಸಚಿವರು, ಡಿಸಿಎಂ ಆಗಿದ್ದರು. ಹಾಗಿದ್ದರೂ ಶಿವಮೊಗ್ಗಕ್ಕೆ ಅವರ ಕೊಡುಗೆ ಏನು ಅಂತ ಪ್ರಶ್ನಿಸಿದ್ರು. ಬಿವೈ ರಾಘವೇಂದ್ರ (BY Raghavendra) ಈ ಬಾರಿಯೂ ಗೆದ್ದು ಬರುತ್ತಾರೆ, ಶಿವಮೊಗ್ಗದ ಜನ ಈಶ್ವರಪ್ಪನವರಿಗೆ ಪಾಠ ಕಲಿಸುತ್ತಾರೆ ಅಂತ ವಿಜಯೇಂದ್ರ ಭವಿಷ್ಯ ನುಡಿದ್ರು.

ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಎಂದ ವಿಜಯೇಂದ್ರ

ತಮ್ಮ ಪುತ್ರ ಕಾಂತೇಶ್‌ಗೆ ಹಾವೇರಿ ಟಿಕೆಟ್ ಸಿಗದೇ ಇರೋದಕ್ಕೆ ಬಿಎಸ್‌ ಯಡಿಯೂರಪ್ಪ ಕಾರಣ ಅಂತ ಈಶ್ವರಪ್ಪ ಆರೋಪಿಸಿದ್ದರು. ಅಪ್ಪ-ಮಕ್ಕಳಿಂದ ಬಿಜೆಪಿ ಹಾಳಾಗುತ್ತಿದೆ ಅಂತ ಯಡಿಯೂರಪ್ಪ ಹಾಗೂ ಪುತ್ರರ ವಿರುದ್ಧ ಆರೋಪಿಸಿದ್ದರು. ಶಿವಮೊಗ್ಗದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಈಶ್ವರಪ್ಪ ವಿರುದ್ಧ ಬಿಜೆಪಿಯಿಂದ ಶಿಸ್ತುಕ್ರಮ ಕೈಗೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಈಶ್ವರಪ್ಪ ವಿರುದ್ಧ ಶಿವಮೊಗ್ಗ ಕ್ಷೇತ್ರದ ಮತದಾರರು ಕೂಡ ಕ್ರಮ ಕೈಗೊಳ್ತಾರೆ ಎಂದ ವಿಜಯೇಂದ್ರ, ಈಶ್ವರಪ್ಪ ಅವರು ಎಷ್ಟೆಷ್ಟು ಮಾತಾಡ್ತಾರೆ ಅದರ ದುಪ್ಪಟ್ಟು ಮತಗಳು ರಾಘವೇಂದ್ರ ಅವರಿಗೆ ಬೀಳುತ್ತವೆ ಅಂತ ಹೇಳಿದ್ರು. ರಾಘವೇಂದ್ರ ಅವರು ಒಬ್ಬ ಜನಪ್ರಿಯ ಸಂಸದರಾಗಿದ್ದಾರೆ. ಈ ರೀತಿಯ ಪುಕ್ಸಟ್ಟೆ ಮಾತಗಳನ್ನು ಜನರು ಗಮನಿಸುತ್ತಾರೆ ಅಂತ ಹೇಳಿದ್ರು.

ಶಿವಮೊಗ್ಗಕ್ಕೆ ಈಶ್ವರಪ್ಪ ಅವರ ಕೊಡುಗೆ ಏನು?

ಈಶ್ವರಪ್ಪ ಅವರು ಈ ಹಿಂದೆ ಮಂತ್ರಿಯಾಗಿ ಶಿವಮೊಗ್ಗಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ಉಪಮುಖ್ಯಮಂತ್ರಿಯಾಗಿ ಶಿವಮೊಗ್ಗ ಜಿಲ್ಲೆಗೆ ಅವರ ಕೊಡುಗೆ ಏನು ಅಂತ ವಿಜಯೇಂದ್ರ ಪ್ರಶ್ನಿಸಿದ್ರು.

ರಾಘವೇಂದ್ರ, ಯಡಿಯೂರಪ್ಪ ಕೊಡುಗೆ ಬಗ್ಗೆ ಜನಕ್ಕೆ ಗೊತ್ತು

ರಾಘವೇಂದ್ರ ಅವರು ಸಂಸದರಾಗಿ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ, ಯಡಿಯೂರಪ್ಪ ಅವರು ಜಿಲ್ಲೆಗೆ, ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಮನೆ ಮನೆಯಲ್ಲೂ ಮಾತನಾಡುತ್ತಾರೆ ಅಂತ ವಿಜಯೇಂದ್ರ ಹೇಳಿದ್ದರು. ಈಶ್ವರಪ್ಪ ಅವರಿಂದ ಕಲಿಯಬೇಕಾದ ಅವಶ್ಯಕತೆ ಇಲ್ಲ ಅಂತ ತಿರುಗೇಟು ನೀಡಿದ್ರು.

ಈಶ್ವರಪ್ಪನವರಿಗೆ ಜನ ಬುದ್ಧಿ ಕಲಿಸುತ್ತಾರೆ

ಇವತ್ತು ಸಂಸದರಾಗಿರುವ ರಾಘವೇಂದ್ರ ಅವರು ಎರಡು ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆದ್ದು ಬರ್ತಾರೆ. ಈಶ್ವರಪ್ಪ ಅವರಿಗೆ ಜನ ಏನು ಬುದ್ದಿ ಕಲಿಸಬೇಕೋ ಕಲಿಸುತ್ತಾರೆ ಅಂತ ವಿಜಯೇಂದ್ರ ತಿರುಗೇಟು ಕೊಟ್ರು.

Leave a Reply

Your email address will not be published. Required fields are marked *