Headlines

ರಾಜ್ಯಾಧ್ಯಕ್ಷರನ್ನು ಬದಲಾಯಿಸಿದರೆ ಲೋಕಸಭಾ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವೆ – ಕೆ ಎಸ್ ಈಶ್ವರಪ್ಪ | KSE

ರಾಜ್ಯಾಧ್ಯಕ್ಷರನ್ನು ಬದಲಾಯಿಸಿದರೆ ಲೋಕಸಭಾ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವೆ – ಕೆ ಎಸ್ ಈಶ್ವರಪ್ಪ | KSE


ಶಿವಮೊಗ್ಗ : ನಾಳೆ ಬೆಳಗ್ಗೆ ರಾಜ್ಯಾಧ್ಯಕ್ಷರನ್ನ‌ ಬದಲಿಸಿದರೆ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವೆ. ಈಶ್ವರಪ್ಪ ಸ್ಪರ್ಧೆಯಿಂದ ರಾಜ್ಯಾಧ್ಯಕ್ಷರ ಬದಲಾವಣೆ ಆಗುವುದದರೆ ನಾನು ಸ್ಪರ್ಧಿಸಿ ಏನು ಮಾಡಲಿ ಎಂದು  ಕೆ ಎಸ್ ಈಶ್ವರಪ್ಪ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿದ ಅವರು ಅಮಿತ್ ಶಾ ಕರೆ ಮಾಡಿದ್ರು. ಅವರಿಗೆ ಒಂದು ಕುಟುಂಬದ ಕೈಯಲ್ಲಿ ಪಕ್ಷವಿದೆ. ಕಾಂಗ್ರೆಸ್ ಸಂಸ್ಕೃತಿ ಬಿಜೆಪಿಯಲ್ಲಿ ಬೆಳೆಯುತ್ತಿದೆ. ಅಪ್ಪಮಕ್ಕಳ ಕೈಯಲ್ಲಿರುವ ಪಕ್ಷವನ್ನ‌ ಮುಕ್ತಿಗೋಳಿಸಬೇಕಿದೆ ಎಂದು ಹೇಳಿದ್ದೇನೆ.

ಹಿಂದುತ್ವದ ಪರವಾಗಿ ನಾನು ಸ್ಪರ್ಧಿಸುತ್ತಿರುವುದಾಗಿ ಹಾಗೂ ಪ್ರತಾಪ್ ಸಿಂಹ, ಸಿ.ಟಿ ರವಿ, ಸದಾನಂದಗೌಡ ಪರವಾಗಿ, ಈ ಚುನಾವಣೆಯಲ್ಲಿ ಹಿಂದುಳಿದವರಿಗೆ ಟಿಕೆಟ್ ನೀಡಿಲ್ಲ. ಹಾಗಾಗಿ ಸ್ಪರ್ಧಿಸುತ್ತಿರುವುದಾಗಿ ಅಮಿತ್ ಶಾ‌ಗೆ ಹೇಳಿರುವೆ ಎಂದರು.

ಅಮಿತ್ ಶಾ ಸ್ಪರ್ಧೆ ಬೇಡ ಎಂದಿದ್ದಾರೆ. ದೆಹಲಿಗೆ ಕರೆದಿದ್ದಾರೆ. ಅವರಿಗೆ ನಾನು ಸ್ಪರ್ಧಿಸುವುದರಿಂದ ಪಕ್ಷದಲ್ಲಿ ಶುದ್ಧೀಕರಣ ಮಾಡುವುದಾಗಿ ತಿಳಿಸಿರುವೆ. ದೊಡ್ಡವರ ಮಾತನ್ನ ನಾನು ಮೀರುವುದಿಲ್ಲ. ದೆಹಲಿಗೆ ಬಂದ ನಂತರ ಸ್ಪರ್ಧೆ ಬೇಡ ಎನ್ನುವ ಹಾಗಿಲ್ಲ ಎಂದು ತಿಳಿಸಿದ್ದೇನೆ. ಸೂಚನೆ ಅಲ್ಲ ಪ್ರಾರ್ಥಿಸುವುದಾಗಿ ಶಾ ಹೇಳಿದರು, ನೀವು ದೊಡ್ಡವರು ನಾನು ನಿಮ್ಮ ಜೊತೆ ವಾದಿಸೊದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.

ನಾಳೆ ಹೋಗಿ ನಾಳೆ ಸಂಜೆ ಅಮಿತ್ ಶಾರನ್ನ ಭೇಟಿ ಮಡುವುದಾಗಿ ಹೇಳಿದ ಈಶ್ವರಪ್ಪ ಅಮಿತ್ ಶಾರನ್ನೇ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಒಪ್ಪಿಸಿ ಬರುವುದಾಗಿ ತಿಳಿಸಿದ್ದಾರೆ.

ಬಿಎಸ್ ವೈ ಹತ್ತಿರ ಹೋಗ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ರಂಗಣ್ಣನ ಹತ್ತಿರನೇ ಹೋಗುತ್ತಿರುವೆ ಸಿಂಗಣ್ಣನ ಜೊತೆ ನನಗೆ ಕೆಲಸವೇನು? ಬಿಎಸ್ ವೈ ನಂಬಿಕೆಗೆ ಅರ್ಹರಲ್ಲ. ನಾನು ಹಿತೈಷಿಗಳ ಕಾರ್ಯಕರ್ತರ ಮಾತುಗಳನ್ನ ಕೇಳಿರುವೆ. ಸ್ಪರ್ಧೆ ಸೂಕ್ತ ಎಂದಿದ್ದಾರೆ. ಕೆಲವರು ಬೇಡ‌ ಅಂತನೂ ಹೇಳಿದ್ದಾರೆ. ಯಾವ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *