ರಿಪ್ಪನ್‌ಪೇಟೆಯಲ್ಲಿ ಸೈಟ್ ಕೊಡಿಸುವುದಾಗಿ ಬಡ ವೃದ್ದೆಯನ್ನು ಕರೆಸಿ ಹತ್ಯೆಗೈದ ಕೋಡೂರಿನ ಮಯೂರ್ ಭಟ್ – ಖತರ್ನಾಕ್ ಕ್ರಿಮಿಯನ್ನು ಪೊಲೀಸರು ಭೇಟೆಯಾಡಿದ್ದೇ ರೋಚಕ..!!!
ಅದು ಅಪರಿಚಿತ ಮಹಿಳೆಯ ಕೊಲೆ ಪ್ರಕರಣ. ಪೊಲೀಸರಿಗೆ ಸವಾಲಾಗಿದ್ದ ಈ ಪ್ರಕರಣವನ್ನು ಕೇವಲ ಹತ್ತು ದಿನಗಳೊಳಗೆ ಬೇಧಿಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ ರಿಪ್ಪನ್‌ಪೇಟೆಯ ಚಾಣಾಕ್ಷ ಪೊಲೀಸರ ತಂಡ.
ಚಾಣಾಕ್ಷತನದಿಂದ ಕೊಲೆಗೈದು ಮೃತ ದೇಹವನ್ನು ಕೆರೆಗೆ ಬಿಸಾಡಿದ್ದ ಕೋಡೂರು ಗ್ರಾಮದ ಮಯೂರ್ ಭಟ್ ಹಾಗೂ ಕಾನೂನು ಸಂಘರ್ಷಕ್ಕೊಳ್ಳಗಾದ ಸ್ನೇಹಿತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ…
ಹೌದು… ಶಿವಮೊಗ್ಗ ಜಿಲ್ಲೆಯ ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಮಾರ್ಚ್ 18 ರಂದು ಅಪರಿಚಿತ ಮಹಿಳೆಯೊಬ್ಬರ ಶವ ದೊರಕಿದ ಮಾಹಿತಿ ರಿಪ್ಪನ್‌ಪೇಟೆ ಪೊಲೀಸರಿಗೆ ತಲುಪುತ್ತದೆ…
ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪೊಲೀಸರಿಗೆ ಇದು ಆತ್ಮಹತ್ಯೆಯಲ್ಲ ಪಕ್ಕಾ ಪ್ರೀಪ್ಲಾನ್ ಮರ್ಡರ್ ಎಂದು ಗೊತ್ತಾಗುತ್ತದೆ ಕೂಡಲೇ ಪ್ರಕರಣದ ಬೆನ್ನತ್ತಿದ ಪೊಲೀಸರು ತನಿಖೆ ಕೈಗೊಳ್ಳುತ್ತಾರೆ ಆದರೆ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಸಿಗದೇ ಮಾರ್ಚ್ 20 ರಂದು ಮಹಿಳೆಯ ವಾರಸುದಾರರ ಪತ್ತೆಗೆ ಪ್ರಕಟಣೆ ಹೊರಡಿಸುತ್ತಾರೆ…
ಹೊಳಲೂರಿನಿಂದ ಬರುತ್ತೆ ಕರೆ :
ಮೃತ ಅಪರಿಚಿತ ಮಹಿಳೆಯ ಚಹರೆಯನ್ನು ಹೋಲುವ ಹೊಳಲೂರು ಗ್ರಾಮದ ಜಯಮ್ಮ ಎಂಬುವವರು ಕಾಣೆಯಾಗಿರುವ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಕರೆ ಬರುತ್ತದೆ ನಂತರದಲ್ಲಿ ಮಹಿಳೆ ಧರಿಸಿದ್ದ ಒಡವೆ ಆಧಾರದ ಮೇಲೆ ಗುರುತು ಧೃಡವಾಗುತ್ತದೆ.
ಕೇಸ್ ಆಫ್ ಜಯಮ್ಮ ::
ಮೃತದೇಹದ ಪತ್ತೆಯಾಯಿತು ಆದರೆ ಕೊಲೆ ಯಾರು ಮಾಡಿರಬಹುದು ಎಂದು ಎಲ್ಲಾ ದೃಷ್ಟಿಕೋನಗಳಲ್ಲಿ ಪೊಲೀಸರು ತನಿಖೆ ಮಾಡುತ್ತಾರೆ ಆದರೆ ಕೊನೆಗೆ ಪ್ರಾರಂಭಿಸಿದಲ್ಲೇ ಬಂದು ನಿಲ್ಲುತ್ತಾರೆ.. ಆಗ ಪೊಲೀಸರ ತಲೆಯಲ್ಲಿ ಹಲವಾರು ಪ್ರಶ್ನೆಗಳು ಮೂಡಲಾರಂಭಿಸುತ್ತವೆ. ಹೊಳಲೂರಿನ ಮಹಿಳೆಯನ್ನು ಕೊಲೆಗೈದು ಹುಂಚದ ಮುತ್ತಿನ ಕೆರೆಯಲ್ಲಿ ಹಾಕುವ ಅವಶ್ಯಕತೆ ಏನಿರುತ್ತದೆ..?? ಒಂದು ವೇಳೆ ಆರೋಪಿ ಹೊಳಲೂರು ಕಡೆಯವನಾದರೆ ಮುತ್ತಿನಕೆರೆಯಲ್ಲಿ ಬಹಳಷ್ಟು ನೀರು ಇರುವುದು ಹೇಗೆ ತಿಳಿಯುತ್ತದೆ..?? ಕೊಲೆ ಆರೋಪಿಗೂ ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೂ ಏನು ಸಂಬಂಧ..?? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಮೂಡುವಾಗ ಪೊಲೀಸರಿಗೆ ದೊರಕುತ್ತದೆ ಆ ಒಂದು ಕ್ಲೂ….
ಆರೋಪಿ ಮಯೂರ್ ಭಟ್ ನ ಸೋದರ ಅತ್ತೆ :
ಹೌದು ಜಯಮ್ಮ ಹೊಳಲೂರು ಗ್ರಾಮದ ಮಠ ಆಸ್ಪತ್ರೆ ಹಾಗೂ ಬಟ್ಟೆ ಅಂಗಡಿಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿರುತ್ತಾಳೆ. ಜಯಮ್ಮಳಿಗೆ ಓರ್ವ ಪುತ್ರಿ ಇದ್ದು ಅವಳು ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟಿರುತ್ತಾಳೆ. ಕಷ್ಟಪಟ್ಟು ದುಡಿದ ಹಣವನ್ನು ತನ್ನ ಮೊಮ್ಮಕ್ಕಳಿಗಾಗಿ ಕೂಡಿಟ್ಟಿರುತ್ತಾಳೆ. ಜಯಮ್ಮಳಿಗೆ ಮಠದಲ್ಲಿ ಕೆಲಸ ಮಾಡುವ ಕೊಲೆ ಆರೋಪಿ ಮಯೂರ್ ಭಟ್ ಸೋದರ ಅತ್ತೆ ಸೀತಮ್ಮ ರವರ ಪರಿಚಯವಿರುತ್ತದೆ. ಆಗಾಗ ಹೊಳಲೂರಿನ ಅತ್ತೆಯ ಮನೆಗೆ ಹೋಗುತ್ತಿದ್ದ ಮಯೂರ್ ಭಟ್ ತನ್ನ ಅತ್ತೆ ಸೀತಮ್ಮ ರವರ ಸ್ನೇಹಿತೆ ಜಯಮ್ಮ ರವರೊಂದಿಗೆ ಸಣ್ಣಪುಟ್ಟ ವ್ಯವಹಾರ ಮಾಡಿರುತ್ತಾನೆ..
ಬಡ್ಡಿ ಹಣ ಕೇಳಿದ ಜಯಮ್ಮಳಿಗೆ ಸೈಟ್ ನ ಭರವಸೆ :
ಹೀಗೆ ವ್ಯವಹಾರ ಮಾಡುತ್ತಾ ಜಯಮ್ಮ ರವರ ಬಳಿ 85,000 ಹಣವನ್ನು ಸಾಲ ಪಡೆದುಕೊಂಡಿದ್ದ ಮಯೂರ್ ಭಟ್ ಆಕೆಗೆ ಹಣ ಹಿಂದಿರುಗಿಸಲು ಆಟವಾಡಿಸುತ್ತಿದ್ದ. ಇದರಿಂದ ಕೋಪಗೊಂಡಿದ್ದ ಜಯಮ್ಮ ಆಗಾಗ ಮಯೂರ್ ಭಟ್ನಿಗೆ ಕರೆ ಮಾಡಿ ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದಳು ಇದರಿಂದ ಬೇಸತ್ತ ಆರೋಪಿ ಮಯೂರ್ ಭಟ್ ಮಾಸ್ಟರ್ ಪ್ಲಾನ್ ಅನ್ನು ತಯಾರಿಸಿ ಜಯಮ್ಮ ರವರಿಗೆ ರಿಪ್ಪನ್‌ಪೇಟೆಯಲ್ಲಿ ಕಡಿಮೆ ದರದಲ್ಲಿ ಸೈಟ್ ಕೊಡಿಸುತ್ತೇನೆ ಬನ್ನಿ ಎಂದು ಪುಸಲಾಯಿಸುತ್ತಾನೆ…
ಮೊಮ್ಮಕ್ಕಳಿಗೆ ಆಸರೆಗೆ ಸೈಟ್ ಖರೀದಿಗೆ ಬಂದ ಜಯಮ್ಮ :
ಆರೋಪಿ ಮಯೂರ್ ಭಟ್ ಅನ್ನು ತೀರಾ ನಂಬಿದ್ದ ಹೊಳಲೂರಿನ ಜಯಮ್ಮ ತನ್ನ ಮೊಮ್ಮಕ್ಕಳಿಗಾಗಿ ಸೈಟ್ ಖರೀದಿಸಲು ರಿಪ್ಪನ್‌ಪೇಟೆಗೆ ಆಗಮಿಸುತ್ತಾಳೆ. ಪಟ್ಟಣಕ್ಕೆ ಆಗಮಿಸಿದ ಜಯಮ್ಮ ರನ್ನು ವಿನಾಯಕ ವೃತದಲ್ಲಿ ಸ್ನೇಹಿತನ ಮಾರುತಿ ವ್ಯಾಗನಾರ್ ಕಾರಿನಲ್ಲಿ ಮತ್ತೊಬ್ಬ ಅಪ್ರಾಪ್ತ ಸ್ನೇಹಿತನೊಂದಿಗೆ ಸೇರಿಕೊಂಡು ಪಿಕ್ ಮಾಡಿದ ಆರೋಪಿ ನೇರವಾಗಿ ಬಾಳೂರು ಪಂಚಾಯತಿ ವ್ಯಾಪ್ತಿಯ ಹರತಾಳು ಗ್ರಾಮದ ವ್ಯಾಪ್ತಿಗೆ ಕರೆದೊಯ್ಯುತ್ತಾನೆ.
ಕಾರಿನಲ್ಲಿಯೇ ಜಯಮ್ಮಳ ಹತ್ಯೆ :
ಯಾವಾಗಲೂ ಮೈತುಂಬ ಆಭರಣಗಳನ್ನು ಹಾಕಿಕೊಳ್ಳುವ ಜಯಮ್ಮ ಆ ದಿನ ಆಭರಣಗಳನ್ನು ತನ್ನ ಮನೆಯಲ್ಲಿಯೇ ಇರಿಸಿ ಬಂದಿರುವುದು ಆರೋಪಿ ಮಯೂರ್ ಭಟ್ ನ ಕಣ್ಣು ಕೆರಳಿಸಿತ್ತು,ಮಾತನಾಡುತ್ತಲೇ ಕಾರಿನಲಿಯೇ ಹಿಂಬದಿಯಿಂದ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡೆಬಿಟ್ಟಿದ್ದಾನೆ….
ಮುತ್ತಿನಕೆರೆಯಲ್ಲಿ ಮೃತದೇಹ ಬಿಸಾಡಿದ ಹಂತಕ :::
ಸಂಜೆ ಸುಮಾರು 5.30 ಸಮಯದಲ್ಲಿ ಜಯಮ್ಮನನ್ನು ಹತ್ಯೆಗೆದ ಆರೋಪಿ ಮಯೂರ್ ಭಟ್ ರಾತ್ರಿ 10.45 ರ ವರೆಗೂ ಕಾದು ವಂಶದ ಮುತ್ತಿನ ಕೆರೆಯಲ್ಲಿ ಮೃತ ದೇಹಕ್ಕೆ ಬೇಲಿ ಕಂಬ ಬಿಗಿದು ಬಿಸಾಡಿದ್ದಾನೆ.
ಒಟ್ಟಾರೆಯಾಗಿ ತುಂಬಾ ಚಾಣಾಕ್ಷತನದಿಂದ ಬಡ ಮಹಿಳೆಯನ್ನು ಅತ್ತೆಗೆದು ಕೊಲೆಯನ್ನು ಮರೆಮಾಚುವ ದೃಷ್ಟಿಯಿಂದ ಬೇಲಿಕಂಬ ಕಟ್ಟಿ ಕೆರೆಗೆ ಬಿಸಾಡಿದ ಆರೋಪಿ ಮಯೂರ್ ಭಟ್ ನನ್ನು ರಿಪ್ಪನ್ ಪೇಟೆ ಪೊಲೀಸರು ತಮ್ಮದೇ ಆದ ಶೈಲಿಯಲ್ಲಿ ತನಿಖೆ ನಡೆಸಿ ಬಂಧಿಸುವ ಮೂಲಕ ಉತ್ತಮ ಕಾರ್ಯಕ್ಷಮತೆ ಮೆರೆದಿದ್ದಾರೆ.
ಪೊಲೀಸರಿಗೆ ಜಟಿಲವಾಗಿದ್ದ ಪ್ರಕರಣವನ್ನು ಸಿಪಿಐ ಜಿಎಸ್ ಹೆಬ್ಬಾಳ್ ಹಾಗೂ ರಿಪ್ಪನ್ ಪೇಟೆಯ ಖಡಕ್ ಪಿಎಸ್ಐ ನಿಂಗರಾಜ್ ಕೆ ವೈ ನೇತೃತ್ವದಲ್ಲಿ ಚಾಣಾಕ್ಷ ಸಿಬ್ಬಂದಿಗಳಾದ ನಗರ ಪೊಲೀಸ್ ಠಾಣೆಯ ಕಿರಣ್ ಕುಮಾರ್ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಶಿವಕುಮಾರ್ ನಾಯಕ್, ಸಂತೋಷ್ ಕೊರವರ ಹೊಸನಗರ ಪೊಲೀಸ್ ಠಾಣೆಯ ಸುನಿಲ್ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಉಮೇಶ್ ಹೆಚ್ ಹಾಗೂ ಮಧುಸೂದನ್ ಹಾಗೂ ANC ತಂಡದ ವಿಜಿ ,ಇಂದ್ರೇಶ್ ಹಾಗೂ ಗುರುರಾಜ್ ರವರನ್ನು ಒಳಗೊಂಡ ತಂಡ ಪತ್ತೆ ಹಚ್ಚಿದೆ.
🖋ರಫ಼ಿ ರಿಪ್ಪನ್‌ಪೇಟೆ….