Headlines

Accident | ಜನನಿಬಿಡ ಪ್ರದೇಶದಲ್ಲಿ ಬಸ್ ಟೈರ್ ಬ್ಲಾಸ್ಟ್ | ಕೆಳಕ್ಕೆ ಬಿದ್ದ ಬಾಲಕಿ

ಜನನಿಬಿಡ ಪ್ರದೇಶದಲ್ಲಿ ಸಿಟಿ ಬಸ್ ಟೈರ್ ಬ್ಲಾಸ್ಟ್ | ಕೆಳಕ್ಕೆ ಬಿದ್ದ ಬಾಲಕಿ | ಜನರಲ್ಲಿ ಆತಂಕ


ಶಿವಮೊಗ್ಗ: ನಗರದ ನೆಹರೂ ರಸ್ತೆಯಲ್ಲಿ ಸಿಟಿ ಬಸ್ ಟೈರ್ ಸ್ಪೋಟಗೊಂಡ ಪರಿಣಾಮ ಬಸ್ ಒಳಗಿದ್ದ ಬಾಲಕಿ ಕೆಳಕ್ಕೆ ಬಿದ್ದ ಘಟನೆ ನಡೆದಿದೆ.

ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ನೆಹರೂ ರಸ್ತೆಯಲ್ಲಿ ವೀರಭದ್ರೇಶ್ವರ ಸಿಟಿ ಬಸ್ ಟೈರ್ ಸ್ಪೋಟಗೊಂಡಿದೆ. ಪರಿಣಾಮವಾಗಿ ಬಸ್ ತೂತ ಬಿದ್ದಿದ್ದು ಬಾಲಕಿ ಕೆಳಕ್ಕೆ ಬಿದ್ದಿದ್ದಾಳೆ.

ಚಾಲಕನ ಹಿಂಬದಿಯ ಸೀಟಿನಲ್ಲಿ ಬಾಲಕಿ ಕುಳಿತಿದ್ದಳು. ಟೈರ್ ಬ್ಲಾಸ್ಟ್ ಆದ ಪರಿಣಾಮ ಆ ಜಾಗದಲ್ಲಿ ಬಸ್ ಗುಂಡಿ ಬಿದ್ದಿದೆ. ಹೀಗಾಗಿ, ಅದರಿಂದ ಬಾಲಕಿ ಕೆಳಕ್ಕೆ ಬಿದ್ದಿದ್ದು, ಗಾಯಗೊಂಡಿದ್ದಾಳೆ.

ಟೈರ್ ಸ್ಪೋಟಗೊಂಡ ರಭಸಕ್ಕೆ ಬಸ್ ಡಿವೈಡರ್’ಗೆ ಡಿಕ್ಕಿ ಹೊಡೆದಿದೆ.
ಸದ್ದು ಎಂದರೆ ಭಯಪಡುವ ಶಿವಮೊಗ್ಗ ಮಲೆನಾಡಿನ ಜನ ಇಂದು ಹಿಂದಿನ ಶಿವಮೊಗ್ಗ ಸನಿಹದ ಹೋಟೆಲ್ ಜಾಗಕ್ಕೆ ಬಂದಿದ್ದಾರೆ. ಹಾಗೆ ನೋಡಿದರೆ ಇಡೀ ಜನ ಕಂಪಿನಿಸಿದ್ದಾರೆ ಪಕ್ಕದಲ್ಲಿ ಹೋಗುತ್ತಿದ್ದ ನೂರಾರು ಜನ ಸ್ಪಂದಿಸಲು ಬಂದಿದ್ದಾರೆ.

ಬಿಸಿಲಿನ ಝಳಕ್ಕೆ ಟೈರ್ ಸ್ಫೋಟಗೊಂಡಿದೆ ಎಂದು ಹೇಳಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ.

ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author

Leave a Reply

Your email address will not be published. Required fields are marked *