Sagara | ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಮಗು ಸಾವು
ಸಾಗರ: ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಒಂದೂವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.
ಜೋಸೆಫ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಸೀಫ್ ಹಾಗೂ ಅನಜುಂ ಅವರ ಪುತ್ರಿ ಆನಮ್ ಫಾತಿಮಾ (1.5 ವರ್ಷ) ಮೃತಪಟ್ಟ ದುರ್ದೈವಿ
ಸಾಗರ ನಗರಸಭೆ ವ್ಯಾಪ್ತಿಯ ಜೋಸೆಫ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಸೀಫ್ ಹಾಗೂ ಅನಜುಂ ಅವರ ಒಂದೂವರೆ ವರ್ಷದ ಪುತ್ರಿ ಆನಮ್ ಫಾತಿಮಾ ಭಾನುವಾರ ಸಂಜೆ ಮನೆಯಲ್ಲಿ ಆಟ ಆಡಿಕೊಂಡು ಬಾತ್ ರೂಮ್ ಗೆ ಹೋಗಿದ್ದೆ ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನ ಬಕೆಟ್‌ಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ.
ತಕ್ಷಣ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ವೈದ್ಯರು ಮಗು ಮೃತಪಟ್ಟಿರುವ ಬಗ್ಗೆ ಖಚಿತಪಡಿಸಿದ್ದಾರೆ.
ಸಾಗರ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.