ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿದ ಕಬ್ಬಡಿ ಕ್ರೀಡಾಪಟು ಗಗನ್ ಗೌಡನಿಗೆ  ಸಂಸದ ಬಿ ವೈ ರಾಘವೇಂದ್ರರಿಂದ ಸನ್ಮಾನ
ರಿಪ್ಪನ್ಪೇಟೆ : ರಾಷ್ಟ್ರಮಟ್ಟದ  ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ  ಮಲೆನಾಡಿಗೆ ಕೀರ್ತಿಯನ್ನು ತಂದ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಪ್ರೋ ಕಬ್ಬಡಿ ಹತ್ತನೇ ಸೀಸನ್ ನ ಯುಪಿ ಯೋಧ ತಂಡದ ಆಟಗಾರ ಯುವ ಪ್ರತಿಭೆ ಗಗನ್ ಗೌಡನಿಗೆ ಸಂಸದ ಬಿ. ವೈ. ರಾಘವೇಂದ್ರ ಗೌರವಿಸಿ ಸನ್ಮಾನಿಸಿದರು.
ಪ್ರೋ ಕಬ್ಬಡಿ ಹತ್ತನೇ ಸೀಸನ್ ನಲ್ಲಿ ಯುಪಿ ಯೋಧ ತಂಡವನ್ನು ಪ್ರತಿನಿಧಿಸಿ 13 ಪಂದ್ಯಗಳಲ್ಲಿ 90 ಪಾಯಿಂಟ್ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಿರುವ ಹಾಲುಗುಡ್ಡೆಯ ಯುವ ಪ್ರತಿಭೆ ಗಗನ್ ಗೌಡ ಅವರ ಮನೆಗೆ ಇಂದು ಶಿವಮೊಗ್ಗ ಕ್ಷೇತ್ರದ ಸಂಸದರಾದ ಬಿ.ವೈ ರಾಘವೇಂದ್ರ , ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಭೇಟಿ ಮಾಡಿ ಅಭಿನಂದಿಸಿ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ ಡಿ ಮೇಘರಾಜ್,ಹೊಸನಗರ ತಾ ಪಂ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ,ಎಂ.ಬಿ ಮಂಜುನಾಥ್, ಸುರೇಶ್ ಸಿಂಗ್,ರಾಜೇಂದ್ರ ಘಂಟೆ, ರಾಜೇಶ್ ಜೈನ್ ಹಾಗೂ ಇನ್ನಿತರರಿದ್ದರು.
.
		 
                         
                         
                         
                         
                         
                         
                         
                         
                         
                        

