Headlines

Shivamogga | ಮೂವರು ಯುವಕರನ್ನು ಅಡ್ಡಗಟ್ಟಿ ದರೋಡೆಗೈದ ಖದೀಮರು

ಮೂವರು ಯುವಕರನ್ನು ಅಡ್ಡಗಟ್ಟಿ ದರೋಡೆಗೈದ ಖದೀಮರು


ಶಿವಮೊಗ್ಗ ನಗರದ ಶೇಷಾದ್ರಿಪುರಂ  ರೈಲ್ವೆ ಓವರ್ ಬ್ರಿಡ್ಜ್ ಕೆಳಗೆ ಬೈಕ್ ನಲ್ಲಿ ಬಂದ ಮೂವರು ಯುವಕರಿಂದ ಮೊಬೈಲ್,ನಗದು ಹಣ ಹಾಗೂ ದಾಖಲಾತಿಗಳನ್ನ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ.

ಜಯನಗರ ರಾಮಮಂದಿರ ನಿವಾಸಿ ವಿನಿತ್ ರಾಮ್ಜಿಯಾ ಎಂಬುವವರು ಫೆ.28 ರಂದು ರಾತ್ರಿ ರೈಲಿಗೆ ಹೋಗಲು  ಸ್ನೇಹಿತರನ್ನ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಬಿಡಲು ವಿನೀತ್ ಬಂದಿದ್ದರು.

ರೈಲು ಬರಲು ಸಮಯವಿದ್ದಿದ್ದರಿಂದ ಗೂಡ್ ಶೆಡ್ ಬಳಿ ವಿನೀತ್ ಸ್ನೇಹಿತರಾದ ಮಾರುತಿ ಮತ್ತು‌ ರಮೆಶ್ ಎಂಬುವರ ಜೊತೆ ರೈಲ್ವೆ ಓವರ್ ಬ್ರಿಡ್ಜ್ ಕೆಳಗೆ ವಾಕ್ ಮಾಡುತ್ತಿದ್ದಾಗ ಶೇಷಾದ್ರಿಪುರಂನಿಂದ ಒಂದೇ ಬೈಕ್ ನಲ್ಲಿ ಬಂದ ಮೂವರು ಅಪರಿಚಿತ ಯುವಕರು ಹರಿತಾದ ಆಯುಧ ತೋರಿಸಿ ರಾಬರಿ ಮಾಡಿದ್ದಾರೆ.

ಮೂರು ಮೊಬೈಲು, ಐದು ಸಾವಿರಕ್ಕೂ ಹೆಚ್ಚು ಹಣ, ಮೂವರ ಬಳಿಯಿದ್ದ ಪರ್ಸ್, ಪರ್ಸ್ ನಲ್ಲಿದ್ದ ವಾಹನ ಪರವಾನಗಿ, ಎಟಿಎಂ, ಮೊದಲಾದ ದಾಖಲಾತಿಗಳನ್ನ ದೋಚಿದ್ದಾರೆ. ಮಾರುತಿ ಎಂಬುವರು ತಪ್ಪಿಸಿಕೊಳ್ಳಲು ಯತ್ನಿಸಿದರೂ ದೋಚಲು ಬಂದ ಯುವಕನೊಬ್ಬನು ಹಿಂಬಾಲಿಸಿಕೊಂಡು ಹೋಗಿ ರಾಬರಿ ಮಾಡಿದ್ದಾನೆ.


ಕೊಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *