WhatsApp Channel Join Now
Telegram Channel Join Now
ಕುಡಿದು ಶಾಲೆಗೆ ಬರುತಿದ್ದ ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಚಪ್ಪಲಿ ಸೇವೆ | Viral News


ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು ಸಾಕಷ್ಟು ಜನ ಇರುತ್ತಾರೆ.. ಅವರು ಲಕ್ಷಾಂತರ ಮಕ್ಕಳನ್ನು ದೊಡ್ಡ ವ್ಯಕ್ತಿಗಳನ್ನಾಗಿ ಮಾಡಿದ್ದಾರೆ.. ಅವರ ಮಧ್ಯೆ ಕೆಲವರಿಗೆ ಸರ್ಕಾರಿ ಶಾಲೆಗಳೆಂದರೆ ಅದೇನೋ ನಿರ್ಲಕ್ಷ್ಯ.. ಶಿಕ್ಷಕರಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಶಕ್ತಿ ಇದ್ದರೂ ನಿರ್ಲಕ್ಷ್ಯ ತೋರುತ್ತಾರೆ.

ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ನಿದ್ದೆ ಮಾಡಿ ಸಂಬಳ ತೆಗೆದುಕೊಳ್ಳುವವರಿದ್ದಾರೆ.. ಕಾಟಾಚಾರಕ್ಕೆ ಶಾಲೆಗೆ ಬರುವ ಶಿಕ್ಷಕರೂ ಇದ್ದಾರೆ.. ಇನ್ನೂ ಕೆಲವರು ಕುಡಿತದ ದಾಸರಾಗಿರುತ್ತಾರೆ.. ಕುಡಿದೇ ಶಾಲೆಗೆ ಬರುತ್ತಾರೆ.. ಶಾಲೆಯಲ್ಲೇ ಕುಡಿಯುತ್ತಾರೆ.. ಇದೇ ರೀತಿ ಶಿಕ್ಷಕನೊಬ್ಬ ಕುಡಿದು ಬಂದು ವಿದ್ಯಾರ್ಥಿಗಳಿಂದ ಧರ್ಮದೇಟು ತಿಂದಿದ್ದಾನೆ..


ಚಪ್ಪಲಿಯಿಂದ ಅಟ್ಟಾಡಿಸಿದ ವಿದ್ಯಾರ್ಥಿಗಳು;

ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷಕರು ಬುದ್ಧಿ ಕಲಿಸಬೇಕು.. ಆದ್ರೆ ಇಲ್ಲಿ ವಿದ್ಯಾರ್ಥಿಗಳೇ ಶಿಕ್ಷಕನೊಬ್ಬನಿಗೆ ಬುದ್ಧಿ ಕಲಿಸಿದ್ದಾರೆ.. ದಿನಾ ಕಂಠಪೂರ್ತಿ ಕುಡಿದು ಶಾಲೆಗೆ ಬರ್ತಿದ್ದ ಶಿಕ್ಷಕನಿಗೆ ಚೆನ್ನಾಗಿ ಬುದ್ಧಿ ಕಲಿಸಿದ್ದಾರೆ.. ವಿದ್ಯಾರ್ಥಿಗಳೆಲ್ಲಾ ಸೇರಿಕೊಂಡು ಚಪ್ಪಲಿ ಸೇವೆ ಮಾಡಿದ್ದಾರೆ.. ಶಾಲಾ ಆವರಣದಲ್ಲೆಲ್ಲಾ ಆಟ್ಟಾಡಿಸಿದ್ದಾರೆ.. ಕೊನೆಗೆ ವಿದ್ಯಾರ್ಥಿಗಳ ಆಕ್ರೋಶದಿಂದ ಭಯಭೀತನಾದ ಶಿಕ್ಷಕ ಬೈಕ್‌ ಏರಿ ಪರಾರಿಯಾಗಿದ್ದಾರೆ..

ಛತ್ತಿಸ್‌ಗಢ ರಾಜ್ಯದಲ್ಲಿ ಈ ಘಟನೆ;

ಛತ್ತೀಸ್‌ಗಡ ರಾಜ್ಯದ ಬಸ್ತರ್ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. ತಪ್ಪು ಮಾಡಿದ ಶಿಕ್ಷಕನಿಗೆ ಶಾಲೆಯ ಮಕ್ಕಳೇ ಪಾಠ ಕಲಿಸಿದ್ದಾರೆ.. ಚಪ್ಪಲಿ ಹಿಡಿದು ಅಟ್ಟಾಡಿಸಿದ್ದಾರೆ.. ಈ ಶಿಕ್ಷಕ ಪ್ರತಿದಿನ ಕಂಠಪೂರ್ತಿ ಕುಡಿದು ಶಾಲೆಗೆ ಬರುತ್ತಿದ್ದ. ಕುಡಿದ ಮತ್ತಿನಲ್ಲಿ ಯಾವಾಗಲೂ ವಿದ್ಯಾರ್ಥಿಗಳನ್ನು ಕೆಟ್ಟ ಪದಗಳನ್ನು ಬಳಸಿ ನಿಂದನೆ ಕೂಡಾ ಮಾಡುತ್ತಿದ್ದ.. ಹೊಡೆಯುವುದು, ಬಡಿಯುವುದು ಮಾಡುತ್ತಿದ್ದ.. ಆದ್ರೆ ಪಾಠ ಮಾತ್ರ ಮಾಡುತ್ತಿರಲಿಲ್ಲ.. ಬೆಳ್‌ ಬೆಳಗ್ಗೆಯೇ ಕುಡಿದು ತೂರಾಡುತ್ತಿದ್ದ.. ಇದರಿಂದ ರೋಸಿಹೋಗಿದ್ದ ವಿದ್ಯಾರ್ಥಿಗಳು ಶಿಕ್ಷಕನ ಮೇಲೆ ಚಪ್ಪಲಿ ಬೀಸಿದ್ದಾರೆ.. ಅಟ್ಟಾಡಿಸಿ ಶಾಲೆಯಿಂದ ಓಡಿಸಿದ್ದಾರೆ.

ಬೈಕ್‌ನಲ್ಲಿ ಬಂದ ಶಿಕ್ಷಕನನ್ನು ವಾಪಸ್‌;

ದಿನವೂ ಕಾಟ ಕೊಡುತ್ತಿದ್ದ ಶಿಕ್ಷಕನಿಂದ ಬೇಸತ್ತಿದ್ದ ವಿದ್ಯಾರ್ಥಿಗಳು ಇವತ್ತು ಏನಾದರೂ ಮಾಡಿ ಆತನಿಗೆ ಬುದ್ಧ ಕಲಿಸಬೇಕೆಂದು ನಿರ್ಧಾರ ಮಾಡಿದ್ದರು.. ಬೆಳಗ್ಗೆ ಶಿಕ್ಷಕ ಬರುತ್ತಿರುವುದನ್ನೇ ಕಾಯುತ್ತಿದ್ದರು.. ಬೈಕ್‌ ನಲ್ಲಿ ಬಂದ ಶಿಕ್ಷಕ ಕುಡಿದು ಬಂದಿರುವುದನ್ನು ಖಚಿತ ಮಾಡಿಕೊಂಡರು.. ಕೂಡಲೇ ಆಕ್ರೋಶಗೊಂಡ ವಿದ್ಯಾರ್ಥಿಗಳು ಸಿಕ್ಕ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಬೀಸಿದರು.. ಚಪ್ಪಲಿ ತೆಗೆದುಕೊಂಡು ಎಸೆದರು.. ಏನು ಹೇಳಿದರೂ ವಿದ್ಯಾರ್ಥಿಗಳು ಕೇಳಲಿಲ್ಲ.. ಕೊನೆಗೆ ಶಿಕ್ಷಕ ಅಲ್ಲಿಂದ ಪರಾರಿಯಾಗಿದ್ದಾನೆ.. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.. ಶಿಕ್ಷಕನಿಗೆ ಬುದ್ಧಿ ಕಲಿಸಿದ ವಿದ್ಯಾರ್ಥಿಗಳ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *