Headlines

Ripponpete | ಮನುಷ್ಯ ಮನುಷ್ಯನನ್ನ ಪ್ರೀತಿಸಬೇಕು ಮತ್ತು ಗೌರವಿಸಬೇಕು – ಧರ್ಮಗುರು ರೋಮನ್ ಪಿಂಟೋ

ಮನುಷ್ಯ ಮನುಷ್ಯನನ್ನ ಪ್ರೀತಿಸಬೇಕು ಮತ್ತು ಗೌರವಿಸಬೇಕು  – ಧರ್ಮಗುರು ರೋಮನ್ ಪಿಂಟೋ


ರಿಪ್ಪನ್‌ಪೇಟೆ : ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು,ಪ್ರೀತಿ ಮತ್ತು ಕ್ಷಮೆಯಿಂದ ಜಗತ್ತನ್ನೇ ಗೆಲ್ಲಬಹುದು ಎಂದು ತೋರಿಸಿಕೊಟ್ಟ ಪ್ರಭು ಏಸು ಸ್ವಾಮಿಯವರ ಶುಭ ಸಂದೇಶ ಇಂದಿಗೂ ಪ್ರಸ್ತುತ ಎಂದು ಸೈಂಟ್ ಫ್ರಾನ್ಸಿಸ್ ಚರ್ಚ್ ಕಬಳೆಯ  ಧರ್ಮಗುರು ರೋಮನ್  ಪಿಂಟೋ ಹೇಳಿದರು.


ಪಟ್ಟಣದ ಗುಡ್ ಶೆಪರ್ಡ್ ಚರ್ಚ್ ನ ವಾರ್ಷಿಕ ಹಬ್ಬದ ಅಂಗವಾಗಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶುಭ ಸಂದೇಶವನ್ನು ನೀಡಿದ ಅವರು ಅಭಿವೃದ್ಧಿಯತ್ತ ಸಾಗುತ್ತಿದೆ, ಪ್ರತಿಯೊಬ್ಬರು ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ, ಆದರೆ ಯಾರಿಗೂ ನೆಮ್ಮದಿಯ ಜೀವನ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ, ಸಮಾಜದಲ್ಲಿನ ಪ್ರತಿಯೊಬ್ಬರು ಪ್ರೀತಿಯನ್ನು ಹಂಚಿಕೊಂಡು ಕ್ಷಮೆಯಾಚನೆ ನೀಡುವುದರ ಮೂಲಕ ಜಾತಿ ಮತ ಪಂಥಗಳ ಭೇಧವನ್ನು ಮರೆತು ಸದ್ಭಾವನೆಯಿಂದ ಎಲ್ಲಾರಲ್ಲೂ ಬೆರೆತು ಸಹಕಾರ ಮನೋಭಾವನೆಯಿಂದ ಬಾಳ್ವೆಯನ್ನು ಮಾಡಿದರೆ ಪ್ರತಿಯೊಬ್ಬರು ನೆಮ್ಮದಿಯ ಬದುಕನ್ನು‌ ಕಾಣಬಹುದು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ  ,ಆನವಟ್ಟಿ ಕ್ರೈಸ್ತ ರಾಜ್ ಚರ್ಚ್ ನ ಧರ್ಮಗುರು ಮ್ಯಾಥ್ಯೂಸ್, ಶಿವಮೊಗ್ಗದ ಸೋಶಿಯಲ್ ವೆಲ್ಫೇರ್ ಸೊಸೈಟಿ  ಡೈರೆಕ್ಟರ್ ರೆ. ಫಾ. ಅಬ್ರಹಾಂ  ಹಾಗೂ ರಿಪ್ಪನ್‌ಪೇಟೆ ಗುಡ್ ಶೆಪರ್ಡ್ ಚರ್ಚ ನ ಧರ್ಮಗುರು ಬಿನೋಯ್  ಮ್ಯಾಥ್ಯೂಸ್‌ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಬಾಸ್ಟಿನ್ ಮ್ಯಾಥ್ಯೂಸ್‌ ನಿರೂಪಿಸಿದರು.

ಇದಕ್ಕೂ ಮುನ್ನ ಗುಡ್ ಶೆಪರ್ಡ್ ಚರ್ಚ್ ನಿಂದ  ವಿನಾಯಕ ವೃತ್ತದವರೆಗೆ ಏಸು ಕ್ರಿಸ್ತರ ಪ್ರತಿಮೆಯನ್ನು ಮೆರವಣಿಗೆಯ ಮೂಲಕ ಭಕ್ತಿಗಾನಗಳಿಂದ ತರಲಾಯಿತು.

ಈ ಮೆರವಣಿಗೆಯಲ್ಲಿ ರಿಪ್ಪನ್‌ಪೇಟೆ ಸೇರಿದಂತೆ ಸಾಗರ ,ಶಿವಮೊಗ್ಗ, ಸಾಗರ,ಹೊಸನಗರದಿಂದ ಆಗಮಿಸಿದ ನೂರಾರು ಭಕ್ತರು ಪಾಲ್ಗೊಂಡಿದರು.

ರಿಪ್ಪನ್‌ಪೇಟೆ ಗುಡ್ ಶೆಪರ್ಡ್ ಫೋರೋನ ದೇವಾಲಯದ ಧರ್ಮಗುರು ಬಿನೋಯ್ ರವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮ ,ಮೆರವಣಿಗೆ ಸಾಂಗವಾಗಿ ನಡೆಯಿತು.

Leave a Reply

Your email address will not be published. Required fields are marked *