Ripponpete | ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆ – ಮತದಾರರಿಗೆ ಅಭಿನಂದನೆ
ಹೊಸನಗರ ತಾಲೂಕಿನ ಒಕ್ಕಲಿಗರ ಸಂಘದ ನಿರ್ದೇಶಕ ಸಂಘದ ಚುನಾವಣೆಯಲ್ಲಿ ಮತ ನೀಡಿ ಆಶೀರ್ವದಿಸಿ, ಹಾರೈಸಿದ ಎಲ್ಲಾ ಕುಲ ಭಾಂದವರಿಗೆ ಪರಾಜಿತ ಅಭ್ಯರ್ಥಿಗಳಾದ ರವೀಂದ್ರ ಕೆರೆಹಳ್ಳಿ ಹಾಗೂ ಹೆಚ್ ಎಸ್ ಕೃಷ್ಣಮೂರ್ತಿ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಹೊಸನಗರ ತಾಲೂಕ್ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಮತದಾರರು ಯಾವುದೇ ಹಣ ಹಾಗೂ ಬಾಡೂಟದ ಅಮಿಷಕ್ಕೆ ಒಳಗಾಗದೇ ಹೆಚ್ಚಿನ ಮತ ನೀಡುವ ಮೂಲಕ ಸಹಕರಿಸಿದ್ದಾರೆ ಅವರಿಗೆ ಧನ್ಯವಾದಗಳು ಎಂದರು.
ನಮ್ಮ ತಂಡದಿಂದ ಕಲೂರು ವಾಸಪ್ಪ ಗೌಡ , ಸರಸ್ವತಿ(ಲಕ್ಷ್ಮಿ) ,ವಾಣಿ ಗೋವಿಂದಪ್ಪ ಗೌಡ ,ರಂದೀಪ್ ಗೌಡ , ಬಾಲರಾಜ್ , ಗಿರಿಧರ್ ಗೌಡ ರಿಪ್ಪನ್ಪೇಟೆ , ಅರ್ ಎಸ್ ನಾಗರಾಜ್ , ಪರಮೇಶ್ವರಪ್ಪ ,ರೂಪ ದುಗ್ಗಣ್ಣ , ಸಂತೋಷ್ ಜಿ ಎಸ್ ಸ್ಪರ್ಧಿಸಿದ್ದು ಇವರಿಗೆ ಮತ ನೀಡಿದ ಎಲ್ಲಾ ಕುಲ ಭಾಂದವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.