ಬದುಕಿನಲ್ಲಿ ಸದ್ಗುಣಗಳನ್ನು ಆಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ : ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ
ರಿಪ್ಪನ್ಪೇಟೆ;-ಬದುಕಿನಲ್ಲಿ ಸದ್ಗುಣಗಳನ್ನು ಆಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ ಬದುಕಿನಲ್ಲಿ ಬಂದದೆಲ್ಲ ಬರಲಿ ಎನ್ನುವುದು ಸಹಜ ಸೂತ್ರ.ಏನು ಬರಬೇಕು ಎಂದು ತೀರ್ಮಾನಿಸಿ ಸೃಷ್ಠಿಕೊಳ್ಳುವುದು ನಿಜವಾದ ಸಾಧನೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಪಟ್ಟಣದ ಸಮೀಪದ ಮಳವಳ್ಳಿ ಶ್ರೀಮಹಾಲಿಂಗೇಶ್ವರ ಮತ್ತು ಬಸವಣ್ಣ ದೇವಸ್ಥಾನದ ನೂತನ ಕಟ್ಟಡದ ಲೋಕಾರ್ಪಣೆ ಮತ್ತು ಶ್ರೀ ಮಹಾಲಿಂಗೇಶ್ವರ ಶ್ರೀಬಸವಣ್ಣ ದೇವರುಗಳ ಪುನರ್ ಪ್ರತಿಷ್ಟಾಪನಾ ಧರ್ಮ ಸಮಾರಂಭದ ದಿವ್ಯಸಾನಿದ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು ಸದ್ಗುಣಗಳನ್ನು ಬದುಕಿನಲ್ಲಿ ಆಳವಡಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ.ದೇವಸ್ಥಾನ ನಿರ್ಮಿಸಿದರೆ ಸಾಲದು ಸ್ವಚ್ಚತೆಯೊಂದಿಗೆ ಕಾಯಕ ನಿಷ್ಟರಾಗಿ ಬದುಕುವಂತಾಗಬೇಕು.ಧಾನ ಧರ್ಮದೊಂದಿಗೆ ಸಂತೃಪ್ತಿಯಿAದ ಜೀವನ ನಡೆಸುವಂತಾಗಬೇಕು.ಕಾಣದ ದೇವರುಗಳನ್ನು ಗುರುವಿನಲ್ಲಿ ಕಾಣುವಂತಾದಾಗ ಮಾತ್ರ ಧರ್ಮ ಉಳಿಯಲು ಸಾಧ್ಯವಾಗುವುದೆಂದು ಹೇಳಿದರು.
ನಾನು -ನನ್ನದು ಅನ್ನುವ ಅಹಂಕಾರ ಭಾವವನ್ನು ಬಿಟ್ಟಾಗಲೇ ಕಲಿಯಲು ಮತ್ತು ಬೆಳೆಯಲು ಸಾಧ್ಯ ಅದ್ದರಿಂದ ಈ ಭಗವಂತನ ಸೃಷ್ಠಿಯಲ್ಲಿ ನಾವೆಲ್ಲರು ಕಿಂಕರಾಗಿ ಬದುಕುವುದು ಬಹಳ ಶ್ರೇಷ್ಠ ಹಾಗಾಗಿ ಶ್ರೀಗುರುವಿಗೆ ತಂದೆ ತಾಯಿಯರಿಗೆ ಗೌರವಿಸಿ ಬದುಕು ಸಾಗಿಸುವುದರ ಜೊತೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮನುಕುಲ ಉದ್ದಾರದ ಧರ್ಮಸೂತ್ರಗಳನ್ನು ಆಳವಡಿಸಿಕೊಂಡು ಜೀವನ ಸಾಗಿಸುವುದೆ ನಿಜವಾದ ಜೀವನವಾಗಿದೆ.ಹಣ ಸೌಂದರ್ಯ ಯಾವುದು ಶಾಶ್ವತವಲ್ಲ.ಧರ್ಮವೊಂದೆ ಶಾಶ್ವತವೆಂದರು.
ಧರ್ಮಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮಹಾಲಿಂಗೇಶ್ವರ ಮತ್ತು ಬಸವಣ್ಣ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ನಾಗರಾಜಗೌಡರು ವಹಿಸಿದ್ದರು.
ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನಮಠದ ರೇಣುಕಾನಂದ ಮಹಾಸ್ವಾಮಿಜಿ ಸಾನಿದ್ಯವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್,ನವಚೇತನವೇದಿಕೆ ಆಧ್ಯಕ್ಷ ಕೆ.ಎಸ್.ಪ್ರಶಾಂತ್,ಸಿಡಿಸಿ ಉಪಾಧ್ಯಕ್ಷ ಹಾಲಸ್ವಾಮಿಗೌಡ,ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಶೇಖರಮಳವಳ್ಳಿ, ಡಿ.ಈ.ಮಧುಸೂದನ್, ಉಮಾಕರ್,ಕವಿತಾಭೀಮರಾಜ್ ಇನ್ನಿತರರು ಪಾಲ್ಗೊಂಡಿದ್ದರು.
ಶಂಕುತಲ ಪ್ರಾರ್ಥಿಸಿದರು.ಈಶ್ವರಪ್ಪ ಮಳವಳ್ಳಿ ಸ್ವಾಗತಿಸಿದರು.ಸತ್ಯನಾರಾಯಣ ನಿರೂಪಿಸಿದರು.