Headlines

ರಿಪ್ಪನ್‌ಪೇಟೆಗೆ ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಭೇಟಿ – ನಾಗರೀಕರಿಂದ ಅದ್ದೂರಿ ಸ್ವಾಗತ |UTK

ರಿಪ್ಪನ್‌ಪೇಟೆಗೆ ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಭೇಟಿ – ನಾಗರೀಕರಿಂದ ಅದ್ದೂರಿ ಸ್ವಾಗತ |UTK


ರಿಪ್ಪನ್‌ಪೇಟೆ : ಪಟ್ಟಣಕ್ಕೆ ಆಗಮಿಸಿದ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ರವರಿಗೆ ವಿನಾಯಕ ವೃತ್ತದಲ್ಲಿ ನಾಗರೀಕರು ಅದ್ದೂರಿಯಾಗಿ ಸ್ವಾಗತಿಸಿದರು.

ಖಾಸಗಿ ಕಾರ್ಯಕ್ರಮದ ಅಂಗವಾಗಿ ಸಾಗರಕ್ಕೆ ಭೇಟಿ ನೀಡಿ ಹಿಂದಿರುಗುವಾಗ ಮಾರ್ಗ ಮಧ್ಯದಲ್ಲಿ ಪಟ್ಟಣದ ನಾಗರೀಕರು ಹಾರ ತುರಾಯಿಗಳ ಮೂಲಕ ಅದ್ದೂರಿ ಸ್ವಾಗತ ಕೋರಿದರು.


ಈ ಸಂಧರ್ಭದಲ್ಲಿ ನಾಗರೀಕರೊಂದಿಗೆ ಸರಳ ಸಜ್ಜನಿಕೆಯಿಂದ ಮಾತನಾಡಿದ ಅವರು ವಿಧಾನಸಭಾ ಕಲಾಪ ವೀಕ್ಷಣೆಗೆ ಆಗಮಿಸಿ ಎಂದು ಆಹ್ವಾನಿಸಿದರು.

ಪಟ್ಟಣದ ನಾಗರೀಕರು ಭೇಟಿಯ ಸವಿನೆನಪಿಗಾಗಿ‌ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಅಪ್ಪೆ ಮಾವಿನಮಿಡಿಯ ಉಪ್ಪಿನಕಾಯಿಯನ್ನು ಉಡುಗೊರೆಯಾಗಿ ನೀಡಿದರು.

ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ , ಮುಖಂಡರುಗಳಾದ ಅಮೀರ್ ಹಂಜಾ , ಈಶ್ವರಪ್ಪ ಗೌಡ , ಆಸೀಫ಼್ ಭಾಷಾ , ಎಂ ಎಂ ಪರಮೇಶ್ ,ಗಣಪತಿ , ಫ್ಯಾನ್ಸಿ ರಮೇಶ್ ,ಖಾಸಿಂ ಸಾಬ್ , ಹಸನಬ್ಬ ,ಹಾಲುಗುಡ್ಡೆ ಹರೀಶ್ , ನಾಗಪ್ಪ ಅರಸಾಳು , ಫೈಜಲ್ ಬ್ಯಾರಿ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *