Shivamogga | ಪ್ರೇಮಿಗಳ ನಡುವೆ ಕಿರಿಕ್ – ಪ್ರಿಯತಮೆಗೆ ಚಾಕುವಿನಿಂದ ಇರಿದ ಪ್ರಿಯಕರ : ಇಬ್ಬರು ಆಸ್ಪತ್ರೆಗೆ ದಾಖಲು
ಪ್ರೇಮಿಗಳ ನಡುವೆ ಕಿರಿಕ್ ನಡೆದು ಯುವಕನು ಯುವತಿಗೆ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗ (Shivamogga) ನಗರದ ಶಿವಪ್ಪ ನಾಯಕ ವೃತ್ತದಲ್ಲಿ ನಡೆದಿದೆ.
22 ವರ್ಷದ ಯುವತಿ ಅಂಬಿಕಾ ಎಂಬಾಕೆಗೆ ಚೇತನ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಇಬ್ಬರೂ ಶಿವಮೊಗ್ಗ(Shivamogga) ಜಿಲ್ಲೆಯ ಹಾಡೋನಹಳ್ಳಿ(hadonahalli) ಗ್ರಾಮದವರಾಗಿದ್ದಾರೆ. ಇವರಿಬ್ಬರು ಪ್ರೀತಿಸುತಿದ್ದು ಕೆಲವು ಕಾರಣದಿಂದ ಮದುವೆಯಾಗಲು ಸಾಧ್ಯವಾಗಿರಲಿಲ್ಲ.
ಇಂದು ಮಧ್ಯಾಹ್ನ ಅಂಬಿಕಾಳನ್ನು ಭೇಟಿಯಾದ ಚೇತನ್ ಮಾತುಕತೆ ಪ್ರಾರಂಭಿಸಿದ್ದಾನೆ ನಂತರ ಮಾತಿನ ಚಕಮಕಿ ನಡೆದು ಸಿಟ್ಟಾದ ಯುವಕ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ.
ತಕ್ಷಣವೇ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು ಚಾಕು ಇರಿದ ಯುವಕ ಚೇತನ್ ಗೆ ಧರ್ಮದೇಟು ನೀಡಿದ್ದಾರೆ. ಬಳಿಕ ಯುವಕನನ್ನೂ ಮೆಗ್ಗಾನ್ ಆಸ್ಪತ್ರೆಗೆ(hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋಟೆ ಪೊಲೀಸ್(police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.