Ripponpete | ಚಿನ್ನಕ್ಕಿಂತ ಅನ್ನಕ್ಕೆ ಬೆಲೆ ಹೆಚ್ಚು : ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ

ಚಿನ್ನಕ್ಕಿಂತ ಅನ್ನಕ್ಕೆ ಬೆಲೆ ಹೆಚ್ಚು : ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ.
ರಿಪ್ಪನ್ ಪೇಟೆ :ಚಿನ್ನಕ್ಕಿಂತ ಅನ್ನಕ್ಕೆ ಬೆಲೆ ಹೆಚ್ಚು ಏಕೆಂದರೆ ಚಿನ್ನವಿಲ್ಲದೆ ದಿನ ಕಳೆಯಬಹುದು ಆದರೆ ಅನ್ನವಿಲ್ಲದೆ ದಿನ ಕಳೆಯಲು ಸಾದ್ಯವಿಲ್ಲ ಎಂದು ಮಳಲಿಮಠದ ಶ್ರೀ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣ ಸಮೀಪವಿರುವ ಗವಟೂರು ಹೊಳೆಸಿದ್ಧೇಶ್ವರ ದೇವಸ್ಥಾನ ಸಮಿತಿಯವರು  ಆಯೋಜಿಸಿದ್ದ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶ್ರೀವಚನ ನೀಡಿದರು. 

ಸಾವಿರ ಜನ ಇದ್ದರೂ ಸಾವನ್ನ ನಿಲ್ಲಿಸಲಾಗದು, ಕೋಟಿ ಸಂಪಾದಿಸಿದರೂ ನೋಟು ತಿನ್ನಲಾಗದು ಆದ್ದರಿಂದ ಬದುಕಿ ಬಾಳಲು ಪ್ರತಿಯೊಬ್ಬರಿಗೂ ಅನ್ನ ಎಷ್ಟು ಮುಖ್ಯವೊ ಅಷ್ಟೇ ಒಳ್ಳೆಯ ಮಾತು ಮುಖ್ಯ. ಒಳ್ಳೆಯತನ ಇದೊಂದೇ ನಾವು ಉಳಿಸಿಟ್ಟು ಹೋಗುವ ಬೆಲೆಕಟ್ಟಲಾಗದ ಆಸ್ತಿ ಹಾಗಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಆದೇಶಿಸಿದ್ದು ಧರ್ಮ ಒಂದೇ ಶಾಶ್ವತ ಆದ್ದರಿಂದ ಧರ್ಮದ ತಳಹದಿಯಮೇಲೆ ಜೀವನವನ್ನು ನಡೆಸುವದು ಬಹುಮುಖ್ಯವೆಂದು ತಿಳಿಸಿದರು. 

ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಒತ್ತಡದ ನಡುವೆ ನೆಮ್ಮದಿಯ ಬದುಕು ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಜಗತ್ತಿನಲ್ಲಿ ಜ್ಞಾನ ಕೊಡುವ ಶ್ರೀಗುರು,ಅನ್ನ ನೀಡುವ ರೈತ ಪ್ರತಿಯೊಬ್ಬರಿಗೂ ಅವಶ್ಯ, ಗುರು-ಹಿರಿಯರಿಗೆ ತಂದೆತಾಯಿಗಳಿಗೆ ಗೌರವಿಸಿ ನಡೆದುಕೊಂಡು ಬಾಳುವುದೇ ನಿಜವಾದ ಜೀವನವೆಂದು ತಿಳಿಸಿದರು.

ದೇವಸ್ಥಾನ ಸಮಿತಿಯ ಉಲ್ಲಾಸ್ ತೆಂಕೋಲ್ , ದುಂಡ ರಾಜಪ್ಪ ಗೌಡ, ಕೃಷ್ಣಯ್ಯ ಶೆಟ್ಟಿ, ರಾಘವೇಂದ್ರ, ಯೋಗೇಂದ್ರ,ವಸಂತ,ಶಂಕರ್,ಮಲ್ಲಿಕಾರ್ಜುನ, ಪಾರ್ವತಿ,ಸುಮಾ, ಬಿಎಸ್ಎನ್ಎಲ್ ಶ್ರೀಧರ್  ಇನ್ನಿತರರಿದ್ದರು.

Leave a Reply

Your email address will not be published. Required fields are marked *