Hosanagara | ಅರಣ್ಯ ಇಲಾಖೆಯಿಂದ ಕ್ಷಿಪ್ರ ಕಾರ್ಯಾಚರಣೆ – ಎರಡು ವಾಹನ ವಶಕ್ಕೆ!!!!
ಹೊಸನಗರ : ಸೋಮವಾರ ತಡರಾತ್ರಿ ಗಸ್ತು ನಡೆಸುತ್ತಿದ್ದ ವೇಳೆ ಪಿಕ್‌ಅಪ್ ಹಾಗೂ ಟಿಪ್ಪರ್ ವಾಹನ ತಡೆದು ತಪಾಸಣೆ ನಡೆಸಿದ ವೇಳೆ ಅಕ್ರಮ ಮರಳು ಸಾಗಾಟಕ್ಕೆ ಮುಂದಾಗಿದ್ದ ಎರಡು ವಾಹನಗಳನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣಕ್ಕೆ ಸಮೀಪ ಇರುವ ಎಡಚಿಟ್ಟೆ ಗ್ರಾಮದ ಇಂಡೇನ್ ಗ್ಯಾಸ್ ಗೋಡಾನ್ ಸಮೀಪ ಅಕ್ರಮ ಮರಳು ಸಾಗಾಣಿಕೆಗೆ ಯತ್ನಿಸಿದ್ದ ವಾಹನವನ್ನು ಹೊಸನಗರ ವಲಯ ಡಿಆರ್‌ಎಫ್‌ಓ ಯುವರಾಜ್, ಅರಣ್ಯ ರಕ್ಷಕ ರಮೇಶ್ ವಶಕ್ಕೆ ಪಡೆದಿದ್ದಾರೆ.
ಪಿಕ್‌ಅಪ್ ಮಾಲೀಕ ದ್ಯಾವರ್ಸ ಅಭಿಷೇಕ್ ಹಾಗೂ ಟಿಪ್ಪರ್ ಮಾಲೀಕ ಪರಮೇಶ್ವರ ವಿರುದ್ದ ಅಕ್ರಮ ಮರಳು ಸಾಗಾಟ ಕುರಿತಂತೆ ಇಲ್ಲಿನ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿದಿನ ತಡರಾತ್ರಿ ಎಗ್ಗಿಲ್ಲದೆ ಸಾಗಿರುವ ಅಕ್ರಮ ಮರಳು ಸಾಗಾಟ ದಂಧಗೆ ಸೂಕ್ತ ಕಡಿವಾಣ ಹಾಕುವಂತೆ ತಾಲೂಕು ಆಡಳಿತವನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.