Headlines

Heddaripura | ಸಾಧನೆಯ ಹಾದಿಯಲ್ಲಿ ಎಡವಿದಾಗ ಮತ್ತೆ ಎದ್ದು ನಿಲ್ಲುವ ಛಲವೂ ಇರಬೇಕು – ಮಳಲಿ ಶ್ರೀಗಳು

Heddaripura | ಸಾಧನೆಯ ಹಾದಿಯಲ್ಲಿ ಎಡವಿದಾಗ ಮತ್ತೆ ಎದ್ದು ನಿಲ್ಲುವ ಛಲವೂ ಇರಬೇಕು – ಮಳಲಿ ಶ್ರೀಗಳು


ರಿಪ್ಪನ್‌ಪೇಟೆ : ಶ್ರೇಷ್ಠವಾದದನ್ನು ಸಾಧಿಸುವ ತುಡಿತ ಇರಬೇಕು ಜೊತೆಗೆ ಸಾಧನೆಯ ಹಾದಿಯಲ್ಲಿ ಎಡವಿದಾಗ ಮತ್ತೆ ಎದ್ದು ನಿಲ್ಲುವ ಛಲವೂ ಇರಬೇಕು ಎಂದು ಎಂದು ಮಳಲಿ ಮಠದ ಡಾ ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳವರು ಹೇಳಿದರು.

ಇಲ್ಲಿನ ಸಮೀಪದ ಹೆದ್ದಾರಿಪುರ ಸಾವಿತ್ರಮ್ಮ ಶ್ರೀ ರಾಮಕೃಷ್ಣ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಪ್ರತಿಯೊಬ್ಬರಲ್ಲಿ ಒಂದು ಗುರಿ ಒಬ್ಬ ಗುರು ಇರಬೇಕು ಅದರ ಜೊತೆಯಲ್ಲಿ ಸಮರ್ಥ ಸಾಧನೆಯನ್ನು ಮಾಡಲು ಸ್ಥಿರವಾದ ಶುದ್ಧವಾದ ಮನಸ್ಸಿರಬೇಕು ಎಂದು ನುಡಿದರು.

ಜೀವನದಲ್ಲಿ ಸೋಲು ಗೆಲುವು ಸಹಜ ಸೋಲಾದಾಗ ಕುಗ್ಗದೆ ಗೆಲುವು ಹೊಂದಿದಾಗ ಹಿಗ್ಗದೆ ಸೋಲು ಗೆಲುವನ್ನು ಸಮಾನವಾಗಿ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನದಲ್ಲಿ ಉತ್ತಮವಾದ ಗುರಿಯನ್ನು ಸಾಧಿಸಲು ಸಾಧ್ಯ ಹಾಗಾಗಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿಯನ್ನು ಕೊಡುವಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯವೆಂದು ತಿಳಿಸಿದರು.

ಸ್ವಾಮಿ ವಿವೇಕಾನಂದರವರು ಏಳಿರಿ, ಎದ್ದೇಳಿರಿ,ಎಚ್ಚರರಾಗಿರಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಸ್ವಾಮಿ ವಿವೇಕಾನಂದರ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಸಾಗಿಸಿದರೆ ಜೀವನ ಪಾವನವೆಂದು ತಿಳಿ ಹೇಳಿದರು.

ಜಿಪಂ ಮಾಜಿ ಸದಸ್ಯ ಬಿ‌ ಪಿ ರಾಮಚಂದ್ರ ಮಾತನಾಡಿ ಮನಷ್ಯನ ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯವಾದ ಘಟ್ಟ. ಯಾವ ದೇಶ ಶಿಕ್ಷಣಕ್ಕೆ ಮಹತ್ವವನ್ನು ನೀಡುವುದಿಲ್ಲವೋ ಅಲ್ಲಿ  ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಶಿಕ್ಷಣದಲ್ಲಿ ಗುಣಮಟ್ಟ, ಜೀವನಮೌಲ್ಯ, ಸಮಾಜಮುಖಿ ಶಿಕ್ಷಣ ಅಗತ್ಯವಿದ್ದು ಪೋಷಕರು ಮಕ್ಕಳಿಗೆ ಇದರತ್ತ ಚಿತ್ತ ಹರಿಸಲು ಹೆಚ್ಚು ಆಸಕ್ತಿವಹಿಸಬೇಕು. ಶಿಕ್ಷಕರು ಪಠ್ಯಕ್ರಮಕ್ಕೆ ಜ್ಞಾನವನ್ನು ಸೀಮಿತಗೊಳಿಸಿಕೊಳ್ಳದೆ ಪಠ್ಯದಲ್ಲಿನ ಮೂಲ ಉದ್ದೇಶದ ಅಧ್ಯಯನ ಅಗತ್ಯವಾಗಿದೆ. ಮಕ್ಕಳಿಗೆ ಚೆನ್ನಾಗಿ ಕಲಿಸಬೇಕೆಂಬ ಅಂತಸತ್ವವಿರಬೇಕು. ಶಿಕ್ಷಣದ ತಿರುಳು ಅರಿಯದವರು ಮಕ್ಕಳಿಗೆ ಪಾಠಮಾಡುವ ವ್ಯವಸ್ಥೆ ಆಗಬಾರದು. ತಮ್ಮ ವೃತ್ತಿಯಲ್ಲಿ ಸಮಯ ಪಾಲನೆಯೊಂದಿಗೆ, ವಿಚಾರಗಳ ಅಧ್ಯಯನ ಆಗಬೇಕು. ಜ್ಞಾನವೆಂಬುದು ಆಕಾಶದಿಂದ ಬಂದು ತಲೆಗೆ ಬೀಳುವುದಿಲ್ಲ. ನಾವೇ ಕಲಿತುಕೊಂಡು ಜೀವನದಲ್ಲಿ ಶಿಸ್ತು,ಸಂಯಮ ವನ್ನು ಅಳವಡಿಸಿಕೊಳ್ಳಬೇಕು ಎಂದರು.


ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಶಿವರಾಮ್, ವಾಸಪ್ಪಗೌಡ, ನಾಗರಾಜ ಹೆಚ್.ಕೆ, ಜಿ ಆರ್ ಗೋಪಾಲಕೃಷ್ಣ, ಪೋಷಕರ ಸಂಘದ ಅಧ್ಯಕ್ಷರು ಸದಸ್ಯರು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *