ಆಂಧಕಾರದ ಕತ್ತಲು ದೂರಮಾಡಿ ಬೆಳಕು ಮೂಡಿಸುವುದೇ ಕಾರ್ತಿಕಾ ದೀಪೋತ್ಸವ – ಮೂಲೆಗದ್ದೆ ಶ್ರೀಗಳು
ರಿಪ್ಪನ್ಪೇಟೆ : ನಮ್ಮಲ್ಲಿರುವ ಆಂಧಕಾರದ ಕತ್ತಲು ದೂರಮಾಡಿ ಬೆಳಕು ಮೂಡಿಸುವುದೇ ಕಾರ್ತಿಕಾ ದೀಪೋತ್ಸವ ಮಣ್ಣಿನ ಪಣತೆಯ ದೀಪಾರಾಧನೆ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದ ಆಭಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು.
ಸದಾನಂದಶಿವಯೋಗಾಶ್ರಮದ ಮೂಲೆಗದ್ದೆ ಮಠದಲ್ಲಿ ಆಯೋಜಿಸಲಾದ ಲಿಂಗೈಕ್ಯ ಪೂಜೆ ಶ್ರೀಗಳ ಪುಣ್ಯಾರಾಧನಾ ಕಾರ್ತಿಕಾ ದೀಪೋತ್ಸವ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಮಾವಿನಹೊಳೆಯಲ್ಲಿ ತಪ್ಪೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ ಇಂದಿನ ಯುವಜನಾಂಗ ಧರ್ಮ ಧಾರ್ಮಿಕ ಅಚರಣೆಗಳಿಂದ ದೂರವಾಗುತ್ತಿದ್ದು ಸಂಸ್ಕೃತಿ ಸಂಸ್ಕಾರವಿಲ್ಲದೆ ಮನೆಯ ಹಿರಿಯರನ್ನು ವೃದ್ದಾಶ್ರಮಕ್ಕೆ ಬಿಡುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ತಂದೆ ತಾಯಿಯರವನ್ನು ಮನೆಯಲ್ಲಿಟ್ಟುಕೊಂಡು ನೋಡಿಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಗಣೇಶ್ ಹಿರೇಮಣತಿ,ಹಾಲೇಶಪ್ಪ, ಜೆ.ಎಸ್.ಚಂದ್ರಪ್ಪ,ತಾಲ್ಲೂಕ್ ಪಂಚಾಯ್ತಿ ಮಾಜಿ ಸದಸ್ಯ ಚಂದ್ರಮೌಳಿಗೌಡರು, ಬಿ.ಯುವರಾಜಗೌಡರು, ಮಲ್ಲಿಕಾರ್ಜುನಯ್ಯ,ರುದ್ರಪ್ಪಗೌಡರು ಜಬ್ಬಗೋಡು, ಎತ್ತಿಗೆ ಮಹೇಶಗೌಡರು,ರಾಜಶೇಖರಗೌಡರು, ಬಿ.ಜೆ.ಜಗದೀಶಗೌಡರು, ತಮ್ಮಣ್ಣಗೌಡರು, ಇನ್ನಿತರ ಮಠದ ಸದ್ಭಕ್ತರು ಪಾಲ್ಗೊಂಡಿದ್ದರು.
ದೀಪೋತ್ಸವದ ನಂತರ ಜಾನಪದ ಕಲಾವಿದರಿಂದ ಬಸವಣ್ಣನವರ ವಚನ ಗಾಯನ ಮತ್ತು ಕೊಡಚಾದ್ರಿ ಶಾಲಾ ವಿದ್ಯಾರ್ಥಿನಿಯರಿಂದ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮ ಜರುಗಿತು.