ಮಳಲಿಮಠದಲ್ಲಿ ಶ್ರೀ ಗುರು ಪಟ್ಟಾಧಿಕಾರ ರಜತ ಮಹೋತ್ಸವ
ರಿಪ್ಪನ್‌ಪೇಟೆ:-ಸಮೀಪದ ಮಳಲಿ ಮಠದಲ್ಲಿ ನವಂಬರ 26 ರಂದು ಸಂಜೆ 4 ಗಂಟೆಗೆ ಶ್ರೀ ಗುರುಪಟ್ಟಾಧಿಕಾರ ರಜತ ಮಹೋತ್ಸವ ಹಾಗೂ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭವನ್ನು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯಮಹಾಸ್ವಾಮಿಜಿ ತಿಳಿಸಿದರು.
ರಿಪ್ಪನ್‌ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀ ಗುರುಪಟ್ಟಾಧಿಕಾರ ರಜತ ಮಹೋತ್ಸವ ಕಾರ್ತೀಕ ದೀಪೋತ್ಸವ ಸಮಾರಂಭವನ್ನು ಸಮಾರಂಭವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು.ಸಮಾರಂಭದ ಆಧ್ಯಕ್ಷತೆಯನ್ನು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯರ ಮಹಾಸ್ವಾಮಿಗಳು ವಹಿಸುವರು.
ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷರಾದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು, ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸುವರು. ಬಂಕಾಪುರ ಅರಳೆಲೆ’ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸದಾಶಯ ನುಡಿಯುವರು.
ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ‘ಸುದ್ದಿ ಸಂಪದ’ ಬಿಡುಗಡೆಗೊಳಿಸುವರು.
ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ, ದಿನದರ್ಶಿಕೆ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ, ಹರತಾಳು ಹಾಲಪ್ಪ, ಡಾ.ಆರ್.ಎಂ.ಮಂಜುನಾಥಗೌಡ, ಬಿ.ಎ.ಇಂದೂಧರಗೌಡ್ರು, ಎಸ್.ಎಸ್. ಜ್ಯೋತಿಪ್ರಕಾಶ, ಎನ್.ಜೆ.ರಾಜಶೇಖರ, ಕೆ.ಆರ್.ಪ್ರಕಾಶ, ಡಾ.ಡಿ.ವಿ.ರೇವಣೆಪ್ಪಗೌಡರು. ಬಿ.ಯುವರಾಜ್, ವೀರೇಶ್ ಆಲವಳ್ಳಿ, ದೇವೇಂದ್ರಗೌಡ್ರು ನವಟೂರು, ವಿರೂಪಾಕ್ಷ ಸಾಗರ, ಸಚಿನಗೌಡ ಗರ್ತಿಕೆರೆ ಭಾಗವಹಿಸುವರು.
ರಿಪ್ಪನ್‌ಪೇಟೆಯ ಆರ್.ಎಸ್.ಪ್ರಶಾಂತ ಪ್ರಾಸ್ತಾವಿಕ ಮಾತನಾಡುವರು. ಸುಳ್ಯದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಕವಲೇದುರ್ಗದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡುವರು.
ಶಾಂತಪುರದ ಶಿವಾನಂದ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ದುಗ್ಗಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹಣಮಾಪುರದ ಡಾ.ಸೋಮಶೇಖರ ಶಿವಾಚಾರ್ಯರು, ಹಾರನಹಳ್ಳಿಯ ಶಿವಯೋಗಿ ಶಿವಾಚಾರ್ಯರು, ಸಿಂಧಗಿಯ ಶಿವಯೋಗಿ ವೀರರಾಜೇಂದ್ರ ಶಿವಾಚಾರ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಹಲವಾರು ಗಣ್ಯರಿಗೆ ಸೇವಾಕರ್ತರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸುವರು.
ಪ್ರಾಥಃಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಶ್ರೀ ವೀರಭದ್ರೇಶ್ವರ ಸ್ವಾಮಿಗೆ, ಆದಿಗುರು ನಾಗಾರ್ಜುನ ಶಿವಾಚಾರ್ಯರಾದಿಯಾಗಿ ಎಲ್ಲಾ ಲಿಂಗೈಕ್ಯ ಶಿವಾಚಾರ್ಯರ ಕರ್ತೃ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ ಹಾಗೂ ಮಹಾಮಾತೆ ಶ್ರೀ ಚೌಡೇಶ್ವರಿ ದೇವಿಗೆ ಸಹಸ್ರ ಕುಂಕುಮಾರ್ಚನೆ, ಹೋಮ ಹವನಾದಿಗಳು ನಡೆಯುತ್ತವೆ. ಶ್ರೀ ಗುರು ಪಟ್ಟಾಧಿಕಾರದ ರಜತ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.
ಬೆಳಿಗ್ಗೆ 8.30ಕ್ಕೆ ಲೋಕಕಲ್ಯಾಣಾರ್ಥವಾಗಿ ಪ್ರದೇಶಾಭಿವೃದ್ಧಿಗಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ನಡೆಯುವುದು. ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎನ್.ವರ್ತೇಶ್,ಪುಟ್ಟಸ್ವಾಮಿಗೌಡ ಕಗ್ಗಲಿ, ಶಿವಪ್ರಕಾಶ ಪಾಟೀಲ್, ನಾಗರಾಜ ಹೊಸಕೆರೆ,ಹಾರಂಬಳ್ಳಿ ಜಗದೀಶ್,ಸದಾನಂದ ಕಾರ್ಗಲ್,ಹೆಚ್.ಎಸ್.ಸತೀಶ್,ಕೆ.ಬಿ.ನಾಗಭೂಷಣ,ನಾಗರಾಜಗೌಡರು ಕುಕ್ಕಳಲೇ,ಶಾಂತಕುಮಾರ್ ಜಂಬಳ್ಳಿ,ಕಮಲಾಕ್ಷ ಜಂಬಳ್ಳಿ,ಇನ್ನಿತರರು ಹಾಜರಿದ್ದರು.
`ಮಳಲಿಮಠದ ದೀಪೋತ್ಸವಕ್ಕೆ ಭಕ್ತರಿಂದ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ’’
ರಿಪ್ಪನ್‌ಪೇಟೆ;-ಸಮೀಪದ ಮಳಲಿಮಠದಲ್ಲಿ ನವಂಬರ್ 26 ರಂದು ಆಯೋಜಿಸಲಾದ ಶ್ರೀ ಗುರು ಪಟ್ಟಾಧಿಕಾರ ರಜತ ಮಹೋತ್ಸವ ಮತ್ತು ಕಾರ್ತೀಕ ದೀಪೋತ್ಸವ ಧರ್ಮ ಸಮಾರಂಭ ಹಾಗೂ ಲೋಕ ಕಲ್ಯಾಣಾರ್ಥವಾಗಿ ರಂಭಾಪುರಿ ಪೀಠದ ಜಗದ್ದುರುಗಳ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದ ಆಂಗವಾಗಿ ಭಕ್ತ ಸಮೂಹದವರು ಶ್ರಮದಾನದ ಮೂಲಕ ಮಠದ ಸುತ್ತಮುತ್ತ ಹಾಗು ಮಠದ ಆವರಣವನ್ನು ಸ್ವಯಂ ಪ್ರೇರಣೆಯೊಂದಿಗೆ ತೆರಳಿ ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು.
ಮಳಲಿಮಠದ ಡಾ.ಗುರುನಾಗಭೂಷಣ ಮಹಾಸ್ವಾಮಿಜಿಯವರ ಮಾರ್ಗದರ್ಶನದಂತೆ ದೀಪಾವಳಿಯ ಬಲಿಪಾಡ್ಯಮಿಯ ದಿನದ ಮಾರನೇ ದಿನ ಮಠದ ಭಕ್ತರು ಸ್ವಯಂ ಪ್ರೇರಿತರಾಗಿ ಮಠಕ್ಕೆ ಬಂದು ತಮ್ಮ ಕಾಯಕ ಸೇವಾಯನ್ನು ನಿರ್ವಹಿಸುವುದು ಈ ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ದತಿಯಾಗಿದೆ.ಅದರಂತೆ ಕಗ್ಗಲಿ ಪುಟ್ಟಸ್ವಾಮಿಗೌಡರು, ಮಳಲಿಕೊಪ್ಪ ಎನ್.ವರ್ತೇಶ್,ಹಾರಂಬಳ್ಳಿ ಜಗದೀಶಗೌಡ, ಶಿವಪ್ರಕಾಶಪಾಟೀಲ್‌ಕಗ್ಗಲಿ, ಸದಾನಂದ ಕಾರ್ಗಲ್,ಜಂಬಳ್ಳಿ ಶಾಂತಕುಮಾರ್,ಕಮಲಾಕ್ಷ,ಜೆ.ಜಿ.ಸದಾನಂದ, ಶೇಖರಪ್ಪ ಬಟ್ಟೆಮಲ್ಲಪ್ಪ,ಅಲವಳ್ಳಿ ನಾಗಾರ್ಜುನಸ್ವಾಮಿ,ನಾಗರಾಜಗೌಡ,
ರವಿಕುಮಾರ ಕೋಟೆಗದ್ದೆ, ಪ್ರಕಾಶ ಅಲುವಳ್ಳಿ,ಜಗದೀಶ ಮುಳಕೇವಿ,ಈಶ್ವರಗೌಡ,ಕರಿಬಸಪ್ಪ,ಸುಗಂಧರಾಜ್,
ಗುರುಪಾದಪ್ಪ,ಜAಬಳ್ಳಿ,ಆಲುವಳ್ಳಿ,ಕರಡಿಗಾ,ಕಾರ್ಗಲ್,ಕಗ್ಗಲಿ,ಕುಕ್ಕಳಲೇ,ಕಂಕಳ್ಳಿ, ಬೆಳಂದೂರು,ಕೊಳವಳ್ಳಿ, ಮುಳುಕೇವಿ,ಹೆದ್ದಾರಿಪುರ, ಬಟ್ಟೆಮಲ್ಲಪ್ಪ,ಇನ್ನಿತರ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಶ್ರಮದಾನದ ಮೂಲಕ ತಮ್ಮ ಸೇವಾ ಕಾರ್ಯವನ್ನು ನೆರವೇರಿಸಿದರು.
ನಂತರ ಮಳಲಿಮಠದ ಡಾ.ಗುರುನಾಗಭೂಷಣ ಮಹಾಸ್ವಾಮಿಜಿಯವರು ಬಂದ ಭಕ್ತರನ್ನು ಆಶೀರ್ವದಿಸಿ ಶುಭಹಾರೈಸಿದರು.