ಮೊಬೈಲ್ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ – ಒಂಬತ್ತು ಮಂದಿ ವಶಕ್ಕೆ|crime-news

ಮೊಬೈಲ್ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ – ಒಂಬತ್ತು ಮಂದಿ ವಶಕ್ಕೆ


ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೊಸಮನೆ ಪ್ರದೇಶದಲ್ಲಿ  ನಿನ್ನೆ ಯುವಕನೊಬ್ಬನಿಗೆ ಮಾರಕಾಸ್ತ್ರದಿಂದ ಇರಿಯಲಾಗಿದೆ. ಘಟನೆಯ ಸಂಬಂಧ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು
ಎಸ್​ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಘಟನೆಯ ಹಿನ್ನಲೆ :

ಭದ್ರಾವತಿಯ ಹೊಸಮನೆಯ ಹನುಮಂತನಗರದಲ್ಲಿ ಗಾರೆ ಕೆಲಸ ಮಾಡುವ ಯುವಕ ನಂದಾ ಎಂಬಾತ ತನ್ನ ಮೊಬೈಲ್​ವೊಂದನ್ನ ಅಡವಿಟ್ಟಿದನಂತೆ. ಅದನ್ನು ಬಿಡಿಸಿಕೊಳ್ಳಲು ಹೋಗಿದ್ದ ಸಂದರ್ಭದಲ್ಲಿ ,ಅಡವಿಟ್ಟುಕೊಂಡಿದ್ದವರು ಮೊಬೈಲ್ ಕೊಡಲು ನಿರಾಕರಿಸಿದ್ದಾರೆ.

ಈ ಸಂಬಂಧ ನಂದಾ ಎಂಬಾತನು ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದಾನೆ. ಇದೇ ವಿಚಾರಕ್ಕೆ ಮೊಬೈಲ್ ಅಡವಿಟ್ಟುಕೊಂಡವರು ಜಗಳ ತೆಗೆದು ನಂದಾನಿಗೆ ಮಾರಕಾಸ್ತ್ರದಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ವಾಟ್ಸ್ಯಾಪ್ ಮೆಸೇಜ್​ನಲ್ಲಿ ಮಾಹಿತಿ ನೀಡಿರುವ ಎಸ್​​ಪಿ ಮಿಥುನ್ ಕುಮಾರ್, ನಿನ್ನೆ ರಾತ್ರಿ ಭದ್ರಾವತಿಯಲ್ಲಿ ಯುವಕನೊಬ್ಬನಿಗೆ ಚೂಪಾದ ವಸ್ತುವಿನಿಂದ ಇರಿಯಲಾಗಿದ್ದು, ಮೈನರ್​ ಇಂಜುರಿಯಾಗಿದೆ.ಪ್ರಕರಣ ಸಂಬಂಧ ಒಂಬತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. 

ಮೊಬೈಲ್​ ಫೋನ್ ಅಡವಿಟ್ಟಿರುವ ವಿಚಾರದಲ್ಲಿ ಹಾಗೂ ವೈಯಕ್ತಿಕ ಕಾರಣಕ್ಕೆ ಈ ಘಟನೆ ನಡೆದಿದ್ದು, ಇದರಲ್ಲಿ ಯಾವುದೇ ಕೋಮು ವಿಚಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  

Leave a Reply

Your email address will not be published. Required fields are marked *