ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ ಗಾಂಧಿನಗರ ಸರ್ಕಲ್ನಲ್ಲಿ ನಿಂತಿದ್ದ KSRTC ಬಸ್ಗೆ ಬೈಕ್ ಡಿಕ್ಕಿಯಾಗಿ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಪಟ್ಟಣದ ಗಾಂಧಿನಗರ ಸರ್ಕಲ್ ನಲ್ಲಿ ನಿಂತಿದ್ದ ಕೆಎಸ್ಆರ್ಟಿಸಿ ಬಸ್ಗೆ ವೇಗದಿಂದ ಬಂದ ಬೈಕ್ವೊಂದು ಹಿಂಬದಿಯಿಂದ ಡಿಕ್ಕಿಯಾಗಿ ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಹಿಂಬದಿಯಿಂದ ಗುದ್ದಿದ ರಭಸಕ್ಕೆ ಬೈಕ್ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆ ಬೆನ್ನಲ್ಲೆ ಪೊಲೀಸರು ಸ್ಥಳಕ್ಕಾಗಮಿಸಿ ಬೈಕ್ ತೆರವುಗೊಳಿಸಿದ್ದಾರೆ.