ಸಮವಸ್ತ್ರದಲ್ಲೇ ಟ್ರಾಫಿಕ್ ಪೊಲೀಸ್ ಆತ್ಮಹತ್ಯೆ – ಪತ್ನಿ ಅಗಲಿದ ಮೂರೇ ದಿನಕ್ಕೆ ಪತಿ ಸಾವು
ಶಿವಮೊಗ್ಗ : ಭಾನುವಾರ ಕರ್ತವ್ಯ ಮುಗಿಸಿಕೊಂಡು ಮನೆಗೆ ಹಿಂದಿರುಗಿದ್ದ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯ ಹೆಡೆ ಕಾನ್ಸ್ಟೇಬಲ್ ಜಯಪ್ಪ ಉಪ್ಪಾರ್ (43) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿನೋಬ ನಗರದ ಮನೆಯಲ್ಲಿ ಜಯಪ್ಪನವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಾಣಾಗಿದ್ದಾರೆ. ಮೂರು ದಿನಗಳ ಹಿಂದೆ ಜಯಪ್ಪ ಅವರ ಪತ್ನಿ ಮೆದುಳು ಜ್ವರದಿಂದ ಸಾವನ್ನಪ್ಪಿದ್ದರು.ಪತ್ನಿಯ ಅಗಲಿಕೆಯಿಂದ ಜಯಪ್ಪ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಜಯಪ್ಪನವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಭಾನುವಾರ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿರುವ ಅವರು ಸಮವಸ್ತ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.