ನರಿಯನ್ನು ಹಿಡಿದ ಹೆಬ್ಬಾವು…!
ಸಾಗರ: ಹೆಬ್ಬಾವೊಂದು ನರಿಯನ್ನು ಹಿಡಿದ ಘಟನೆ ಐ. ಟಿ. ಐ ಕಾಲೇಜ್ ಹತ್ತಿರ ನಡೆದಿದ್ದು, ಹೆಬ್ಬಾವು ನರಿಯನ್ನು ಹಿಡಿದಿರುವ ದೃಶ್ಯ ವೈರಲಾಗಿದೆ.
ತಾಲೂಕಿನ ರಾಮನಗರದ ಸಮೀಪದ ಐ. ಟಿ. ಐ ಕಾಲೇಜ್ ಸಮೀಪ ಹೆಬ್ಬಾವು ನರಿಯನ್ನು ಹಿಡಿದು ತನ್ನ ದೇಹದಿಂದ ಸುತ್ತಿಕೊಂಡು ಸಾಯಿಸಿದೆ. ಇದನ್ನು ಸ್ಥಳೀಯರು ನೋಡಿ ಸ್ನೇಕ್ ಅನುಪ ಅವರಿಗೆ ಮಾಹಿತಿ ತಿಳಿಸಿದ್ದಾರೆ.
ತಕ್ಷಣವೇ ಅರಣ್ಯ ಅಧಿಕಾರಿಗಳ ಜೊತೆಗೆ ಆಗಮಿಸಿ ಹೆಬ್ಬಾವಿನ ರಕ್ಷಣೆ ಮಾಡಿದ್ದಾರೆ. ನಂತರ ಹೆಬ್ಬಾವನ್ನು ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ.