ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ – 144 ಸೆಕ್ಷನ್ ಜಾರಿ
ಶಿವಮೊಗ್ಗ ನಗರದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿದ್ದು, ಇನ್ನೊಂದೆಡೆ ರಾಗಿಗುಡ್ಡದಲ್ಲಿ ಅಹಿತಕರ ಘಟನೆಯೊಂದು ಸಂಭವಿಸಿದೆ. ಸ್ಥಳದಲ್ಲೀಗ 144 ಸೆಕ್ಷನ್ ವಿಧಿಸಲಾಗಿದೆ.
ನಡೆದಿದ್ದೇನು?
ರಾಗಿಗುಡ್ಡದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಸಂಭವಿಸಿದೆ. ಇದರ ಬೆನ್ನಲ್ಲೆ ಪೊಲೀಸರು ಜನರನ್ನು ಚದುರಿಸಿ, ಕೆಲವರನ್ನ ವಶಕ್ಕೆ ಪಡೆದಿದ್ದರು. ಆನಂತರ ಕೆಲವರು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತ ತಿಳಿಗೊಳಿಸಲು ಮುಂದಾದ ಎಸ್ಪಿ ಮಿಥುನ್ ಕುಮಾರ್ ರವರ ಕಡೆಗೂ ಕಲ್ಲು ಬೀಸಿದ್ದಾರೆ. , ಅಲ್ಲಿದ್ದ ಮನೆಗಳು ಹಾಗೂ ವಾಹನಗಳ ಮೇಲೆ ಕಲ್ಲೂ ತೂರಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.
ತಕ್ಷಣವೇ ಸ್ಥಳದಲ್ಲಿದ್ದ ಎಸ್ಪಿ ಮಿಥುನ್ ಕುಮಾರ್, ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಜನರು ಗುಂಪು ಸೇರದಂತೆ ಮನವಿ ಮಾಡಿದ್ದು ವದಂತಿಗಳಿಗೂ ಕಿವಿಗೊಡದಂತೆ ಮನವಿ ಮಾಡಿದ್ದಾರೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಪೊಲೀಸರ ಕಂಟ್ರೋಲ್ನಲ್ಲಿ ಆರ್ಎಎಫ್ ಪಡೆ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ. ಘಟನೆಗಳ ಸಂಬಂಧ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.