“ಜ್ಞಾನ ಸಂಪನ್ನರಾಗಿರಿ, ಭಾರತ ಸಮೃದ್ಧವಾಗಲಿ”:ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ
ರಿಪ್ಪನ್‌ಪೇಟೆ;- ಜ್ಞಾನ ಸಂಪನ್ನರಾಗಿರಿ, ಭಾರತ ಸಮೃದ್ಧವಾಗಲಿ , ಜ್ಞಾನದಿಂದ ಕುಟುಂಬ ಸಮಾಜ ಹಾಗೂ ದೇಶದ ಅಭಿವೃದ್ಧಿ ಸಾಧ್ಯ , ಆಧ್ಯಾತ್ಮಿಕ ಜ್ಞಾನವು ನೆಮ್ಮದಿಯ ಬದುಕಿಗೆ ದಾರಿದೀಪವಾಗಿದೆ ಎಂದು ಹೊಂ ಬುಜ ಜೈನ್ ಮಠದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಹೇಳಿದರು
ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರಾ ಕ್ಷೇತ್ರವಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಶ್ರೀಮಠದ ಜಿನಾಲಯದಲ್ಲಿ ಶುಕ್ರವಾರ ನವರಾತ್ರಿಯ ಅಂಗವಾಗಿ ಶ್ರೀ ಸರಸ್ವತಿದೇವಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ವರಪ್ರದಾಯಿನಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಸಹಸ್ರನಾಮ ಸ್ತುತಿಸಿ, ಭಕ್ತವೃಂದದವರು ಇಷ್ಟಾರ್ಥ ಸಿದ್ಧಗಾಗಿ ಪ್ರಾರ್ಥಿಸಿದರು.
ಪೂರ್ವಪರಂಪರೆಯಂತೆ ಪೀಠಾಧಿಪತಿ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ಶ್ರೀ ನೇಮಿನಾಥ ಸ್ವಾಮಿ ಶ್ರೀ ಕೂಷ್ಮಾಂಡಿನಿ ದೇವಿ ಶ್ರೀ ಕ್ಷೇತ್ರಪಾಲ ಶ್ರೀ ನಾಗಸನ್ನಿಧಿಯಲ್ಲಿ ಪೂಜಾ ವಿಧಾನ ನೆರವೇರಿತು.
ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ಜ್ಞಾನಾರಾಧನೆಯ ಪ್ರತೀಕವಾಗಿ ವಿದ್ಯಾದೇವತೆ ಶ್ರೀ ಸರಸ್ವತಿ ದೇವಿ ಮತ್ತು ವಿಶ್ವವಂದ್ಯ ಶ್ರೀ ಪದ್ಮಾವತಿ ದೇವಿ ಸರ್ವರ ಆಶಯ-ಅಪೇಕ್ಷೆ ಈಡೇರಿಸಿ ಲೋಕಕಲ್ಯಾಣವಾಗಲಿ, ಭಾರತ ಸಮೃದ್ಧವಾಗಲೆಂದು ಹರಸಿ ಶುಭ ಮೂಲ ನಕ್ಷತ್ರದ ನವರಾತ್ರಿಯ ಆರನೇಯ ದಿನದ ಅಂಗವಾಗಿ ದೇಶದ ಹಾಗೂ ರಾಜ್ಯದ ವಿವಿಧಡೆ ಗಳಿಂದ ಆಗಮಿಸಿದ ಭಕ್ತರು ಜಿನವಾಣಿ ಸ್ತುತಿಸಿ, ಅಕ್ಷರಾಭ್ಯಾಸವನ್ನು ಮಕ್ಕಳಿಗೆ ಆರಂಭಿಸಿ ಭವಿಷ್ಯದಲ್ಲಿ ನಿರ್ವಿಘ್ನವಾಗಿ ವಿದ್ಯಾಭ್ಯಾಸ, ಉನ್ನತ ವ್ಯಾಸಂಗಕ್ಕಾಗಿ ಭಕ್ತರು ನಿವೇದಿಸಿದರು.
ರಾತ್ರಿ ಅಷ್ಟಾವಧಾನ ಪರಂಪರಾನುಗತ ಪೂಜೆ, ಸಂಗೀತ, ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಭಾಗಿಯಾಗಿದ್ದರು. ಸೇವಾಕರ್ತೃರಾದ ನೀತು ನವೀನ್ ಜೈನ್, ಶ್ರುತಾಂಜನ ಮೂಡುಬಿದಿರೆಯವರನ್ನು ಶ್ರೀಗಳವರು ಹರಸಿದರು. ಪುರೋಹಿತ ಪದ್ಮರಾಜ ಇಂದ್ರರವರು ಪೂಜಾ ವಿಧಿ ನೆರವೇರಿಸಿದರು.