ರಿಪ್ಪನ್ ಪೇಟೆಯಲ್ಲಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಅಂಗವಾಗಿ 31 ಲಕ್ಷ ರೂ ವೆಚ್ಚದ ರಥ ನಿರ್ಮಾಣ
ರಿಪ್ಪನ್‌ಪೇಟೆ : ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ದೇವಸ್ಥಾನದಲ್ಲಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ನೆರವೇರಿಸುವ ಹಿನ್ನಲೆಯಲ್ಲಿ ಸುಮಾರು 31 ಲಕ್ಷ ರೂ ವೆಚ್ಚದ ರಥ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ.
ಕೆತ್ತನೆ ಕುಸುರಿ ಕೆಲಸಗಾರ ಹರಿಹರಪುರದ ನಾಗರಾಜ್ ಆಚಾರ್ಯ ರವರ ನೇತೃತ್ವದಲ್ಲಿ ರಥ ನಿರ್ಮಾಣಕ್ಕಾಗಿ ಮರದ ಪರಿಕರಗಳು ಶುಕ್ರವಾರ ಸಂಜೆ ಪಟ್ಟಣಕ್ಕೆ ಆಗಮಿಸಿತು.
ರಥ ನಿರ್ಮಾಣದ ಮರದ ಪರಿಕರಗಳು ಪಟ್ಟಣದ ವಿನಾಯಕ ವೃತ್ತಕ್ಕೆ ಆಗಮಿಸುತಿದ್ದಂತೆ ಭಕ್ತಾದಿಗಳು, ದೇವಸ್ಥಾನದ ಧರ್ಮದರ್ಶಿ ಸಮಿತಿಯವರು ಅದ್ದೂರಿಯಾಗಿ ಸ್ವಾಗತಿಸಿ, ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ತರಲಾಯಿತು.
ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ದೇವಸ್ಥಾನದಲ್ಲಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ನೆರವೇರಿಸುವ ಹಿನ್ನಲೆಯಲ್ಲಿ ಸುಮಾರು 31 ಲಕ್ಷ ರೂ ವೆಚ್ಚದ ರಥ ನಿರ್ಮಾಣದ ಹಿನ್ನಲೆಯಲ್ಲಿ “ರಥ” ಕೆತ್ತನೆ ಕುಸುರಿ ಕೆಲಸಗಾರ ಹರಿಹರಪುರದ ನಾಗರಾಜ್ ಅಚಾರ್ಯ ಇವರಿಗೆ ಜವಬ್ದಾರಿಯನ್ನು ವಹಿಸಲಾಗಿದೆ.
ಶ್ರೀ ಸಿದ್ದಿವಿನಾಯಕ ವ್ಯವಸ್ಥಾಪನಾ ಸಮಿತಿ ಹಾಗೂ ಸಿದ್ದಿವಿನಾಯಕ ಸೇವಾ ಸಂಸ್ಥೆ ಭಕ್ತಾಧಿಗಳ ಬಹು ದಿನಗಳ ಬೇಡಿಕೆಯಂತೆ ಈ ಬಾರಿ ಜಾತ್ರಾಮಹೋತ್ಸವ ನಡೆಸಲು ಕಾರ್ಯೋನ್ಮಖರಾಗಿದ್ದು ಈ ವರ್ಷದ ವರ್ಧಂತ್ಯೊತ್ಸವ ಸಂದರ್ಭದಲ್ಲಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಸಲು ತಯಾರಿ ನಡೆಸಲಾಗುತ್ತಿದೆ.
ಈ ಸಂದರ್ಭದಲ್ಲಿ ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಈಶ್ವರ್ ಶೆಟ್ಟಿ, ಎಂ.ಡಿ.ಇಂದ್ರಮ್ಮ, ಗಣೇಶ್ ಎನ್.ಕಾಮತ್,ವೈ.ಜೆ.ಕೃಷ್ಣ, ಮಂಜಪ್ಪ, ಕಗ್ಗಲಿ ಲಿಂಗಪ್ಪ,ಆರ್ ಹೆಚ್ ದೇವದಾಸ್, ಡಿ.ಈ.ಮಧುಸೂದನ್, ಎಸ್.ಎನ್.ಬಾಲಚಂದ್ರ,
ತುಳೋಜಿರಾವ್, ಜಿ.ಎಸ್.ಶ್ರೀವಾಸ, ಹೆಚ್.ಎಸ್.ಸುಧೀಂದ್ರ ಹೆಬ್ಬಾರ್, ಸತೀಶ್ ಕಿಣಿ,ಮಧುಸೂಧನ್ ,ಕೆಇಬಿ ಮೋಹನ್ , ವನಮಾಲ ರಾಘವೇಂದ್ರ, ಜಯಲಕ್ಷ್ಮಿ ಮೋಹನ್, ಇನ್ನಿತರರು ಹಾಜರಿದ್ದರು.