Headlines

ನಾಯಿ ಮರಿ ತಂದು ಬಿಡುವವರು ತಮ್ಮ ಹೆಂಡತಿ ಮಕ್ಕಳನ್ನು ಇಲ್ಲೇ ತಂದು ಬಿಡಿ – ಹೀಗೊಂದು ವಿಚಿತ್ರ ಬ್ಯಾನರ್|TTh

ನಾಯಿ ಮರಿ ತಂದು ಬಿಡುವವರು ತಮ್ಮ ಹೆಂಡತಿ ಮಕ್ಕಳನ್ನು ಇಲ್ಲೇ ತಂದು ಬಿಡಿ

“ನಾಯಿ ಮರಿ ತಂದು ಬಿಡುವವರು ತಮ್ಮ ಹೆಂಡತಿ ಮಕ್ಕಳನ್ನು ಇಲ್ಲೇ ತಂದು ಬಿಡಿ. ಯಾರಾದರೂ ಸಾಕುತ್ತಾರೆ” ಎಂಬ ವಿಚಿತ್ರವಾದ ಬ್ಯಾನರ್ ನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ದೇವಂಗಿ ಸಮೀಪದ ಹಡಗಿನಮಕ್ಕಿ ಗ್ರಾಮದಲ್ಲಿ ಅಳವಡಿಸಲಾಗಿದೆ.

ಹಡಗಿನಮಕ್ಕಿ ಗ್ರಾಮದ ವೃತ್ತವೊಂದರಲ್ಲಿ ಈ ವಿಚಿತ್ರವಾದ ಬ್ಯಾನರ್ ಹಾಕಲಾಗಿದೆ. “ಹಡಗಿನಮಕ್ಕಿ ಗ್ರಾಮದಲ್ಲಿ ನಾಯಿ ಮರಿ ತಂದು ಬಿಡುವವರು ತಮ್ಮ ಹೆಂಡತಿ ಮಕ್ಕಳನ್ನು ಇಲ್ಲೇ ತಂದು ಬಿಡಿ. ಯಾರಾದರೂ ಸಾಕುತ್ತಾರೆ” ಎಂಬ ಅತ್ಯಂತ ಬೇಸರದ ಬ್ಯಾನರ್ ಹಾಕಲಾಗಿದೆ.

ಅನೇಕ ಪ್ರಾಣಿ ಪ್ರೀಯರು ತಮ್ಮ ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಆದರೆ ಮರಿಗಳು ಬೇಡ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ. ಅಪ್ಪಿತಪ್ಪಿ ಸಾಕು ನಾಯಿ ಮರಿಗಳಿಗೆ ಜನ್ಮ ನೀಡಿದರೆ ಮರಿಗಳನ್ನು ಬೀದಿಯಲ್ಲಿ ಬಿಟ್ಟು ಹೋಗುತ್ತಿರುವ ಘಟನೆ ಅನೇಕ ಪ್ರಾಣಿ ಪ್ರೀಯರ ಅಸಮಾಧಾನಕ್ಕೆ ಕಾರಣವಾಗಿದೆ. 

ಮನೆಯಲ್ಲಿ ಹೆಣ್ಣು ಸಾಕು ನಾಯಿ ಇದ್ದರೆ ಅದು ಮರಿ ಹಾಕದಂತೆ ಶಸ್ತಚಿಕಿತ್ಸೆ ಮಾಡಿಸಬಹುದು ಎಂಬುದು ಅನೇಕರಿಗೆ ತಿಳಿಯದ ವಿಚಾರವಾಗಿರುವುದು ಬೇಸರದ ಸಂಗತಿಯಾಗಿದೆ.ಈ ಹಿನ್ನಲೆಯಲ್ಲಿ ಸಾರ್ವಜನಿಕರನ್ನು ಎಚ್ಚರಿಸುವ ಕೆಲಸವನ್ನು ಅನಾಮಧೇಯರು ಈ ತರಹದ ಬ್ಯಾನರ್ ಅಳವಡಿಸಿ ಎಚ್ಚರಿಸುತಿದ್ದಾರೆ.

Leave a Reply

Your email address will not be published. Required fields are marked *