ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರು ವಿಚಲಿತರಾಗುವ ಅಗತ್ಯವಿಲ್ಲ – ಅರ್ ಎ ಚಾಬುಸಾಬ್
ರಿಪ್ಪನ್ಪೇಟೆ : ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರು ರಾಜ್ಯದಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷವು ಚುನಾವಣಾ ಮೈತ್ರಿ ಮಾಡಿಕೊಂಡಿರುವುದರಿಂದ ಹಿಂದಿನಿಂದಲೂ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿರುವ ರಾಜ್ಯದ ಬಹುಪಾಲು ಅಲ್ಪಸಂಖ್ಯಾತರು ವಿಚಲಿತವಾಗುವ ಅಗತ್ಯವಿಲ್ಲ. ರಾಷ್ಟ್ರೀಯತೆಯ ಜೊತೆಗೆ ಪ್ರಾದೇಶಿಕ ಅಸ್ಮಿತೆಯನ್ನು ಉಳಿಸುವುದು ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ. ದೇವೇಗೌಡರ ಉದ್ದೇಶವಾಗಿದೆ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾದ ಆರ್.ಎ, ಚಾಬುಸಾಬ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಪತ್ರೀಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಜನತಾದಳದ ಜ್ಯಾತ್ಯಾತೀತ ನಿಲುವಿನಿಂದಲೇ ದೇಶದ ಪ್ರಧಾನಿಯಾದ ಹೆಚ್.ಡಿ. ದೇವೇಗೌಡರು ಅನ್ನಧಾತರಿಗೆ ಹೆಚ್ಚಿನ ಆದ್ಯತೆನೀಡಿ ರೈತರ ಪ್ರಧಾನಿ ಹಾಗೂ ಸರ್ವಸಮಾನತೆಯ ಪ್ರತಿಪಾದಕರೆಂದು ಎನಿಸಿಕೊಂಡಿದ್ದಾರೆ.
ರಾಜ್ಯದ ಮಾಜಿ ಮುಖ್ಯಮಂತ್ರಿಯಾದ ಹೆಚ್.ಡಿ. ಕುಮಾರಸ್ವಾಮಿಯವರು ಸಂವಿಧಾನದ ಆಷೆಯದಂತೆ ಸರ್ವಧರ್ಮ ಸಮನ್ವತೆ ಸಾಧಿಸುವುದರೊಂದಿಗೆ ಎಲ್ಲಾ ಜನಾಂಗದ ಅಭಿವೃದ್ಧಿಗೆ ಸೂಕ್ತ ಯೋಜನೆಗಳನ್ನು ರೂಪಿಸಿ ನೀಡಿದ ಹೆಚ್ಚಿನ ಅನುದಾನವನ್ನು ಮುಸ್ಲಿಂ ಸಮುದಾಯವು ಬಹುಪಾಲು ಪಡೆದುಕೊಂಡಿದೆ.
ಕರ್ನಾಟಕ ಮಾಜಿ ಹಾಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರ ಅಭಿವೃದ್ಧಿ ಪರ ಚಿಂತನೆಗಳನ್ನು ಮೆಚ್ಚಿಕೊಂಡು ನಮ್ಮ ನಾಯಕರು ದ್ವೇಷದಿಂದ ಗೆಲ್ಲಲಾಗದನ್ನು ಪ್ರೀತಿಯಿಂದ ಸಾಧಿಸಬಹುದು ಎಂಬುದನ್ನು ಸಾರಲು ಮೈತ್ರಿಯ ಅಗತ್ಯವನ್ನು ಮನಗೊಂಡಿದ್ದಾರೆ. ಹಿಂದಿನಿಂದಲೂ ಅವಿರತ ಪಾಲಿಸಿಕೊಂಡು ಬಂದಿರುವ ಜ್ಯಾತ್ಯಾತೀತ ನಿಲುವಿನ ಸಿದ್ಧಾಂತದಲ್ಲಿ ಯಾವುದೇ ರಾಜಿಯಿಲ್ಲದೆ ರಾಜ್ಯದ ಸರ್ವಜನರ ಸಮಗ್ರ ಅಭಿವೃದ್ಧಿಗಾಗಿ ಒಂದುಗೂಡಲಾಗಿದೆ.
ರಾಜಕೀಯ ಲಾಭಕ್ಕಾಗಿ ಕೆಲವು ಮುಸ್ಲಿಂ ನಾಯಕರು ಮೈತ್ರಿಯ ನೆಪ ಹೇಳಿ ಪಕ್ಷ ತೊರೆದರೂ ರಾಜ್ಯದ ಲಕ್ಷಾಂತರ ಮುಸ್ಲಿಂ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಕ್ಷದ ಜೊತೆಗಿದ್ದು, ಪಕ್ಷ ತೊರೆಯುವ ನಿಲುವನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ.
ಜೆಡಿಎಸ್ ಪಕ್ಷವನ್ನು ಸದೃಢಗೊಳಿಸುವ ಉದ್ದೇಶಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆ, ಬಿಬಿಎಂ ಚುನಾವಣೆ, ಜಿಲ್ಲಾ-ತಾಲ್ಲೂಕು ಪಂಚಾಯತಿಗಳ ಚುನಾವಣೆಗಳಲ್ಲಿ ಮೈತ್ರಿಯ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮುಖಂತಾರ ಕರ್ನಾಟಕದಲ್ಲಿ ಕಾಂಗ್ರೇಸ್ ಪಕ್ಷವನ್ನು ಪರಾಭವಗೊಳಿಸಲಾಗುವುದೆಂದು ಮತ್ತು ಮೈತ್ರಿಯನ್ನು ಮುಂದುವರೆಸಿಕೊಂಡು ಹೋಗಲಾಗುವುದೆಂದು ಹೆಚ್.ಡಿ. ದೇವೇಗೌಡರು ಹಾಗೂ ಹೆಚ್.ಡಿ. ಕುಮಾರಸ್ವಾಮಿಯವರು ಮುಸ್ಲಿಂ ಮುಖಂಡರಿಗೆ ತಿಳಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಮುಖಂಡ ಜಿ.ಎಸ್. ವರದರಾಜ್, ಹೊಸನಗರ ತಾಲೂಕ್ ಜೆಡಿಎಸ್ ಅಧ್ಯಕ್ಷ ಎನ್. ವರ್ತೇಶ್,ಮುಖಂಡರಾದ ಆರ್.ಎನ್. ಮಂಜುನಾಥ್, ಕಲ್ಲೂರು ಈರಪ್ಪ, ದೂನ ರಾಜಣ್ಣ, ಮುಸ್ತಫಾ ಹಾಜರಿದ್ದರು.