Headlines

ರಿಪ್ಪನ್‌ಪೇಟೆ : 3 ಜಾನುವಾರು ಸಾವು – 2 ಅಸ್ವಸ್ಥ ; ವಿಷ ಮಿಶ್ರಿತ ಮೇವು ಸೇವಿಸಿರುವ ಶಂಕೆ

ರಿಪ್ಪನ್‌ಪೇಟೆ : 3 ಜಾನುವಾರು ಸಾವು – 2 ಅಸ್ವಸ್ಥ,; ವಿಷ ಮಿಶ್ರಿತ ಮೇವು ಸೇವಿಸಿರುವ ಶಂಕೆ

ರಿಪ್ಪನ್‌ಪೇಟೆ : ವಿಷ ಮಿಶ್ರಿತ ಮೇವನ್ನು ಸೇವಿಸಿ 03 ಜಾನುವಾರುಗಳು ಮೃತಪಟ್ಟು, 2ಕ್ಕೂ ಹೆಚ್ಚು ಜಾನುವಾರುಗಳು ಅಸ್ವಸ್ಥಗೊಂಡಿರುವ ಘಟನೆ ಕೆರೆಹಳ್ಳಿ ಗ್ರಾಮದಲ್ಲಿ ನಡೆದಿದೆ.


ಕೆರೆಹಳ್ಳಿ ಗ್ರಾಮದ ಕೆ ಬಿ ಈಶ್ವರ್ ರಾವ್ ರವರಿಗೆ ಸೇರಿದ್ದ 2 ಎಮ್ಮೆ,ಅನುರಾಜ್ ಎಂಬುವವರಿಗೆ ಸೇರಿದ್ದ 1 ದನ ಮೃತಪಟ್ಟಿದ್ದರೆ,ಕಿರಣ್ ಎಂಬುವವರಿಗೆ ಸೇರಿದ್ದ 2 ದನಗಳು ಗಂಭೀರ ಸ್ಥಿತಿಯಲ್ಲಿದೆ.

ಏನಿದು ಘಟನೆ:

 ಕೆರೆಹಳ್ಳಿ ಗ್ರಾಮದಲ್ಲಿ ಮೇಯಲು ಹೊರಟಿದ್ದ ಕೆಲ ಜಾನುವಾರು ಅಲ್ಲಲ್ಲಿ ಮೃತಪಟ್ಟಿವೆ. ಇನ್ನು ಕೆಲ ಜಾನುವಾರುಗಳು ಹೊಟ್ಟೆ ಉಬ್ಬಿಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸ್ಥಿತಿಯಲ್ಲಿ ಕಂಡುಬಂದಿವೆ.

ಇದನ್ನು ಗಮನಿಸಿದ ಕೂಡಲೇ ಗ್ರಾಮಸ್ಥರು ಆತಂಕಕ್ಕೀಡಾಗಿ ಪಶು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪಶು ಇಲಾಖೆ ಪರಿವೀಕ್ಷಕ ರಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜಾನುವಾರುಗಳಿಗೆ ಅಗತ್ಯ ಔಷಧೋಪಚಾರ ನೀಡಿದ್ದಾರೆ.

ವಿಷಪೂರಣ ಶಂಕೆ?: 

ಜಾನುವಾರುಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಗ್ರಾಮದ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದ್ದು ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ. ಇನ್ನು ಕೆಲವರು ಜಮೀನಿನಲ್ಲಿ ಬೆಳೆಗಳಿಗೆ ಸಿಂಪಡಿಸಿದ್ದ ಕ್ರಿಮಿನಾಶಕಯುಕ್ತ ಮೇವು ಸೇವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಸಾವಿಗೀಡಾಗಿರುವ ಜಾನುವಾರುಗಳ ಮರಣೋತ್ತರ ಪರೀಕ್ಷೆಯ ವರದಿ ಹೊರಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿದು ಬರಲಿದೆ.

Leave a Reply

Your email address will not be published. Required fields are marked *