ನಮ್ಮ ಪೋಸ್ಟ್ ಮ್ಯಾನ್ ನ್ಯೂಸ್(POSTMAN NEWS) ನ ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ! ಇಲ್ಲಿ ನೀವು ಸೇಫ್,, ನಿಮ್ಮ ನಂಬರ್ ಕೂಡ ಸೇಫ್! ಯಾರಿಗೂ ತಿಳಿಯದು ನಿಮ್ಮ ವಿವರ! ಯಾವಾಗ ಬೇಕಾದರು  ಸುದ್ದಿ ಓದಿ, ವಾಟ್ಸಾಪ್ ಆಪ್ ಅಪ್ಡೇಟ್ ಮಾಡಿದ್ದಲ್ಲಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ – ಬಲಬದಿಯಲ್ಲಿರುವ follow ಬಟನ್ ಕ್ಲಿಕ್ ಮಾಡಿ..
ವಾಟ್ಸಾಪ್ (Whatsapp) ಬಳಕೆದಾರರು ಈಗಾಗಲೇ ಸಾಕಷ್ಟು ವಿವಿಧ ಫೀಚರ್ಸ್ ಮೂಲಕ ಹೊಸ ಹೊಸ ಸೇವೆ ಪಡೆಯುತ್ತಿದ್ದಾರೆ. ಈ ನಡುವೆ ವಾಟ್ಸಾಪ್ ಚಾನಲ್ಸ್ ಎಂಬ ಹೊಸ ಫೀಚರ್ಸ್ ಅನ್ನು ಘೋಷಣೆ ಮಾಡಿದ್ದು, ಇದು ಎಲ್ಲಾ ಕಡೆ ತನ್ನದೇ ಆದ ರೀತಿಯಲ್ಲಿ ಪ್ರಭಾವ ಬೀರಿದೆ. ಈ ಕಾರಣಕ್ಕೆ ಮೋದಿ ಹಾಗೂ ಸಿದ್ದರಾಮಯ್ಯ(Narendra modi, siddaramaiah) ಸಹ ಈ ಸೌಲಭ್ಯ ಪಡೆಯುತ್ತಿದ್ದಾರೆ.
ಹೌದು, ಟೆಕ್ನಾಲಜಿ ಅಭಿವೃದ್ಧಿಯಾಗಿತ್ತಿದ್ದಂತೆ ಜನರೊಂದಿಗಿನ ಪರಸ್ಪರ ಸಂಪರ್ಕ ಇನ್ನಷ್ಟು ಸರಳವಾಗುತ್ತಿದೆ. ಅದರಲ್ಲೂ ಪ್ರಮುಖ ಮೆಸೆಜಿಂಗ್ ಆಪ್ ಆಗಿರುವ ವಾಟ್ಸಾಪ್ ಬಳಕೆದಾರರಿಗೆ ವಿವಿಧ ಫೀಚರ್ಸ್ ಅನ್ನು ಪರಿಚಯಿಸುವ ಮೂಲಕ ಹೊಸ ಅನುಭವ ಪಡೆಯುತ್ತಿದ್ದಾರೆ. ಹಾಗಿದ್ರೆ ಏನಿದು ಹೊಸ ಚಾನಲ್ಸ್ ಫೀಚರ್ಸ್ ಹಾಗೂ ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಿ ಮೋದಿ ಅವರು ಇದನ್ನು ಯಾಕೆ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ವಾಟ್ಸಾಪ್ ಚಾನಲ್ಸ್ ಫೀಚರ್ಸ್: 
ಇನ್ಸ್ಟಂಟ್ ಮೆಸೆಜ್ ಆಪ್ ಆಗಿರುವ ವಾಟ್ಸಾಪ್ ಇತ್ತೀಚೆಗೆ ಬಳಕೆದಾರರಿಗಾಗಿ ಚಾನಲ್ಸ್ ಫೀಚರ್ಸ್ (WhatsApp Channels Features) ಪರಿಚಯಿಸಿದೆ. ಈ ಹೊಸ ಫೀಚರ್ಸ್ ಅನ್ನು ಬಳಕೆ ಮಾಡಿಕೊಂಡು ಬಳಕೆದಾರರು ತಮಗೆ ಆಸಕ್ತಿಯಿರುವ ಮತ್ತು ಅಪ್ಡೇಟ್ಗಳನ್ನು ಸ್ವೀಕರಿಸಲು ಬಯಸುವ ಜನರು ಅಥವಾ ಸಂಸ್ಥೆಗಳ ಸ್ಥಳಗಳಿಗೆ ನೇರವಾಗಿ ಸೇರಿಕೊಳ್ಳಬಹುದು. ಅಪ್ಡೇಟ್ಗಳನ್ನು ನೇರವಾಗಿ ಹಂಚಿಕೊಳ್ಳಲು ಅನುಯಾಯಿಗಳಿಗಾಗಿ ಚಾನಲ್ ನೀವೇ ಕ್ರಿಯೇಟ್ ಮಾಡಿಕೊಳ್ಳಬಹುದು.
ಈ ಹೊಸ ಫೀಚರ್ಸ್ ‘ಅಪ್ಡೇಟ್ಸ್’ ಕಾಲಮ್ನಲ್ಲಿರುವ ವೈಯಕ್ತಿಕ ಮೆಸೆಜ್ ಮತ್ತು ಕರೆಗಳಿಂದ ದೂರವಿರುವ ಆಪ್ನ ಪ್ರತ್ಯೇಕ ವಿಭಾಗದಲ್ಲಿ ಕಾಣಿಸಿಕೊಂಡಿದೆ. ಅಪ್ಡೇಟ್ಗಳನ್ನು ನೇರವಾಗಿ ಹಂಚಿಕೊಳ್ಳಲು ಅನುಯಾಯಿಗಳಿಗಾಗಿ ಚಾನಲ್ ಅನ್ನು ರಚಿಸಲು ನೀವು ಬಯಸಿದರೆ. ನಿಮ್ಮ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಬೇಕಿದೆ. ಅದರಲ್ಲೂ ಈ ವಿಶೇಷ ಫೀಚರ್ಸ್ ಭಾರತದಾದ್ಯಂತ ಎಲ್ಲಾ ಬಳಕೆದಾರರಿಗೆ ಲಭ್ಯವಿಲ್ಲ. ಇದು ಕೆಲವು ಬಳಕೆದಾರರಿಗೆ ಮಾತ್ರ ಲಭ್ಯ ಎನ್ನಬಹುದು.
ಮೋದಿ, ಸಿದ್ದರಾಮಯ್ಯರಿಗೂ ಈ ಫೀಚರ್ಸ್ ಅಂದ್ರೆ ಇಷ್ಟ: 
ಭಾರತ ಸೇರಿದಂತೆ 150 ಕ್ಕೂ ಹೆಚ್ಚು ದೇಶಗಳಲ್ಲಿ ಕಳೆದ ವಾರ ಮೆಟಾ ವಾಟ್ಸಾಪ್ ಈ ಸೇವೆಯನ್ನು ಆರಂಭ ಮಾಡಿದೆ. ಈಗ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸಹ ಈ ಚಾನೆಲ್ ಖಾತೆ ಆರಂಭಿಸಿದ್ದಾರೆ. ಈ ಮೂಲಕ ದೇಶದ ಜನರು ನೇರವಾಗಿ ಇವರನ್ನು ಸಂಪರ್ಕ ಮಾಡಬಹುದಾಗಿದೆ. ಈ ಸಂಬಂಧ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಈ ಲಿಂಕ್ ಕ್ಲಿಕ್ ಮಾಡಿ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ
ಅಂದರೆ ಚಾನಲ್ಸ್ನಲ್ಲಿಯೇ ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಮಾಹಿತಿಯಲ್ಲಿ ಹೊಸ ಸಂಸತ್ತಿನ ಕಟ್ಟಡದಲ್ಲಿರುವ ತಮ್ಮ ಕಚೇರಿಯಲ್ಲಿ ಕೆಲಸದಲ್ಲಿ ಮುಳುಗಿರುವ ಪ್ರಧಾನಿಯ ಫೋಟೋವನ್ನು ಹಾಕಲಾಗಿದೆ. ಶೀರ್ಷಿಕೆಯಲ್ಲಿ, ವಾಟ್ಸಾಪ್ ಸಮುದಾಯವನ್ನು ಸೇರಲು ರೋಮಾಂಚನವಾಗಿದೆ! ಇದು ನಮ್ಮ ಮುಂದುವರಿದ ಪ್ರಯಾಣದಲ್ಲಿ ಇನ್ನೂ ಒಂದು ಹೆಜ್ಜೆ ಹತ್ತಿರವಾಗಿದೆ. ಇಲ್ಲಿ ಸಂಪರ್ಕದಲ್ಲಿರೋಣ! ಹೊಸ ಸಂಸತ್ತಿನ ಕಟ್ಟಡದ ಚಿತ್ರ ಇಲ್ಲಿದೆ ಎಂದು ಬರೆಯಲಾಗಿದೆ. ಈ ಪೋಸ್ಟ್ ನಿಮಿಷಗಳಲ್ಲಿ ಸುಮಾರು 200 ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ ಮತ್ತು ಚಾನಲ್ 17,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.
ವಾಟ್ಸಾಪ್ ಚಾನಲ್ಸ್ ಆರಂಭಿಸಿದ ಮೊದಲ ಮುಖ್ಯಮಂತ್ರಿ
 ಸಿದ್ದರಾಮಯ್ಯ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಟ್ಸಾಪ್ ಚಾನಲ್ಸ್ ಅನ್ನು ಪ್ರಾರಂಭಿಸಲು ಮತ್ತು ಸಮೂಹ ಸಂವಹನವನ್ನು ಸಾಧಿಸಲು ಮುಂದಾಗಿರುವ ಮೊದಲ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 12 ರಂದು ಈ ಚಾನಲ್ಸ್ ಆರಂಭಿಸಿದ್ದು, ಈಗಾಗಲೇ ಅವರು 50,000ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.
ಈ ಲಿಂಕ್ ಕ್ಲಿಕ್ ಮಾಡಿ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ
ಪ್ರಮುಖ ವಿಷಯ ಏನೆಂದರೆ ದೇಶದ ಇತರೆ ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ವಾಟ್ಸಾಪ್ ಚಾನೆಲ್ ಆರಂಭಿಸಿದವರಲ್ಲಿ ಸಿದ್ದರಾಮಯ್ಯ ಮೊದಲಿಗರಾಗಿದ್ದಾರೆ. ಸರ್ಕಾರದ ದೈನಂದಿನ ವಿದ್ಯಮಾನಗಳ ಮಾಹಿತಿಯನ್ನು ಜನರ ಬೆರಳ ತುದಿಯಲ್ಲೇ ಈ ಮೂಲಕ ನೀಡಲು ಸಜ್ಜಾಗಿದ್ದಾರೆ. ಅದರಂತೆ ಆಡಳಿತವನ್ನು ಹೆಚ್ಚು ಪಾರದರ್ಶಕಗೊಳಿಸಲು ಕರ್ನಾಟಕ ಮುಖ್ಯಮಂತ್ರಿ ಎಂಬ ಚಾನಲ್ ಅನ್ನು ಪ್ರಾರಂಭಿಸಲಾಗಿದೆ.
ಇನ್ನು ಹೊಸ ವಾಟ್ಸಾಪ್ನ ಫೀಚರ್ಸ್ ಅನ್ನು ಲಾಂಚ್ ಮಾಡಿ ಮಾಹಿತಿ ನೀಡಿರುವ ಮೆಟಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್ಬರ್ಗ್, ಇಂದು ನಾವು ಜಾಗತಿಕವಾಗಿ ವಾಟ್ಸಾಪ್ ಚಾನೆಲ್ಗಳನ್ನು ಹೊರತರಲು ಮುಂದಾಗಿದ್ದೇವೆ. ಜನರು ವಾಟ್ಸಾಪ್ನಲ್ಲಿ ಅನುಸರಿಸಬಹುದಾದ ಸಾವಿರಾರು ಹೊಸ ಚಾನಲ್ಗಳನ್ನು ಸೇರಿಸುತ್ತಿದ್ದೇವೆ. ನೀವು ಹೊಸ ಚಾನಲ್ಗಳನ್ನು ಕಾಣಬಹುದು ಎಂದು ಉಲ್ಲೇಖಿಸಿದ್ದಾರೆ.
ನಮ್ಮ ಪೋಸ್ಟ್ ಮ್ಯಾನ್ ನ್ಯೂಸ್(POSTMAN NEWS) ನ ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ! ಇಲ್ಲಿ ನೀವು ಸೇಫ್,, ನಿಮ್ಮ ನಂಬರ್ ಕೂಡ ಸೇಫ್! ಯಾರಿಗೂ ತಿಳಿಯದು ನಿಮ್ಮ ವಿವರ! ಯಾವಾಗ ಬೇಕಾದರು  ಸುದ್ದಿ ಓದಿ, ವಾಟ್ಸಾಪ್ ಆಪ್ ಅಪ್ಡೇಟ್ ಮಾಡಿದ್ದಲ್ಲಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ – ಬಲಬದಿಯಲ್ಲಿರುವ follow ಬಟನ್ ಕ್ಲಿಕ್ ಮಾಡಿ
 
                         
                         
                         
                         
                         
                         
                         
                         
                         
                        
