ಯುವಕನೊಬ್ಬನಿಗೆ ಹುಡುಗಿ ಹೆಸರಿನಲ್ಲಿ 99 ಲಕ್ಷ ರೂಪಾಯಿ ವಂಚನೆ ಮಾಡಿದ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ.
ಘಟನೆಯ ಹಿನ್ನಲೆ :
ಶಿವಮೊಗ್ಗ ನಗರದ ಯುವಕನೊಬ್ಬ ಏಪ್ರಿಲ್ ತಿಂಗಳಿನಲ್ಲಿ ಮದುವೆ ಮ್ಯಾಟ್ರಿಮೋನಿ ಆ್ಯಪ್ವೊಂದರಲ್ಲಿ ಒಬ್ಬಾಕೆಯ ಪ್ರೊಫೈಲ್ ನೋಡಿ ಅವರೊಂದಿಗೆ ಚಾಟ್ ಆರಂಭಿಸಿದ್ದರು. ಪರಸ್ಪರ ಪರಿಚಯ ಮಾಡಿಕೊಂಡು ಮಾತುಕತೆ ಮುಂದುವರಿಸಿದ್ದಾರೆ. ಈ ನಡುವೆ ಯುವತಿಯು ತನ್ನ ಹೆಸರನ್ನ ಸ್ವಪ್ನ ಅಂತ ತಿಳಿಸಿ ಯುವಕನೊಂದಿಗೆ ಸಲುಗೆ ಬೆಳೆಸಿದ್ದಾಳೆ.
ತಾನು ಲಂಡನ್ ದೇಶದಲ್ಲಿ ನನ್ನ ಚಿಕ್ಕಪ್ಪನ ಜೊತೆ ವಾಸವಾಗಿದ್ದೇನೆ ತಮ್ಮ ಚಿಕ್ಕಪ್ಪ Wall Street ನಲ್ಲಿ Market Analyst ಆಗಿದ್ದಾರೆ, ಅಲ್ಲಿ ಟ್ರೇಡಿಂಗ್ ಮಾಡಿ ಲಾಭ ಗಳಿಸ್ತಿದ್ದೇನೆ ಎಂದು ವಿವರಿಸಿದ್ದಾಳೆ.
ಟ್ರೇಡಿಂಗ್ ನಲ್ಲಿ ನೀವು ದುಡ್ಡು ಮಾಡಬೇಕು ಅಂದರೆ ಲಿಂಕ್ ಕಳಿಸ್ತೇನೆ ಜಾಯಿನ್ ಆಗಿ ಎಂದಿದ್ದಾಳೆ.
ಇದನ್ನು ನಂಬಿದ ಯುವಕ ಯುವತಿ ಹೇಳಿದ ಲಿಂಕ್ ಕ್ಲಿಕ್ ಮಾಡಿ ಆ್ಯಪ್ ಡೌನ್ ಮಾಡಿ, ಪ್ರೊಸಿಜರ್ ಮುಗಿಸಿದ್ದಾನೆ. ಆನಂತರ ಆ್ಯಪ್ನಲ್ಲಿ ಸೂಚಿಸಿದಂತೆ ವಿವಿಧ ಹಂತಗಳಲ್ಲಿ ಬರೋಬ್ಬರಿ 99,03,000/-ರೂಪಾಯಿಯನ್ನು ಇನ್ವೆಸ್ಟ್ ಮಾಡಿದ್ದಾರೆ. ಆನಂತರ ಯುವತಿ ಹಾಗೂ ಹಾಕಿದ ಹಣ ಎರಡು ಕೂಡ ಮೋಸ ಎಂಬುದು ಗೊತ್ತಾಗಿದೆ.
ತಕ್ಷಣವೇ ಯುವಕ ಶಿವಮೊಗ್ಗದ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.