ಬಿಲ್ಲೇಶ್ವರದಲ್ಲಿ ಚಲಿಸುತಿದ್ದ ಬೈಕ್ ಮೇಲೆ ಟಿಂಬರ್ ಲಾರಿಯಿಂದ ಮರದ ತುಂಡು ಬಿದ್ದು ಬೈಕ್ ಸವಾರ ಗಂಭೀರ – ಮೆಗ್ಗಾನ್ ಗೆ ರವಾನೆ
ರಿಪ್ಪನ್ಪೇಟೆ : ಇಲ್ಲಿನ ಸಮೀಪದ ಬಿಲ್ಲೇಶ್ವರದಲ್ಲಿ ಚಲಿಸುತಿದ್ದ ಬೈಕ್ ಸವಾರನ ಮೇಲೆ ಟಿಂಬರ್ ಲಾರಿಯಿಂದ ಮರದ ತುಂಡು ಬಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಕಡಸೂರು ಗ್ರಾಮದ ನವೀನ್(32) ಗಂಭೀರ ಗಾಯಗೊಂಡಿದ್ದಾರೆ
ಬಿಲ್ಲೇಶ್ವರ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತಿದ್ದ ನವೀನ್ ಕುತ್ತಿಗೆಯ ಮೇಲೆ ಟಿಂಬರ್ ಲಾರಿಯಲ್ಲಿದ್ದ ಮರದ ತುಂಡು ಬಿದ್ದ ಪರಿಣಾಮ ಗಾಯಾಳುವಿನ ಕುತ್ತಿಗೆಯ ಭಾಗ ತುಂಡಾಗಿ ತೀವ್ರ ರಕ್ತಸ್ರಾವವಾಗಿದೆ.ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ.
ವಿಷಯ ತಿಳಿಯುತ್ತಿದ್ದಂತೆ 108 ಸಿಬ್ಬಂದಿಗಳಾದ ಯಲ್ಲಪ್ಪ ಹಾಗೂ ಮಂಜುನಾಥ್ ಸ್ಥಳಕ್ಕೆ ತೆರಳಿ ಗಾಯಾಳುವಿಗೆ ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ದಿದ್ದಾರೆ.
ಟಿಂಬರ್ ಲಾರಿಯವರ ನಿರ್ಲಕ್ಷ್ಯದಿಂದ ಈ ಅಪಘಾತ ನಡೆದಿದೆ ಎಂದು ಸ್ಥಳೀಯರು ಆರೋಪಿಸುತಿದ್ದಾರೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.
ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.