ರಿಪ್ಪನ್‌ಪೇಟೆಯ ಗವಟೂರಿನಲ್ಲಿ‌ ನೂತನ ಮದ್ಯದಂಗಡಿ ಆರಂಭಕ್ಕೆ ಭಾರಿ ವಿರೋಧ|protest

ರಿಪ್ಪನ್ ಪೇಟೆ : ಪಟ್ಟಣದ ಗವಟೂರಿನಲ್ಲಿ ನೂತನವಾಗಿ ತೆರೆಯಲು ಹೊರಟಿರುವ ಮಧ್ಯದ ಅಂಗಡಿಗೆ ಸಾರ್ವಜನಿಕರಿಂದ ಬಾರಿ ವಿರೋಧ ವ್ಯಕ್ತವಾಗಿದೆ.


ಗವಟೂರಿನ ಖಾಸಗಿ ಕಟ್ಟಡ ಒಂದರಲ್ಲಿ ನೂತನವಾಗಿ ಸಿ ಎಲ್ 7 ಮದ್ಯದ ಅಂಗಡಿ ತೆರವಿಗೆ ಸರ್ಕಾರದಿಂದ ಲೈಸೆನ್ಸ್ ದೊರತ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಮದ್ಯದ ಲೋಡ್ ನ್ನು ಇಳಿಸುತ್ತಿದ್ದಾಗ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮದ್ಯ ತುಂಬಿದ್ದ ವಾಹನವನ್ನು ತಡೆ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆದಿದ್ದು ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಮದ್ಯ ತುಂಬಿದ್ದ ವಾಹನವನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಇಂದು ಬೆಳಗ್ಗೆಯಿಂದಲೇ ಗವಟೂರು ಗ್ರಾಮದ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಪೊಲೀಸ್ ಠಾಣೆ ಮುಂಭಾಗದಲ್ಲಿ ನೆರೆದಿದ್ದು ಯಾವುದೇ ಕಾರಣಕ್ಕೂ ನಮ್ಮ ಗವಟೂರಿನಲ್ಲಿ ನೂತನ ಮಧ್ಯದಂಗಡಿ ಪ್ರಾರಂಭಿಸಬಾರದು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.


 ನಮಗೆ ಸರ್ಕಾರದಿಂದ ಲೈಸೆನ್ಸ್ ದೊರೆತಿದ್ದು ಆ ಹಿನ್ನಲೆಯಲ್ಲಿ ಬಾರ್ ತೆರೆಯಲು ಮುಂದಾಗಿದ್ದೇವೆ ಸನ್ನದು ನೀಡಲು ಅಬಕಾರಿ ಆಯುಕ್ತರು, ಖುದ್ದು ಸ್ಥಳ ಪರಿಶೀಲನೆಯ ಬಳಿಕವೇ ಅನುಮತಿ ನೀಡಿದ್ದು ಹೀಗಾಗಿ ನಮಗೆ ರಕ್ಷಣೆ ನೀಡಬೇಕೆಂದು ನೂತನ ಬಾರ್ ಮಾಲೀಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಸ್ಥಳಕ್ಕೆ ಡಿ ವೈ ಎಸ್ ಪಿ ಗಜಾನನ ವಾಮನಸುತರ ಆಗಮಿಸಿದ್ದು ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ ಸ್ಥಳಕ್ಕೆ ಅಬಕಾರಿ ಜಿಲ್ಲಾಧಿಕಾರಿಯನ್ನು ಕರೆಸುವ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *