ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ಕೇಂದ್ರ ಕಾರಾಗೃಹದ ಖೈದಿಗೆ ಗಾಂಜಾ ಸಪ್ಲೇ ಮಾಡಲು ಬಂದಿದ್ದ ಓರ್ವನನ್ನ ಡಿಎಆರ್ ಪೊಲೀಸರು ಹಿಡಿದು ದೊಡ್ಟಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಅಸ್ಲಾಮ್ ಎಂಬ ಕೈದಿಯು ಇಂದು ಅನಾರೋಗ್ಯದ ಹಿನ್ನಲೆಯಲ್ಲಿ ಇಂದು ಮೆಗ್ಗಾನ್ ಗೆ ಡಿಎಆರ್ ಪೊಲೀಸರು ಕರೆತಂದಿದ್ದರು. ಈತನಿಗೆ ಜಿಲಾನ್ ಎಂಬಾತನು ಗಾಂಜಾ ನೀಡಲು ಮುಂದಾಗಿದ್ದಾನೆ.
ತಕ್ಷಣವೇ ಅಲರ್ಟ್ ಆದ ಡಿಎಆರ್ ಪೊಲೀಸರು ಯುವಕನನ್ನು ಹಿಡಿದು ದೊಡ್ಡಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರಿಬ್ವರ ಮೇಲೆ ಗಾಂಜಾದ ಮತ್ತೊಂದು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಈ ಹಿಂದೆ ವೈದ್ಯಕೀಯ ಪರೀಕ್ಷೆಗೆ ಕರೆತಂದ ಖೈದಿಗೆ ಗಾಂಜಾ ಸಪ್ಲೆ ಮಾಡಲಾಗಿತ್ಯು. ಈ ವೇಳೆ ಡಿಎಆರ್ ಪೊಲೀಸರನ್ನ ಅಮಾನತ್ತು ಮಾಡಲಾಗಿತ್ತು.
ಈ ಆಲಮ್ ಎಂಬಾತನು ನಾಲ್ಕು ತಿಂಗಳ ಹಿಂದಷ್ಟೆ ವಿದ್ಯಾನಗರದಲ್ಲಿ ಒಂದು ಮರ್ಡೆರ್ ಆಗಿತ್ತು. ಈ ಮರ್ಡರ್ ಪ್ರಕರಣದ ಆರೋಪಿಯಾಗಿದ್ದಾನೆ. ಜಿಲಾನ್ ಸಹ ಟ್ವಿಸ್ಟ್ ಇಮ್ರಾನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಇಂದು ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.
ಕಳೆದ 10 ದಿನಗಳ ಹಿಂದೆ ಕಾರಾಗೃಹದಲ್ಲಿ ಚಿಪ್ಸ್ ಪೊಟ್ಟಣದಲ್ಲಿ ಗಾಂಜಾ ಮಿಕ್ಸ್ ಮಾಡಿ ಕೊಡಲು ಯತ್ನಿಸಲಾಗಿತ್ತು.
ತುಂಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.