ರಿಪ್ಪನ್‌ಪೇಟೆ : ಪಟ್ಟಣದ ಯುವ ಕ್ರೀಡಾಪಟುವೊಬ್ಬ ಹತ್ತನೇ ಆವೃತ್ತಿಯ ಪ್ರೊ ಕಬಡ್ಡಿಗೆ ಆಯ್ಕೆ ಆಗಿದ್ದು ಮಲೆನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಪಟ್ಟಣದ ಸಮೀಪದ ಹಾಲುಗುಡ್ಡೆ ಗ್ರಾಮದ ಕಬಡ್ಡಿ ತಾರೆ ಗಗನ್ ಗೌಡ ಅವರು ಪ್ರೊ ಕಬಡ್ಡಿ 10ನೇ ಆವೃತ್ತಿಗೆ ಆಯ್ಕೆ ಆಗಿದ್ದಾರೆ.
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಡಿಎಂ ಉಜಿರೆ ವಿದ್ಯಾಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಕಬಡ್ಡಿ ಆಟಗಾರ ಗಗನ್ ಗೌಡ ಮುಂದೆ ಬರಲಿರುವ ಪ್ರೊ ಕಬಡ್ಡಿ ಹತ್ತನೇ ಆವೃತಿಯಲ್ಲಿ ಯುಪಿ ಯೋಧ ತಂಡದ ಪರವಾಗಿ ಆಡಲಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದ ರಾಜು ಹೆಚ್ ಎಸ್ ಮತ್ತು ಪೂರ್ಣಿಮಾ ದಂಪತಿಗಳ ಪುತ್ರನಾದ ಗಗನ್ ಗೌಡ ದೈಹಿಕ ಶಿಕ್ಷಕ ಕೃಷ್ಣಾನಂದ ರಾವ್ ಅವರ ಗರಡಿಯಲ್ಲಿ ಪಳಗಿದ್ದಾರೆ. ಹಲವು ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಮೈಸೂರಿನಲ್ಲಿ ನಡೆದ ಯುವ ಕಬ್ಬಡಿ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ನೇರವಾಗಿ ಪ್ರೊ ಕಬಡ್ಡಿ ಹತ್ತನೇ ಆವೃತ್ತಿಯಲ್ಲಿ ಯುಪಿ ಯೋಧ ತಂಡದ ಸ್ಟಾರ್ ಆಟಗಾರರಾಗಿ ಆಯ್ಕೆಯಾಗಿದ್ದಾರೆ.ಪ್ರೊ ಕಬಡ್ಡಿ ಹತ್ತನೇ ಆವೃತ್ತಿಗೆ ಯು ಪಿ ಯೋಧ ತಂಡದ ಪಾಲಾದ ಮೊದಲ ಆಟಗಾರ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.
ರಿಪ್ಪನ್‌ಪೇಟೆಯ ರಾಮಕೃಷ್ಣ ಶಾಲೆಯಲ್ಲಿ ದೈಹಿಕ ಶಿಕ್ಷಕ ವಿನಯ್ ರವರ ಗರಡಿಯಲ್ಲಿ ಕಬ್ಬಡಿ ಸ್ಟಾರ್ ಆಟಗಾರನಾಗಿದ್ದ ಗಗನ್ ಶಾಲಾ ಶಿಕ್ಷಣವನ್ನು ಪಡೆದು ಬಳಿಕ ಎಸ್ ಡಿ ಎಂ ಉಜಿರೆ ವಿದ್ಯಾಸಂಸ್ಥೆಯಲ್ಲಿ ಉನ್ನತ ವ್ಯಾಸಾಂಗ ಮಾಡುತಿದ್ದಾರೆ.
ಪ್ರೋ ಕಬ್ಬಡಿ ಲೀಗ್ ಟೂರ್ನಿಗೆ ಆಯ್ಕೆಯಾಗಿರುವ ನಮ್ಮೂರಿನ ಯುವ ಪ್ರತಿಭೆ ಗಗನ್ ಗೌಡ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಶುಭಾಶಯಗಳು.