ಕ್ಯಾಂಟರ್ ಮತ್ತು ಕಾರಿನ ನಡುವೆ ಡಿಕ್ಕಿ- ಓರ್ವ ಮಹಿಳೆ ಸಾವು..!
ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನಲ್ಲಿ 6 ಜನರಿದ್ದರು. ಬೇಗುವಳ್ಳಿ ಕೆರೆಯ ಸಮೀಪ ತಿರುವಿನಲ್ಲಿ ಎದುರಿನಿಂದ ಬಂದ ಕ್ಯಾಂಟರಿಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ಕ್ಯಾಂಟರಿನಲ್ಲಿದ್ದವರಿಗೆ ಅಪಾಯವಾಗಿಲ್ಲ.
ತೀರ್ಥಹಳ್ಳಿ : ತೀರ್ಥಹಳ್ಳಿ ಶಿವಮೊಗ್ಗ ನಡುವಿನ ಬೇಗುವಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಕ್ಯಾಂಟರ್ ಮತ್ತು ಮಾರುತಿ ಎರ್ಟಿಗಾ ಕಾರು ಮುಖಮುಖಿ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಸ್ಥಳದಲ್ಲೇ ಮೃತರಾಗಿದ್ದಾರೆ.
ಕಾಸರಗೋಡು ಸಮೀಪದ ಮಂಜೇಶ್ವರ ಮೂಲದ ಅಪ್ಸಾಬಿ (59) ಮೃತರಾದವರು. ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ಮಂಜೇಶ್ವರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನಲ್ಲಿ 6 ಜನರಿದ್ದರು. ಬೇಗುವಳ್ಳಿ ಕೆರೆಯ ಸಮೀಪ ತಿರುವಿನಲ್ಲಿ ಎದುರಿನಿಂದ ಬಂದ ಕ್ಯಾಂಟರಿಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ಕ್ಯಾಂಟರಿನಲ್ಲಿದ್ದವರಿಗೆ ಅಪಾಯವಾಗಿಲ್ಲ.
ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.