ಕಲಾ ಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷ ಗ್ಯಾರೇಜ್ ರಾಮು ನಿಧನ

ಕಲಾ ಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷ ಗ್ಯಾರೇಜ್ ರಾಮು ನಿಧನ

ಕನ್ನಡ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರಾಮಚಂದ್ರ (54) ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು,ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ಯಾರೇಜ್ ರಾಮು ಎಂದೇ ಪ್ರಸಿದ್ದರಾಗಿದ್ದ ಅವರು ಜನಮನ್ನಣೆ ಗಳಿಸಿದ್ದರು.

ರಿಪ್ಪನ್ ಪೇಟೆ : ಕಲಾ ಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಹೊಸನಗರ ರಸ್ತೆಯ ನಿವಾಸಿ ರಾಮಚಂದ್ರ (ಗ್ಯಾರೇಜ್ ರಾಮು) ಅನಾರೋಗ್ಯದ. ಹಿನ್ನಲೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ರಾತ್ರಿ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನಲೆಯಲ್ಲಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ರಾತ್ರಿ 9 ಗಂಟೆಯ ಸಮಯದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕನ್ನಡ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ರಾಮಚಂದ್ರ (54) ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು,ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ಯಾರೇಜ್ ರಾಮು ಎಂದೇ ಪ್ರಸಿದ್ದರಾಗಿದ್ದ ಅವರು ಜನಮನ್ನಣೆ ಗಳಿಸಿದ್ದರು.

ಮೃತದೇಹವನ್ನು ಮಂಗಳವಾರ ಬೆಳಿಗ್ಗೆ ಹೊಸನಗರ ರಸ್ತೆಯಲ್ಲಿರುವ ಮೃತರ ಸ್ವಗೃಹಕ್ಕೆ ಕರೆತರಲಾಗುತಿದ್ದು ನಾಳೆ ಮಧ್ಯಾಹ್ನದ ನಂತರ ಹಿಂದೂ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ :

ಕನ್ನಡಪರ ಹೋರಾಟಗಾರ ರಾಮಚಂದ್ರ ನಿಧನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ , ಮಾಜಿ ಸಚಿವ ಹರತಾಳು ಹಾಲಪ್ಪ , ಮುಖಂಡರಾದ ಕಲಗೋಡು ರತ್ನಾಕರ್ , ಬಿ ಪಿ ರಾಮಚಂದ್ರ , ಅರ್ ಎ ಚಾಬುಸಾಬ್ ,ಸುಧೀಂದ್ರ ಪೂಜಾರಿ, ಎಂ ಬಿ ಮಂಜುನಾಥ್ , ಸುರೇಶ್ ಸಿಂಗ್ , ಅಮೀರ್ ಹಂಜಾ , ಅಸೀಪ್ ಭಾಷಾ , ನಿರೂಪ್ ಕುಮಾರ್ , ರವೀಂದ್ರ ಕೆರೆಹಳ್ಳಿ , ಪಿ ರಮೇಶ್ , ಸುಂದರೇಶ್ ಕೆರೆಹಳ್ಳಿ , ಆನಂದ್ ಮೆಣಸೆ , ಉಬೇದುಲ್ಲಾ ಷರೀಫ್ , ಉಮಾಕರ್  ಸಂತಾಪ ಸೂಚಿಸಿದ್ದಾರೆ..