Headlines

ತೀರ್ಥಹಳ್ಳಿ : ಹಾಡಹಗಲೇ ಜನಸಮೂಹದ ಮಧ್ಯೆ ತಲ್ವಾರ್ ಅಬ್ಬರ – ಮೂವರಿಗೆ ಗಾಯ|ಕುಡಿದ ಮತ್ತಿನಲ್ಲಿ ಮಂಗಾಟcrime news

ತೀರ್ಥಹಳ್ಳಿ : ಅಶ್ಲೀಲ ವೀಡಿಯೋ ವೈರಲ್ ಪ್ರಕರಣದಲ್ಲಿ ಇತ್ತೀಚೆಗೆ ರಾಜ್ಯಾದ್ಯಂತ ಸುದ್ದಿಯಾಗಿದ್ದ ಪಟ್ಟದಲ್ಲಿ ಹಾಡಹಗಲೇ ತಲ್ವಾರ್ ಗಳು ಝಳಪಿಸಿದ್ದು ನಾಲ್ವರು ಯುವಕರು ಮೂವರ ಮೇಲೆ ಏಕಾಏಕಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಆಗುಂಬೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಭರಣ ಜ್ಯುವೆಲ್ಲರಿ ಬಳಿ ರಾಷ್ಟ್ರೀಯ ಹೆದ್ದಾರಿಯ ಮಧ್ಯ ರಸ್ತೆಯಲ್ಲಿ ತಲ್ವಾರ್ ಹಿಡಿದು ಯುವಕರು ಕುಡಿದ ಮದ್ಯದ ಮತ್ತಿನಲ್ಲಿ ಇಬ್ಬರು ಯುವಕರ ಮೇಲೆ ಬೇಕಾಬಿಟ್ಟಿ ತಲ್ವಾರ್ ಬೀಸಿದ್ದಾರೆ.

ಈ ಘಟನೆಯಲ್ಲಿ ಜೀವಿತ್ ಹಾಗೂ ಆಫ್ರೋಜ್ ಎಂಬ ಯುವಕರಿಗೆ ಪೆಟ್ಟಾಗಿದೆ.

ಮತ್ತೊಬ್ಬ ಯುವಕ ರಸ್ತೆ ದಾಟುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ನಾಲ್ವರು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ರಸ್ತೆಯಲ್ಲೇ ತಲ್ವಾರ್ ಝಳಪಿಸಿದ್ದಾರೆ.

ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Leave a Reply

Your email address will not be published. Required fields are marked *