Headlines

ವಿಜೃಂಭಣೆಯಿಂದ ಜರುಗಿದ ಕೆಂಚನಾಲ ಮಾರಿ ಜಾತ್ರೆ|Kenchanala

ವಿಜೃಂಭಣೆಯಿಂದ ಜರುಗಿದ  ಕೆಂಚನಾಲ ಮಾರಿ ಜಾತ್ರೆ 

ರಿಪ್ಪನ್‌ಪೇಟೆ : ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬ ದೇವಿಯ  ಮಳೆಗಾಲದ ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಾಜ್ಯದ ಹಲವೆಡೆಯಿಂದ, ನೆರೆ ರಾಜ್ಯ ಹಾಗೂ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿ ದೇವಿಯ ದರ್ಶನ ಪಡೆದರು.


ಕೆಂಚನಾಲ ಗ್ರಾಮದಲ್ಲಿ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆ ಇತಿಹಾಸ-ಪುರಾಣ ಪ್ರಸಿದ್ಧ ಜಾತ್ರೆ ಆಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಜಾತ್ರೆಯು ಪ್ರತಿ ವರ್ಷ ಎರಡು ಬಾರಿ ನಡೆಯುತ್ತದೆ. ಕರ್ನಾಟಕದ ಯಾವುದೇ ಭಾಗದಲ್ಲಿ ವರ್ಷದಲ್ಲಿ ಮಾರಿಕಾಂಬಾ ಜಾತ್ರೆ  ಎರಡು ಬಾರಿ ನಡೆಯುವುದಿಲ್ಲ ಆದರೆ ಕೆಂಚನಾಲ ಗ್ರಾಮದಲ್ಲಿ ಮಾತ್ರ ವರ್ಷಕ್ಕೆ ಎರಡು  ಶ್ರೀ ಮಾರಿಕಾಂಬ ಜಾತ್ರೆ ನಡೆಯುತ್ತದೆ.


ಉತ್ತಮ ಆರೋಗ್ಯ ರೋಗ-ರುಜಿನಗಳು ಬರದಂತೆ. ತಾವು ಬೆಳೆದ ಕೃಷಿ ಮತ್ತು ಕೃಷಿ ಉತ್ಪನ್ನಗಳು. ಸಾಕು ಪ್ರಾಣಿಗಳ ಸಂರಕ್ಷಣೆ. ಮಕ್ಕಳಾಗದಿದ್ದರೆ ಮಕ್ಕಳಾಗುವ ಬಗ್ಗೆ ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು  ಭಕ್ತರು ಹರಕೆಯನ್ನು ಹೊರುತ್ತಾರೆ. ಮಾರಿಕಾಂಬ ದೇವಿಯ ದರ್ಶನದಿಂದ ಲಕ್ಷಾಂತರ ಜನರು ಒಳಿತನ್ನು ಕಂಡಿದ್ದಾರೆ, ಕಾಣುತ್ತಲೂ ಇದ್ದಾರೆ.


ಈ ಸಂಧರ್ಭದಲ್ಲಿ ತಹಶೀಲ್ದಾರ್ ಡಿ ಜಿ ಕೋರಿ ,ಉಪತಹಶೀಲ್ದಾರ್ ಹುಚ್ಚುರಾಯಪ್ಪ ,ದೇವಸ್ಥಾನ ಸಮಿತಿ ಅಧ್ಯಕ್ಷರಾದ ಬಸವರಾಜ್, 
ದೇವಸ್ಥಾನ ಆಡಳಿತ ಸಮಿತಿ ಸದಸ್ಯರುಗಳು,ಕಂದಾಯ ಇಲಾಖೆ ,ಮುಜರಾಯಿ ಇಲಾಖೆ ಅಧಿಕಾರಿಗಳು ಇದ್ದರು.


ರಕ್ಷಣ ಇಲಾಖೆಯ ರಿಪ್ಪನ್‌ಪೇಟೆ ಪಿಎಸ್ ಐ ಎಸ್ ಪಿ ಪ್ರವೀಣ್ ,ಹೊಸನಗರ ಪಿಎಸ್ ಐ ಶಿವಾನಂದ್ ಕೆ ಹಾಗೂ ಸಿಬ್ಬಂದಿಗಳು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದರು.

Leave a Reply

Your email address will not be published. Required fields are marked *