ರಿಪ್ಪನ್ಪೇಟೆ ಠಾಣೆಯ“ನೂತನ ಪಿಎಸ್ಐ ಅಗಿ ಎಸ್.ಪಿ.ಪ್ರವೀಣ್ ಅಧಿಕಾರ ಸ್ವಿಕಾರ’’
ರಿಪ್ಪನ್ಪೇಟೆ;-ದಾವಣಗೆರೆ ಜಿಲ್ಲೆಯ ನ್ಯಾಮತಿ ಠಾಣೆಯಿಂದ ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದ ಪಿಎಸ್ಐ ಪ್ರವೀಣ್ ಎಸ್ ಇಂದು ಅಧಿಕಾರ ಸ್ವೀಕಾರ ಮಾಡಿದರು.
ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಾನಂದ ಕೋಳಿ ಹೊಸನಗರ ಠಾಣೆಗೆ ವರ್ಗಾವಣೆಗೊಂಡಿದ್ದು ಆ ಸ್ಥಳಕ್ಕೆ ದಾವಣೆಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಎಸ್ ವರ್ಗಾವಣೆಗೊಂಡಿದ್ದರು.
ಆಧಿಕಾರ ಸ್ವೀಕಾರದ ನಂತರ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ ಈ ಹಿಂದಿನ ಪಿಎಸ್ಐ ಶಿವಾನಂದಕೋಳಿಯವರು ಟ್ರಾಫಿಕ್ ಕಿರಿಕಿರಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಅದೇ ರೀತಿಯಲ್ಲಿಯೆ ನಾನು ಮುಂದುವರಿಸುವುದಾಗಿ ತಿಳಿಸಿ ತ್ರಿಬಲ್ ರೈಡ್ ಮಾಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ಶಾಲಾ ಕಾಲೇಜ್ ಪ್ರಾರಂಭದ ಮತ್ತು ಬಿಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಳಗ್ಗೆ ಮತ್ತು ಸಂಜೆ ನಮ್ಮ ಸಿಬ್ಬಂದಿ ವರ್ಗವನ್ನು ವಾಚ್ ಮಾಡಲು ನಿಯೋಜನೆ ಮಾಡುವ ಬಗ್ಗೆ ವಿಶೇಷ ಅಸಕ್ತಿ ವಹಿಸುವುದಾಗಿ ವಿವರಿಸಿದರು.
ಹಾಗೂ ಶಾಲಾ ಕಾಲೇಜ್ ಹತ್ತಿರ ಆಕ್ರಮ ಚಟುವಟಿಕೆ ನಡೆಸುವ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

