ಸಮಯಕ್ಕೆ ಸರಿಯಾಗಿ ಹಾಜರಾಗದ ವೈದ್ಯರು ಟಿಟಿ ಚುಚ್ಚುಮದ್ದಿಲ್ಲದೇ ರೋಗಿಗಳ ಕೂಗು ಕೇಳೋರಿಲ್ಲದತಾಂಗಿರುವ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಥೆ………….!
ರಿಪ್ಪನ್‌ಪೇಟೆ;- ಜಾನುವಾರು ಹೊಡೆಯಲು ಹೋಗಿ ಅಕಸ್ಮಿಕವಾಗಿ ಬಿದ್ದು ಕಾಲು ಮುರಿದುಕೊಂಡ ಯುವತಿಯ ನೆರಳಾಟ ನಾಯಿ ಕಚ್ಚದ ಮಹಿಳೆಗೆ ಟಿಟಿ ಚುಚ್ಚುಮದ್ದಿಲ್ಲದೇ ಇರುವುದು ಇನ್ನೂ ವೈದ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಹಾಜರಾಗದೇ ಇರುವುದರಿಂದ ರೋಗಿಗಳ ನರಳಾಟ ಕೇಳೋರಿಲ್ಲದಂತಾಗಿರುವುದು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ನೀಡುವರ‍್ಯಾರು ಎನ್ನುವಂತಾಗಿದೆ.
ಇಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಇಲ್ಲಿನ ಅಸ್ಪತ್ರೆಗೆ ಜಾನುವಾರು ಹೊಡೆಯಲು ಹೋದ ಯುವತಿ ಅಕಸ್ಮಿಕವಾಗಿ ಬಿದ್ದು ಬಲಭಾಗದ ತೊಡೆ ತೀವ್ರ ಗಾಯಗೊಂಡಿದ್ದು ಕಾಲಿನಲ್ಲಿ ರಕ್ತ ಸುರಿಯುತ್ತಿದ್ದರೂ ಕೂಡಾ ಅಸ್ಪತ್ರೆಯ ಸಿಬ್ಬಂದಿಗಳು ವೈದ್ಯರಿಲ್ಲ ಎಂದು ಪ್ರಥಮ ಚಿಕಿತ್ಸೆ ನೀಡದೇ ನಿರ್ಲಕ್ಷö್ಯದಿಂದ ನೋಡಿಕೊಂಡು ಓಡಾಡುತ್ತಿದ್ದರು. ಅಲ್ಲದೇ ನಾಯಿ ಕಚ್ಚಿದ ಮಹಿಳೆಯೊಬ್ಬರು ಟಿಟಿ ಚುಚ್ಚುಮದ್ದು ಪಡೆಯಲು ಹೋದರೆ ನಮ್ಮಲ್ಲಿ ಟಿಟಿ ಇಂಜೆಕ್ಷನ್ ಇಲ್ಲ ಖಾಸಗಿ ಮೆಡಿಕಲ್‌ಗೆ ಚೀಟಿ ಕೊಟ್ಟು ತರುವಂತೆ ಕಳುಹಿಸಿದ ಪ್ರಸಂಗ ಸಹ ನಡೆಯುತ್ತಿದ್ದು ಸುಸಜ್ಜಿತ ಪ್ರಾಥಮಿಕ ಅರೋಗ್ಯ ಕೇಂದ್ರವಿದ್ದರೂ ಸರಿಯಾದ ಸಮಯಕ್ಕೆ ವೈದ್ಯಾಧಿಕಾರಿಗಳು ಹಾಜರಾಗದೇ ಇರುವುದರಿಂದ ಈ ಆಸ್ಪತ್ರೆ ಆನಾಥವಾಗುವಂತಾಗಿದೆ.
ಸುತ್ತಮುತ್ತ 76 ಹಳ್ಳಿಗಳು ಈ ಪ್ರಾಥಮಿಕ ಆರೋಗ್ಯ ಕೇಂದ್ರವ್ಯಾಪ್ತಿಗೆ ಒಳಪಡುತ್ತಿದ್ದು ಸುಮಾರು 45 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು ಅರಸಾಳು-ಕೆಂಚನಾಲ-ಬೆಳ್ಳೂರು-ಹೆದ್ದಾರಿಪುರ-ಅಮೃತ-ಚಿಕ್ಕಜೇನಿ-ಬಾಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬರುವ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಗೋಡು ತಿಮ್ಮಪ್ಪ ಹರತಾಳು ಹಾಲಪ್ಪ ಹೀಗೆ ಇಬ್ಬರು ಪ್ರಮುಖ ರಾಜಕೀಯ ನಾಯಕರು ಆಯ್ಕೆಯಾಗಿ ಬಂದರು ಈ ಸರ್ಕಾರಿ ಅಸ್ಪತ್ರೆಗೆ ಕಾಯಕಲ್ಪ ದೊರಕಿಸುವಲ್ಲಿ ಸಂಪೂರ್ಣ ವಿಫರಾಗಿದ್ದಾರೆ.
ಇಲ್ಲಿನ ಸರ್ಕಾರಿ ಅಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ದ ಪ್ರತಿಭಟನೆಗಳು ಹೋರಾಟಗಳು ನಡೆಸಲಾದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಈ ವೈದ್ಯಾಧಿಕಾರಿ ಬದಲಾಯಿಸಿದರೆ ಈ ಊರಿಗೆ ಡಾಕ್ಟರ್‌ಗಳು ಬರಲು ಸುತರಾಂ ಒಪ್ಪುವುದಿಲ್ಲ ನೀವು ಯಾರಾದರೂ ಡಾಕ್ಟರ್ ಬರುತ್ತಾರೆಂದು ಹೇಳಿದರೆ ನಾನು ಇರುವ ವೈದ್ಯಾಧಿಕಾರಿಯನ್ನು ಬದಲಾಯಿಸುತ್ತೇವೆಂದು ಇಬ್ಬರು ಜನನಾಯಕರು ದೂರು ನೀಡಲು ಹೋದವರಿಗೆ ಸಮಜಾಯಿಸಿ ನೀಡಿ ಕಳುಹಿಸಿದ್ದಾರೆ ಹಾಗಾದರೆ ಇರುವ ವೈದ್ಯಾಧಿಕಾರಿಗಳಿಗೆ ಲಂಗು ಲಗಾಮು ಇಲ್ಲದೇ ಎಷ್ಟು ಹೊತ್ತಿಗೆ ಬರುವುದು ಹೋಗುವುದಾದರೆ ಈ ಭಾಗದ ಅನಾರೋಗ್ಯ ಪೀಡಿತರ ಮತ್ತು ರೋಗಿಗಳ ಹಾಗೂ ತುರ್ತು ಸಂದರ್ಭದಲ್ಲಿ ಏನಾದರೂ ಅವಘಡಗಳು ಸಂಭವಿಸಿದರೆ ಏನು ಗತಿಯೆಂದರೆ ದೇವರೇ ಗತಿಯನ್ನುವಂತಾಗಿದೆ.
ಇನ್ನಾದರೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಇತ್ತ ಗಮಹರಿಸಿ ತಕ್ಷಣ ಮಲೆನಾಡಿನ ರೈತನಾಗರೀಕರ ತುರ್ತು ಸೇವೆಗೆ ಸ್ಪಂದಿಸುವರೇ ಕಾದುನೋಡುವಂತಾಗಿದೆ.
ಅಲ್ಲದೆ ಔಷಧಿ ಚುರ್ಚುಮದ್ದಿನ ಸಮಸ್ಯೆಗೆ ಪರಿಹಾರ ಕಲ್ಪಿಸುವುದರೊಂದಿಗೆ ಪಾರ್ಮಸಿಗಳು ಸಹ ಈ ಅಸ್ಪತ್ರೆಗೆ ನಿಯೋಜತರಾಗಿದ್ದು ವಾರದ ಮೂರುದಿನ ಎಂದು ಹೇಳಿಕೊಂಡು ಸಮಯಕ್ಕೆ ಸರಿಯಾಗಿ ಹಾಜರಾಗದೇ ಬೇಕಾಬಿಟ್ಟಿ ಬಂದು ಹೋಗುವುದರಿಂದಾಗಿ ಸಕಾಲದಲ್ಲಿ ಔಷಧಿಗಳು ಮಾತ್ರೆಗಳು ಚುರ್ಚುಮದ್ದುಗಳು ಇಲ್ಲದೇ ಖಾಸಗಿ ಅಸ್ಪತ್ರೆಗಳಿಗೆ ಅಲೆಯುವಂತಾಗಿದೆ ಎಂದು ತಮ್ಮ ಅಸಹಾಯಕತೆಯನ್ನು ಮಾದ್ಯಮಗಳ ಮುಂದೆ ರೋಗಿಗಳು ಹಂಚಿಕೊಂಡರು.
ವರದಿ : ಕೆ ಎಂ ಬಸವರಾಜ್