ಆಯನೂರಿನಲ್ಲಿ ಇಂದು ಮೋದಿ ಹವಾ , ಮತಬೇಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತೊಡಗಿದ್ದಾರೆ. ಕುವೆಂಪು, ಸಿಗಂಧೂರು ದೇವಿಯನ್ನು ನೆನೆದಂತಹ ನರೇಂದ್ರ ಮೋದಿಯವರು, ಶಿವಮೊಗ್ಗ ಜನತೆಗೆ ನಮಸ್ಕಾರ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿಯಲ್ಲಿ ಇಂದು ಬಿಜೆಪಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತಬೇಟೆಯಲ್ಲಿ ತೊಡಗಿದ್ದಾರೆ. ಈ ವೇಳೆ ಮಾತನಾಡಿದಂತ ಅವರು, ಇಷ್ಟೊಂದು ಜನರನ್ನು ನೋಡಿದ್ರೆ ಸಂತೋಷವಾಗುತ್ತಿದೆ. ರೋಡ್ ಶೋ ನಲ್ಲಿ ಹೂ ಮಳೆ ಸುರಿಸಿದ್ದಾರೆ. ಕರ್ನಾಟಕದಲ್ಲಿ ಎಲ್ಲಿ ಹೋದರು ಬಿಜೆಪಿಗೆ ಬೆಂಬಲ ಸಿಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದರು.
ಮಲೆನಾಡಿನ ಮಡಿಲು, ಸೌಂದರ್ಯದ ಹೊನಲು ಎಂಬುದಾಗಿ ಗುಣಗಾನ ಮಾಡಿದಂತ ಅವರು, ಶಿವಮೊಗ್ಗ ಜನತೆಗೆ, ಸಿಗಂಧೂರು ದೇವಿಗೆ ನಮಸ್ಕಾರ ಹೇಳಿದರು. ಅಲ್ಲದೇ ಕುವೆಂಪು ಅವರನ್ನು ನೆನಪು ಮಾಡಿಕೊಂಡದರು.
ಇದೇ ವೇಳೆ ಈ ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಮಾಜಿ ಸಿಎಂ ಯಡಿಯೂರಪ್ಪನವರ ಹುಟ್ಟುಹಬ್ಬದದಂದು ಶಿವಮೊಗ್ಗಕ್ಕೆ ಆಗಮಿಸಿದ್ದೆ. ಈ ಬಾರಿ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಕಂಗಾಲಾಗಿ ಹೋಗಿದ್ದು, ಸುಳ್ಳಿನ ಗ್ಯಾರೆಂಟಿ ಘೋಷಣೆ ಮಾಡಿದ್ದಾರೆ. ಬಲೂನ್ನಂತೆ ಕಾಂಗ್ರೆಸ್ ಸುಳ್ಳಿನ ಗಾಳಿ ಬಿಡುತ್ತಿದೆ. ಕರ್ನಾಟಕದ ಅಭಿವೃದ್ಧಿಯನ್ನು ಕಾಂಗ್ರೆಸ್ ಪಕ್ಷ ಎಂದೂ ಬಯಸುವುದಿಲ್ಲ. ಭ್ರಷ್ಟಾಚಾರದ ಮೂಲಕ ಕಾಂಗ್ರೆಸ್ ನಾಯಕರು ಶ್ರೀಮಂತರಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ದಶಕಗಳ ಕಾಲ ಹಿಂದೆ ಕೊಂಡೊಯ್ದಿತ್ತು. 80% ಭ್ರಷ್ಟಾಚಾರ ಮಾಡುವ ಕಾಂಗ್ರೆಸ್ ನಿಂದ ಏನು ಅಭಿವೃದ್ಧಿ ಮಾಡಲು ಸಾಧ್ಯ? ಯುವಕರ ಭವಿಷ್ಯವನ್ನು ಕಾಂಗ್ರೆಸ್ ರೂಪಿಸಲು ಸಾಧ್ಯವೇ ಎಂಬುದನ್ನು ರಾಜ್ಯದ ಹೊಸ ಮತದಾರರಿಗೆ ಕೇಳಲು ಬಯಸುತ್ತೇನೆ. ದೇಶದ ಯುವಕರ ಬಗ್ಗೆ ಕಾಂಗ್ರೆಸ್ ಯಾವತ್ತು ಯೋಚಿಸಿಲ್ಲ ಎಂದು ಹೇಳಿದರು.
ನಾನು ಗುಜರಾತ್ ಸಿಎಂ ಆಗಿದ್ದಾಗ ಯಡಿಯೂರಪ್ಪ ಕರ್ನಾಟಕದ ಸಿಎಂ ಆಗಿದ್ದರು. ಈ ವೇಳೆ ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕಾಗಿ ಯಡಿಯೂರಪ್ಪನವರು ದೆಹಲಿಗೆ ನಿಯೋಗ ತೆಗೆದುಕೊಂಡು ಬಂದಿದ್ದರು. ಶಿವಮೊಗ್ಗದ ರೈತರ ಕಲ್ಯಾಣಕ್ಕಾಗಿ ಯಡಿಯೂರಪ್ಪ ಶ್ರಮಿಸಿದ್ದಾರೆ. ಯಾವುದೇ ಕಾರಣಕ್ಕೂ ಅಡಕೆ ಬೆಳಗಾರರು ಆಂತಕಕ್ಕೆ ಒಳಗಾಗಬೇಡಿ. ಹಲವು ಯೋಜನೆಗಳ ಮೂಲಕ ರೈತರ ಸಮಸ್ಯೆಗೆ ಪರಿಹಾರ ಕೈಗೊಂಡಿದ್ದೇವೆ ಎಂದು ಭರವಸೆ ನೀಡಿದರು.
ಯುವಕರಿಗೆ ಉದ್ಯೋಗ ಸೃಷ್ಟಿ
ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರಾಜ್ಯದಲ್ಲಿ ಹೊಸ ಹೊಸ ಕಾಲೇಜುಗಳ ನಿರ್ಮಾಣವಾಗಿವೆ. ಯುವ ಜನತೆಯನ್ನು ಕಾಂಗ್ರೆಸ್ ವಂಚಿಸಿದರೆ, ಬಿಜೆಪಿ 13 ಲಕ್ಷಕ್ಕೂ ಹೊಸ ಉದ್ಯೂಗಳನ್ನು ಸೃಷ್ಟಿಸಿದೆ. ಪ್ರತಿ ಎರಡು ದಿನಗಳಿಗೆ ಒಂದೊಂದು ಕಾಲೇಜಿ ನಿರ್ಮಾಣವಾಗುತ್ತಿದ್ದರೆ, ಎರಡು ವಾರಗಳಿಗೆ ಒಂದರಂತೆ ವಿಶ್ವ ವಿದ್ಯಾನಿಲಯಗಳು ತಲೆ ಎತ್ತಿವೆ. ಆಟೋ ಮೊಬೈಲ್ ಫ್ಯಾಕ್ಟರ್ ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.