ಬೈಕ್ ಮತ್ತು ಆಂಬ್ಯುಲೆನ್ಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದಲ್ಲಿ ನಡೆದಿದೆ.
ಸಾವನ್ನಪ್ಪಿದ ಯುವಕನನ್ನು ನ್ಯಾಮತಿ ತಾಲೂಕಿನ ಪುನೀತ್(26) ಅಲಿಯಾಸ್ ಕುಲ್ಡ ಪುನೀತ್ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಆಯನೂರಿನ ಚೆನ್ನಳ್ಳಿ ಕ್ರಾಸ್ ಬಳಿ ಸಾಗರದಿಂದ ಬರುತ್ತಿದ್ದ ಸರ್ಕಾರಿ ಅಂಬ್ಯುಲೆನ್ಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಶಿವಮೊಗ್ಗದಿಂದ ಆಯನೂರು ಮೂಲಕ ಬೆಳಗುತ್ತಿಗೆ ಹೋಗುವಾಗ ಈ ಘಟನೆ ಸಂಭವಿಸಿದೆ. ಪುನೀತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪುನೀತ್ ಬೆಳಗುತ್ತಿಯಲ್ಲಿ ಕೋಳಿ ಮಾಂಸದ ಅಂಗಡಿ ನಡೆಸುತಿದ್ದರು ಎನ್ನಲಾಗುತ್ತಿದೆ.
ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.