Headlines

SSLC ಫಲಿತಾಂಶ ಪ್ರಕಟ : ಚಿತ್ರದುರ್ಗ ಪ್ರಥಮ,ಯಾದಗಿರಿಗೆ ಕೊನೆ ಸ್ಥಾನ – ರಾಜ್ಯದಲ್ಲಿಯೇ 625ಕ್ಕೆ 625 ಪಡೆದ ನಾಲ್ವರು ವಿದ್ಯಾರ್ಥಿಗಳಿವರು!


ರಾಜ್ಯದಲ್ಲಿ ನಡೆದ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಅನೇಕ ಮಂದಿ ಪರೀಕ್ಷಾ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಗೈಯುವ ಮೂಲಕ ಊರಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

2022-23 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ (SSLC Exam Results ) ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ 83.89 ಫಲಿತಾಂಶ ಬಂದಿದೆ.

ಈ ಬಾರಿ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.ಪ್ರಕಟಗೊಂಡಿದ್ದು, ಈ ಬಾರಿ ಶೇ 83.89 ಫಲಿತಾಂಶ ಬಂದಿದೆ.ಶಿವಮೊಗ್ಗ ಜಿಲ್ಲೆ 29ನೇ ಸ್ಥಾನದಲ್ಲಿದೆ.

ಈ ಬಾರಿ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ (96.80 %) ಪಡೆದುಕೊಂಡಿದ್ದು, ಮಂಡ್ಯ ಎರಡನೇ ಸ್ಥಾನ ಪಡೆದುಕೊಂಡಿದೆ. ಹಾಸನ ಜಿಲ್ಲೆ ಮೂರನೇ ಸ್ಥಾನ ಪಡೆದುಕೊಂಡಿದೆ. ಯಾದಗಿರಿ ಕೊನೆ ಸ್ಥಾನ ಪಡೆದುಕೊಂಡಿದೆ. ರಾಜ್ಯದ 4 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ.

ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ 7,00,619 ವಿದ್ಯಾರ್ಥಿಗಳು ಪಾಸ್ ಆಗಿದ್ದು, ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ.
3,41,108 ಬಾಲಕರು, 3,59,511 ಬಾಲಕಿಯರು ಪಾಸಾಗಿದ್ದಾರೆ. SSLC ಫಲಿತಾಂಶದಲ್ಲಿ A ಗ್ರೇಡ್ ಪಡೆದ ಜಿಲ್ಲೆಗಳು ಸಂಖ್ಯೆ-23 ಹಾಗೂ SSLC ಫಲಿತಾಂಶದಲ್ಲಿ ಬಿ ಗ್ರೇಡ್ ಪಡೆದ ಜಿಲ್ಲೆಗಳು ಸಂಖ್ಯೆ 12 ಎಂಬುದಾಗಿ ತಿಳಿದು ಬಂದಿದೆ.2022-23 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ (SSLC Exam Results ) ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ 83.89 ರಷ್ಟು ಫಲಿತಾಂಶ ಬಂದಿದೆ.ಮಾರ್ಚ್ 31 ರಿಂದ ಆರಂಭವಾಗಿದ್ದ ಎಸ್‌ಎಸ್ ಎಲ್ ಸಿ ಪರೀಕ್ಷೆಗಳು ಏಪ್ರಿಲ್ 15 ಕ್ಕೆ ಮುಕ್ತಾಯಗೊಂಡಿದ್ದವು. ಎಸ್‌ಎಸ್ ಎಲ್ ಸಪರೀಕ್ಷೆಯನ್ನು 8.6 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಎಸ್‌ಎಸ್ ಎಲ್ ಸಿ ಮೌಲ್ಯಮಾಪನಕ್ಕೆ 62 ಸಾವಿರ ಶಿಕ್ಷಕರನ್ನು ನಿಯೋಜನೆ ಮಾಡಲಾಗಿತ್ತು.

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶವನ್ನು ಮಂಡಳಿಯ ಜಾಲತಾಣ https://karresults.nic.in ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಹೇಳಿದ್ದಾರೆ.

2023ರ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಮಂಡ್ಯ ಎರಡನೇ ಮತ್ತು ಹಾಸನ 3ನೇ ಸ್ಥಾನ ಪಡೆದಿದೆ. ಇಡೀ ರಾಜ್ಯದಲ್ಲಿ 625ಕ್ಕೆ 625 ಅಂಕವನ್ನು 4 ವಿದ್ಯಾರ್ಥಿಗಳು ಪಡೆದಿದ್ದಾರೆ.

4 ವಿದ್ಯಾರ್ಥಿಗಳು ಹೆಸರು ಮತ್ತು ಶಾಲೆಯ ಹೆಸರು:
ಭೂಮಿಕಾ- ನ್ಯೂ ಮೆಕಾಲೆ ಇಂಗ್ಲಿಷ್ ಹೈ ಸ್ಕೂಲ್ ಹೊಸೂರು ಮೈನ್ ರೋಡ್ ಬೆಂಗಳೂರು
ಯಶಸ್ ಗೌಡ- ಬಾಲಗಂಗಾಧರ ನಾಥ ಸ್ವಾಮೀಜಿ ಹೈ ಸ್ಕೂಲ್ ಚಿಕ್ಕ ಬಳ್ಳಾಪುರ
ಭೀಮನ ಗೌಡ ಹನುಮಂತ್ ಗೌಡ- ಆಕ್ಸ್ಫರ್ಡ್ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್, ಮುದ್ದೇಬಿಹಾಳ
ಅನುಪಮಾ ಶ್ರೀಶಲ್ ಹಿರೇಹೊಳಿ- ಶ್ರೀ ಕುಮಾರೇಶ್ವರ್ ಹೈ ಸ್ಕೂಲ್ ಬೆಳಗಾವಿ

Leave a Reply

Your email address will not be published. Required fields are marked *