ಹೊಂಬುಜ,ಮೂಲೆಗದ್ದೆ ಮತ್ತು ಮಳಲಿ ಶ್ರೀಗಳಿಂದ ಮತ ಚಲಾವಣೆ
ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಹೊಂಬುಜ ಮಠದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಸ್ವಾಮಿಗಳು ಹೊಸನಗರ ತಾಲೂಕಿನ ಹುಂಚ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮೂಲೆಗದ್ದೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ಹೊಸನಗರ ತಾಲೂಕಿನ ಬ್ರಹ್ಮೇಶ್ವರ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
		 
                         
                         
                         
                         
                         
                         
                         
                         
                         
                        